- ಈ ವರ್ಷ ಪ್ರೇಕ್ಷಕರ ಕಿವಿಗೆ ಕಚಕುಳಿ ನೀಡಿದ ಕನ್ನಡ ಚಿತ್ರದ ಸೂಪರ್ ಹಿಟ್ ಹಾಡುಗಳಿವು!
- ಸುಮಧುರ ಹಾಡುಗಳಿಗೆ ಮನಸೋತ ಪ್ರೇಕ್ಷಕರು
- ಸಿನಿಮಾ ಹಿಟ್ ಆಗದೇ ಇದ್ರೂ ಸಾಂಗ್ ಸೂಪರ್ ಹಿಟ್
2025 ರಲ್ಲಿ ಚಿತ್ರರಂಗಕ್ಕೆ ವಿಶೇಷ ಸುಮಧುರ ಹಾಡುಗಳು ಸೇರ್ಪಡೆಯಾಗಿದ್ದು, ಕೆಲವು ಸಿನಿಮಾಗಳು ಸೋತರೂ ಹಾಡುಗಳು ಪ್ರೇಕ್ಷಕರ ಕಿವಿಗಳನ್ನು ಇಂಪೇರಿಸಿದೆ. ಈ ವರ್ಷ 230ಕ್ಕೂ ಹೆಚ್ಚಿನ ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ. ಎಲ್ಲಾ ಸಿನಿಮಾಗಳನ್ನೂ ಸೇರಿಸಿ ಒಟ್ಟು 1000ಕ್ಕೂ ಹೆಚ್ಚು ಹಾಡುಗಳು ಪ್ರೇಕ್ಷಕರನ್ನು ಮೋಡಿ ಮಾಡಿದೆ.
‘ರೋರ್ ಆಫ್ ನರಸಿಂಹ’ Roar of Narasimha
ಹೊಂಬಾಳೆ ಫಿಲ್ಮ್ಸ್ Hombale Films ವಿತರಣೆ ಮಾಡಿದ್ದ ಮಹಾವತಾರ ನರಸಿಂಹ Mahavathara Narasimha ಆನಿಮೇಟೆಡ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿ ದಾಖಲೆ ಬರೆದ ಸಿನಿಮಾ ಈ ಸಿನಿಮಾದ ಎಲ್ಲಾ ಹಾಡುಗಳೂ ಹಿಟ್ ಆಗಿತ್ತು. ಅದರಲ್ಲೂ ‘ರೋರ್ ಆಫ್ ನರಸಿಂಹ’ ಹಾಡು ಎಲ್ಲೆಡೆ ಸದ್ದು ಮಾಡಿದ್ದು, ಸ್ಯಾಮ್ ಸಿಎಸ್ ಜೊತೆ ಅನಿರುದ್ಧ ಶಾಸ್ತ್ರಿ ಹಾಡಿದ ಈ ಹಾಡಿಗೆ ಸಖತ್ ಫ್ಯಾನ್ಸ್ ಹುಟ್ಟಿಕೊಂಡಿದ್ರು.
“45”ಚಿತ್ರದ ಪ್ರಮೋಷನ್ ಸಾಂಗ್ ‘Afro ತಪಾಂಗ್’Afro Thapang
ಅರ್ಜುನ್ ಜನ್ಯಾ Arjun Janya ನಿರ್ದೇಶನದ 45 ಚಿತ್ರದ ಪ್ರಮೋಷನ್ ಸಾಂಗ್ ‘Afro ತಪಾಂಗ್’ಹಾಡು ಪ್ರೇಕ್ಷಕರ ಹೃದಯ ಗೆದ್ದ ಹಾಡು. ಉಗಾಂಡದ ಘೆಟ್ಟೋ ಕಿಡ್ಸ್ ಜೊತೆ ಶಿವರಾಜ್ ಕುಮಾರ್ Shivaraj Kumar, ಉಪೇಂದ್ರ Upendra ಹಾಗೂ ರಾಜ್ ಬಿ ಶೆಟ್ಟಿ Raj B Shetty ಕುಣಿದು ಕುಪ್ಪಳಿಸಿರುವ ಈ ಹಾಡಿನ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಡಿಸೆಂಬರ್ 25ಕ್ಕೆ ಸಿನಿಮಾ ತೆರೆಗೆ ಬರಲಿದ್ದು, ಅರ್ಜುನ್ ಜನ್ಯಾ ಸ್ವತಃ ಟ್ಯೂನ್ ಹಾಕಿರುವ ಈ ಹಾಡಿಗೆ ಎಂ.ಸಿ. ಬಿಜ್ಜು ಮತ್ತು ನಿಶಾನ್ ರೈ ಸಾಹಿತ್ಯ ಬರೆದು ಹಾಡಿದ್ದಾರೆ.
ಮಾರ್ಕ್ ಚಿತ್ರದ ‘ಸೈಕೋ ಸೈತಾನ್’Psycho Sythan
ಕಿಚ್ಚ ಸುದೀಪ್ Kiccha Sudeep ಅಭಿನಯದ ಮಾರ್ಕ್ Mark ಸಿನಿಮಾ ಕ್ರಿಸ್ಮಸ್ ಸಂಭ್ರಮದಲ್ಲಿ ತೆರೆಗೆ ಬರಲಿದ್ದು, ಚಿತ್ರದ ‘ಸೈಕೋ ಸೈತಾನ್’ ಹಾಡು ಈಗಾಗಲೇ ಅಭಿಮಾನಿಗಳಿಗೆ ಭರ್ಜರಿ ಕಿಕ್ ಕೊಡುತ್ತಿದೆ. ಅಜನೀಶ್ ಲೋಕನಾಥ್ Ajaneesh Lokanath ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ ಅನೂಪ್ ಭಂಡಾರಿ Anup Bhandary ಸಾಹಿತ್ಯ ಬರೆದಿದ್ದು, ವಿಜಯ ಪ್ರಕಾಶ್ Vijaya Prakash ಅವರ ಧ್ವನಿಯಿದೆ.
ಇದ್ರೆ ನೆಮ್ದಿಯಾಗ್ ಇರ್ಬೇಕ್’Idre Nemdiyag Irbek
ಪ್ರಕಾಶ್ ನಿರ್ದೇಶನದ ಡೆವಿಲ್ Devil ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರದ ಆಲ್ಬಮ್ ಕೂಡ ಹಿಟ್ ಲಿಸ್ಟ್ ಸೇರಿದೆ. ‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ಹಾಡು ದರ್ಶನ್ Darshan ಅಭಿಮಾನಿಗಳ ಮನಸೋತ ಹಾಡು. ಜೊತೆಗೆ ಚಿತ್ರದ ರೊಮ್ಯಾಂಟಿಕ್ ಹಾಡು ಕೂಡ ಸಾಕಷ್ಟು ಗಮನ ಸೆಳೆದಿದೆ. ದೀಪಕ್ ಬ್ಲೂ ಗಾಯನಕ್ಕೆ ಅನಿರುದ್ಧ ಶಾಸ್ತ್ರಿ ಸಾಹಿತ್ಯ ಬರೆದಿದ್ದಾರೆ.
ಹಾಡಲ್ಲೂ ಗೆದ್ದ ಸು ಫ್ರಂ ಸೋ Su From So
ರಾಜ್ ಬಿ ಶೆಟ್ಟಿ ನಿರ್ಮಾಣದ ಸು ಫ್ರಮ್ ಸೋ ಈ ವರ್ಷದ ಅಚ್ಚರಿಯ ಗೆಲುವು ಎನ್ನಬಹುದು. ಕೇವಲ ನಾಲ್ಕೈದು ಕೋಟಿ ಬಜೆಟ್ನ ಈ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತು. ಸುಮೇದ್ ಕೆ. ಸಂಗೀತ ಸಂಯೋಜನೆಯ ‘DANKS ANTHEM’ ಬಂದರೋ ಬಂದರೋ ಭಾವ ಬಂದರೋ ಹಾಡು ಅನುರಾಗ್ ಕುಲಕರ್ಣಿ ಅವರ ಧ್ವನಿ ಇದೆ.
ಕೆಡಿ ಚಿತ್ರ ‘ಶಿವನೆ ನಿನ್ ಆಟ’ Shivane nin Aata
ಜೋಗಿ ಪ್ರೇಮ್ Jogi Prem ನಿರ್ದೇಶನದ ಕೆಡಿ ಸಿನಿಮಾ ಈ ವರ್ಷ ತೆರೆಗೆ ಬರದಿದ್ದರೂ, ಚಿತ್ರದ ಎರಡು ಹಾಡುಗಳು ಈಗಾಗಲೇ ಹಿಟ್ ಆಗಿವೆ. ಅರ್ಜುನ್ ಜನ್ಯಾ ಸಂಗೀತದ ‘ಶಿವನೆ ನಿನ್ ಆಟ’ಹಿಟ್ ಆಗಿದೆ., ಮಂಜುನಾಥ್ ಬಿಎಸ್ ಸಾಹಿತ್ಯಕ್ಕೆ ಪ್ರೇಮ್ ಹಾಗೂ ಕೈಲಾಶ್ ಖೇರ್ ಧ್ವನಿ ನೀಡಿದ್ದಾರೆ.
ಇನ್ನುಳಿದಂತೆ ಕಾಂತಾರ-1 Kanthara Chapter 1 ಸಿನಿಮಾ ಬಾಕ್ಸಾಫೀಸ್ನಲ್ಲಿ ಹಿಟ್ ಆಯಿತು. ಅಜನೀಶ್ ಲೋಕನಾಥ್ ಸಂಗೀತದ ‘ಬ್ರಹ್ಮಕಲಶ’Brahmakalasha ಹಾಡು ಎಲ್ಲಾ ಭಾಷೆಗಳಲ್ಲಿ ಹಿಟ್ ದಾಖಲೆ ಬರೆದರೆ, ಬ್ರ್ಯಾಟ್ Brat ಸಿನಿಮಾದ ‘ನಾನೇ ನೀನಂತೆ’Naane Neenanthe ಸಿನಿರಸಿಕರ ಮನಗೆದ್ದಿದೆ. ಅರ್ಜುನ್ ಜನ್ಯಾ ಸಂಗೀತದಲ್ಲಿ ಸಿದ್ಧ್ ಶ್ರೀರಾಮ್ ಮತ್ತು ಲಹರಿ ಮಹೇಶ್ ಈ ಹಾಡು ಹಾಡಿದ್ದರು.


