ಓಟಿಟಿಯಲ್ಲಿ ರಿಲೀಸಾಗಿದೆ ಕನ್ನಡದ ಈ ಸಿನಿಮಾಗಳು

Date:

  • ಓಟಿಟಿಯಲ್ಲಿ ರಿಲೀಸಾಗಿದೆ ಕನ್ನಡದ ಈ ಸಿನಿಮಾಗಳು
  • ಹೊಸ ವರ್ಷಕ್ಕೆ ಮನರಂಜನೆಯ ಸವಿಯೂಟ
  • ಓಟಿಟಿಯಲ್ಲಿ ಗೆಲುವಿನ ನಿರೀಕ್ಷೆ

OTT released movies

ಹೊಸ ವರ್ಷಕ್ಕೆ ಓಟಿಟಿಗಳಲ್ಲಿ ಕನ್ನಡ ಸಿನಿಮಾಗಳು ಎಂಟ್ರಿ ಕೊಟ್ಟಿವೆ. ಈ ಮೂಲಕ ಕನ್ನಡ ಸಿನಿ ರಸಿಕರನ್ನು ಮನರಂಜಿಸಲು ಓಟಿಟಿ ವೇದಿಕೆಗಳು ಸಿದ್ದಗೊಂಡಿದೆ. ಸದ್ಯ ಕನ್ನಡದ ಮೂರು ಪ್ರಮುಖ ಸಿನಿಮಾಗಳು ಓಟಿಟಿಯಲ್ಲಿ ರಿಲೀಸಾಗಿದೆ. ಚಿತ್ರಮಂದಿರದಲ್ಲಿ ಬಹುದೊಡ್ಡ ಗೆಲುವು ಸಿಗದಿದ್ದರೂ ಓಟಿಟಿಯಲ್ಲಿ ಒಳ್ಳೆ ಪ್ರತಿಕ್ರಿಯೆ ಈ ಸಿನಿಮಾಗಳಿಗೆ ಸಿಗುತ್ತಿದೆ. ಆ ಸಿನಿಮಾಗಳ ಲಿಸ್ಟ್ ಇಲ್ಲಿದೆ.

ಮನರಂಜನೆ ಉಣಬಡಿಸಲು ‘ಫುಲ್ ಮೀಲ್ಸ್’ Full meals

ಲಿಖಿತ್ ಶೆಟ್ಟಿ ನಟಿಸಿ, ನಿರ್ಮಿಸಿರುವ ಸಿನಿಮಾ ‘ಫುಲ್ ಮೀಲ್ಸ್’ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಎಂಟ್ರಿ ಕೊಟ್ಟಿದೆ. ಈ ಸಿನಿಮಾ ಮಧ್ಯಮ ವರ್ಗದ ವೆಡ್ಡಿಂಗ್ ಫೋಟೋಗ್ರಾಫರ್ ಒಬ್ಬನ ಜೀವನ ಪಯಣ, ಕನಸುಗಳು ಮತ್ತು ಕುಟುಂಬದ ಮೌಲ್ಯಗಳನ್ನು ತೆರೆದಿಟ್ಟಿತ್ತು.ಇದರ ಕಾಮಿಡಿ ಟೋನ್ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈ ಸಿನಿಮಾ 2025 ನವೆಂಬರ್ 21ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಎಲ್ಲೆಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಪಡೆದಿತ್ತು. ಯಶಸ್ವಿಯಾಗಿ 25 ದಿನಗಳ ಕಾಲ ಪ್ರದರ್ಶನ ಕಂಡ ಈ ಸಿನಿಮಾ, ಇದೀಗ ಓಟಿಟಿಗೆ ಎಂಟ್ರಿ ಕೊಟ್ಟಿದ್ದು, ನೀವೇನಾದರೂ ಈ ಸಿನಿಮಾ ನೋಡಿರದೇ ಇದ್ದಲ್ಲಿ ಮಿಸ್ ಮಾಡದೇ ನೋಡಿ.

ನಾಯಿ ಮತ್ತು ಯಜಮಾನನ ಭಾವನಾತ್ಮಕ ಚಿತ್ರ “ನಾನು ಮತ್ತು ಗುಂಡಾ 2” Nanu mattu gunda

ಪ್ರೇಕ್ಷಕರ ಮನಗೆದ್ದ ನಾಯಿ ಮತ್ತು ಅದರ ಯಜಮಾನನ ನಡುವಿನ ಭಾವನಾತ್ಮಕ ಬಾಂಧವ್ಯದ ಕತೆ ಇರುವ ‘ನಾನು ಮತ್ತು ಗುಂಡ 2’ ಚಿತ್ರ, Zee 5 ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಸೆಪ್ಟೆಂಬರ್ 5 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ರಘು ಹಾಸನ್ ನಿರ್ದೇಶಿಸಿ, ನಿರ್ಮಿಸಿರುವ ಈ ಚಿತ್ರ ಥಿಯೇಟರ್ ನಲ್ಲಿ ದೊಡ್ಡ ಮಟ್ಟದ ಗೆಲುವು ಕಂಡಿರಲಿಲ್ಲ. ಆದರೆ ಒಳ್ಳೆಯ ಕತೆಯ ಕಾರಣಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ನೀವೇನಾದ್ರೂ ಈ ಚೆಂದದ ಸಿನಿಮಾ ನೋಡಿಲ್ಲದಿದ್ದರೆ ಓಟಿಟಿ ವೇದಿಕೆಯಲ್ಲಿ ಮಿಸ್ ಮಾಡದೇ ನೋಡಿ.

ಬ್ಯಾಂಕ್ ದರೋಡೆಯ ಜಾಡು ಹಿಡಿಯುವ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” Bank of Bhagyalakshmi

“ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ” ಕಾಮಿಡಿ ಕ್ರೈಮ್ ಥ್ರಿಲ್ಲರ್ ಆಗಿದ್ದು, ಅಭಿಷೇಕ್ ಎಂ ನಿರ್ದೇಶಿಸಿದ್ದಾರೆ, ದೀಕ್ಷಿತ್ ಶೆಟ್ಟಿ ಮತ್ತು ಬೃಂದಾ ಆಚಾರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ನವೆಂಬರ್ 27 ರಂದು ಥಿಯೇಟರ್ ಗೆ ಎಂಟ್ರಿ ಕೊಟ್ಟಿತ್ತು. ಆದರೆ ಥಿಯೇಟರ್ ನಲ್ಲಿ ತುಂಬಾ ಸದ್ದು ಮಾಡಿರಲಿಲ್ಲ. ಈ ಚಿತ್ರದಲ್ಲಿ ಸ್ನೇಹಿತರು ಬ್ಯಾಂಕ್ ದರೋಡೆ ಮಾಡಲು ಹೋದಾಗ ಏನೆಲ್ಲಾ ಆಗುತ್ತದೆ ಎನ್ನುವ ಹಾಸ್ಯಮಯ, ಆಕ್ಷನ್ ಸನ್ನಿವೇಶಗಳಿವೆ. ಅಮೆಝಾನ್ ಪ್ರೈಂ ನಲ್ಲಿ ಈ ಸಿನಿಮಾ ನೀವು ನೋಡಬಹುದು.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ ಹಿಗ್ಗಿ ನಲಿದಾಡಿಸುವ...

ಆಸ್ಕರ್ ವೇದಿಕೆಗೆ ಬಂತು ‘ಮಹಾವತಾರ್ ನರಸಿಂಹ’ ಹಾಗೂ ‘ಕಾಂತಾರ: ಅಧ್ಯಾಯ 1’

ಆಸ್ಕರ್ ವೇದಿಕೆಗೆ ಬಂತು ‘ಮಹಾವತಾರ್ ನರಸಿಂಹ’ ಹಾಗೂ ‘ಕಾಂತಾರ: ಅಧ್ಯಾಯ 1’ ಭಾರತೀಯ...

ಈ ವರ್ಷ ಬಿಡುಗಡೆಯಾಗಿ ವಿಭಿನ್ನ ಕಂಟೆಂಟ್ ಗಳಿಂದ ಸದ್ದು ಮಾಡಿದ ಚಿತ್ರಗಳಿವು – Kannada Movies released in 2025

ಈ ವರ್ಷ ಬಿಡುಗಡೆಯಾಗಿ ವಿಭಿನ್ನ ಕಂಟೆಂಟ್ ಗಳಿಂದ ಸದ್ದು ಮಾಡಿದ ಚಿತ್ರಗಳಿವು Kannada...

New Year Kannada Party Songs List – ಹೊಸವರ್ಷ, ಕ್ರಿಸ್ ಮಸ್ ಪಾರ್ಟಿಗಳಿಗೆ ಈ ಹಾಡುಗಳು ಜೊತೆಯಾದ್ರೆ ಫೀಲೇ ಬೇರೆ

ಹೊಸವರ್ಷ, ಕ್ರಿಸ್ ಮಸ್ ಪಾರ್ಟಿಗಳಿಗೆ ಈ ಹಾಡುಗಳು ಜೊತೆಯಾದ್ರೆ ಫೀಲೇ ಬೇರೆKannada...