ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ

Date:

  • ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ
  • ಹಿಗ್ಗಿ ನಲಿದಾಡಿಸುವ ಸುಗ್ಗಿ ಹಾಡುಗಳಿವು
  • ಕನ್ನಡ ಸಿನಿಮಾಗಳಲ್ಲಿ ಸಖತ್ ಸೌಂಡ್ ಮಾಡಿದ ಸಂಕ್ರಾಂತಿ ಗೀತೆಗಳು

ಕನ್ನಡ ಚಿತ್ರರಂಗದಲ್ಲಿ ಸಂಕ್ರಾಂತಿ Sankranthi festival songs ಹಬ್ಬದ ಹಾಡುಗಳು ಕನ್ನಡಿಗರ ಕಿವಿಗಳನ್ನು ಅರಳಿಸಿದೆ. ಇನ್ನೇನು ಸಂಕ್ರಾಂತಿ ಹಬ್ಬ ಬರುತ್ತಿದೆ. ಈ ಸುಗ್ಗಿಯ ಸಂಭ್ರಮವನ್ನು ಹೆಚ್ಚಿಸುವ ಹಾಡುಗಳನ್ನು ಮತ್ತೆ ಮತ್ತೆ ಟ್ಯೂನ್ ಮಾಡಿಕೊಳ್ಳುವ ಹೊತ್ತಿದು. ಆ ಸುಮಧುರ ಸಂಕ್ರಾಂತಿ ಹಾಡುಗಳ ಲಿಸ್ಟ್ ಇಲ್ಲಿದೆ.

ಸಂಕ್ರಾಂತಿ ಬಂತು ರತ್ತೋ ರತ್ತೋ: Sankranthi Banthu Rattho Rattho

ಈ ಹಾಡನ್ನು ಕೇಳದ ಕನ್ನಡಿಗರಿಲ್ಲ. 1992 ರಲ್ಲಿ ಕ್ರೇಝಿಸ್ಟಾರ್ ರವಿಚಂದ್ರನ್ Ravichandran ನಟಿಸಿದ “ಹಳ್ಳಿ ಮೇಸ್ಟ್ರು” Halli Meshtru ಸಿನಿಮಾದ ಬ್ಯೂಟಿಫುಲ್ ಹಾಡಿದು. ಹಂಸಲೇಖ Hamsalekha ಅವರು ಬರೆದು ಸಂಯೋಜಿಸಿದ ಈ ಹಾಡನ್ನು ಹಾಡಿದವರು ಎಸ್.ಪಿ.ಬಾಲಸುಬ್ರಹ್ಮಣ್ಯ SP Balasubramanya ಮತ್ತು ಎಸ್ ಜಾನಕೀ S Janaki. ಇಂದಿಗೂ ಈ ಹಾಡು ಎಷ್ಟೋ ಸಂಕ್ರಾಂತಿ ಕಾರ್ಯಕ್ರಮಗಳಲ್ಲಿಸೌಂಡ್ ಮಾಡುತ್ತಲೇ ಇದೆ. ಹಾಡಿನ ರಂಗುರಂಗಾದ ಅರ್ಥಪೂರ್ಣ ಸಾಹಿತ್ಯ ಕನ್ನಡಿಗರ ಮೈಮನ ಸೆಳೆದಿದೆ.

ಸಂಕ್ರಾಂತಿ ಬಂತು ಸುಗ್ಗಿ ತಂತು: Sankranthi Banthu Suggi Thanthu

ಸುದೀಪ್ Sudeep ಅಭಿನಯದ “ಪಾರ್ಥ” Partha ಸಿನಿಮಾದ ಸುಮಧುರ ಹಾಡಿದು. “ಸಂಕ್ರಾಂತಿ ಬಂತು.. ಸುಗ್ಗಿ ತಂತು ಹಿಗ್ಗಿ ನಲಿದಾಡಿರೋ” ಎಂದು ಶುರುವಾಗುವ ಈ ಹಾಡಿನಲ್ಲಿ ಸಂಕ್ರಾಂತಿ ಆಚರಣೆಯ ಹಿನ್ನೆಲೆಯಿದೆ. ಗುರುಕಿರಣ್ Gurukiran ಸಂಗೀತ ನೀಡಿರುವ ಈ ಹಾಡಿಗೆ, ವಿ ನಾಗೇಂದ್ರ ಪ್ರಸಾದ್ V Nagendra Prasad ಸಾಹಿತ್ಯವಿದೆ. ಶಂಕರ್ ಮಹಾದೇವನ್, ಮಾಲ್ಗುಡಿ ಶುಭಾ ಕಂಠಸಿರಿಯಿದೆ.

ಸಂಕ್ರಾಂತಿ ತಕ ಥೈ: Sankranthi Thaka Thai

“ತಕ ಥೈ ತಕ ಥೈ ಆಗಸದಾಗೆ ಓಕುಳಿ ಚೆಲ್ಲೈತೋ ಉತ್ತರಾಯಣದಾಚೆ ಸೂರ್ಯನ ತೇರು ಹೊಂಟೈತೋ” ಎನ್ನುವ ಲಿರಿಕಲ್ ವಿಡಿಯೋ ಸಾಂಗ್ ಗೆ ಒಂದಷ್ಟು ಸಿನಿಮಾ ತಾರೆಯರು ಹೆಜ್ಜೆ ಹಾಕಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲೂ ಈ ಹಾಡು ಗಮನಸೆಳೆದಿತ್ತು. ರಮೇಶ್ ಅರವಿಂದ್ Ramesh Aravind, ಹರ್ಷಿಕಾ ಪೂಣಚ್ಚ, ರಾಧಿಕಾ ನಾರಾಯಣ್, ಪೃಥ್ವಿ ಅಂಬಾರ್ ಸೇರಿದಂತೆ ತೆಲುಗಿನ ಒಂದಷ್ಟು ಕಲಾವಿದರು ಈ ಹಾಡಿಗೆ ಸ್ಪೆಪ್ಪ್ ಹಾಕಿದ್ದರಿಂದ ಯುಟ್ಯೂಬ್ ನಲ್ಲಿ ಈ ಹಾಡು ಸದ್ದು ಮಾಡಿತ್ತು. ಸಂಕ್ರಾಂತಿಯ ಸಮಯದ ಪ್ರಾಕೃತಿಕ ವರ್ಣನೆ ಈ ಹಾಡಿನಲ್ಲಿದೆ.

ಹಬ್ಬ ನಂಗೆ..ಹಬ್ಬ ನಂಗೆ.. ಹಿಗ್ಗು ನಂಗೆ: Habba Nange Habba Nange Higgu Nange

“ಹಬ್ಬ ನಂಗೆ, ಹಬ್ಬ ನಂಗ, ಹಿಗ್ಗು ನಂಗೆ…ಸಂಕ್ರಾಂತಿ ನವರಾತ್ರಿ ಎಲ್ಲಾನೂ ಕೂಡಿ ಬಂದೈತೋ” ಎನ್ನುವ ಸಾಹಿತ್ಯದೊಂದಿಗೆ ಆರಂಭವಾಗುವ ಈ ಹಾಡು “ನೀನೆಲ್ಲೋ ನಾನಲ್ಲೇ” Ninelli Nanalle ಚಿತ್ರದ್ದು. ಈ ಚಿತ್ರದಲ್ಲಿ ವಿಷ್ಣುವರ್ಧನ್ Vishnuvardhan, ಅನಿರುದ್ಧ್, ರವಿಚಂದ್ರನ್ ನಟಿಸಿದ್ದು ಹಬ್ಬದ ಜೋಶ್ ಜಾಸ್ತಿ ಮಾಡುವ ಮಸ್ತ್ ಹಾಡಿದು. ಕವಿರಾಜ್ ಸಾಹಿತ್ಯ ಬರೆದಿದ್ದು, ರಮೇಶ್ ಕೃಷ್ಣ ಕಂಪೋಸ್ ಮಾಡಿದ್ದಾರೆ. ಹೇಮಂತ್ ಕುಮಾರ್, ರಾಜೇಶ್ ಕೃಷ್ಣ ನ್ ಹಾಡಿಗೆ ಧ್ವನಿಯಾಗಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ದೂರ ಪಯಣಕ್ಕೆ ಕರೆದೊಯ್ಯುವ ರೋಮಾಂಚಕ ಸಿನಿಮಾಗಳಿವು

ದೂರ ಪಯಣಕ್ಕೆ ಕರೆದೊಯ್ಯುವ ರೋಮಾಂಚಕ ಸಿನಿಮಾಗಳಿವು ಟ್ರಾವೆಲ್ ಥ್ರೀಂ ನಲ್ಲಿ ಪ್ರೇಕ್ಷಕರನ್ನು ಮೋಡಿ...

ಓಟಿಟಿ ವೇದಿಕೆಯಲ್ಲಿ ನೀವು ನೋಡಲೇಬೇಕಾದ ಕನ್ನಡದ ಎರಡು ಅತ್ಯುತ್ತಮ ಚಿತ್ರಗಳು

ಓಟಿಟಿ ವೇದಿಕೆಯಲ್ಲಿ ನೀವು ನೋಡಲೇಬೇಕಾದ ಕನ್ನಡದ ಎರಡು ಅತ್ಯುತ್ತಮ ಚಿತ್ರಗಳು ವಿಭಿನ್ನ ಕತೆ-ವಿಭಿನ್ನ...

ವಿಜಯ್ ದೇವರಕೊಂಡ – ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮ: ವೈರಲ್ ಆಯ್ತು ಭಾವುಕ ಸಂದೇಶ

ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮ: ವೈರಲ್ ಆಯ್ತು...

“ಗಿಲ್ಲಿ ನಟ” ನ ವೈರಲ್‌ ಆದ ಫೇಮಸ್ ಡೈಲಾಗ್ಸ್ ಇಲ್ಲಿವೆ – Viral dialouges by Bigboss Contestant Gilli Nata

Bigg boss Gilli Nata dialogues List: ಕಾಣ್ಬಾರ್ದು ಅಂತ ಕಣ್ಣು ಮುಚ್ಕೋಬೋದು....