- ದೂರ ಪಯಣಕ್ಕೆ ಕರೆದೊಯ್ಯುವ ರೋಮಾಂಚಕ ಸಿನಿಮಾಗಳಿವು
- ಟ್ರಾವೆಲ್ ಥ್ರೀಂ ನಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿದ ಸೂಪರ್ ಚಿತ್ರಗಳು
ಕೆಲವೊಂದು ಚಿತ್ರದ ಕತೆಯಲ್ಲಿ ಜರ್ನಿಯೇ ಪ್ರಧಾನವಾಗಿದ್ದು, ಪಯಣದ ಮೂಲಕವೇ ಪ್ರೇಕ್ಷಕರನ್ನು ಆ ಸಿನಿಮಾಗಳು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಟ್ರಾವೆಲ್ ಕ್ರೇಝ್ ಇದ್ದವರಿಗಂತೂ ಇಂತಹ ಸಿನಿಮಾ ಸಿಕ್ಕಾಪಟ್ಟೆ ಇಷ್ಟವಾಗುತ್ತೆ.ಕೆಲವರಿಗೆ ಟ್ರಾವೆಲ್ ಮಾಡಬೇಕು ಅನ್ನೋ ಫೀಲ್ ಹುಟ್ಟಿಸುತ್ತೆ. ಅಂತಹ ಸುಂದರ ಸಿನಿಮಾಗಳ ಲಿಸ್ಟ್ ಇಲ್ಲಿದೆ.
ಯಾನ: ಮೂವರು ಹುಡುಗಿಯರ ಬದುಕಿನ ಪಯಣದ ಕಥೆಯನ್ನು ಹೇಳುವ ಈ ಸಿನಿಮಾದಲ್ಲಿ ವೈಭವಿ ವೈನಿಧಿ ಹಾಗು ವೈಸಿರಿ ನಾಯಕಿಯರಾಗಿ ಅಭಿನಯಿಸಿದ್ದಾರೆ.ಪಯಣವೇ ಚಿತ್ರಕ್ಕೆ ಟಿಸ್ಟ್ ನೀಡುತ್ತದೆ.
ಲೈಫ್ ಜೊತೆ ಒಂದು ಸೆಲ್ಫಿ: ಸಿನಿಮಾದ ಮೂವರು ಪಾತ್ರಗಳು ಗೋವಾ ಪಯಣ ಕೈಗೊಳ್ಳುವ ಕತೆ ಇಲ್ಲಿದೆ. ಇಡೀ ಕಥೆ ಗೋವಾದಲ್ಲಿಯೇ ನಡೆಯುತ್ತದೆ. ಪ್ರೇಮ್ ಕುಮಾರ್, ಪ್ರಜ್ವಲ್ ದೇವರಾಜ್, ಹರಿಪ್ರಿಯಾ ನಟಿಸಿದ್ದಾರೆ.
ರತ್ನನ್ ಪ್ರಪಂಚ: ರತ್ನಾಕರನ ಜೀವನ ಮತ್ತು ಪ್ರಯಾಣದ ಸುತ್ತ ಕೇಂದ್ರೀಕೃತವಾದ ಒಂದು ಅನನ್ಯ ಟ್ರಾವೆಲ್ ಸಿನಿಮಾವಿದು. ಡಾಲಿ ಧನಂಜಯ್, ಉಮಾಶ್ರೀ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಮುಂದಿನ ನಿಲ್ದಾಣ: ಮೂವರು ಮಂದಿ ತಮ್ಮ ದೈನಂದಿನ ಜಂಜಢವನ್ನು ಪ್ರಯಾಣ ಮಾಡುವುದರ ಮೂಲಕ ಕಡಿಮೆ ಮಾಡಿಕೊಳ್ಳಲು ಯತ್ನಿಸುವ ಕತೆ ಇರುವ ಸುಂದರ ಸಿನಿಮಾ ಇದು. ರಾಧಿಕಾ ಚೃತನ್, ಪ್ರವೀಣ್ ತೇಜ್ ಮೊದಲಾದವರು ನಟಿಸಿದ್ದಾರೆ.
777 ಚಾರ್ಲಿ: ಪ್ರೀತಿಯ ನಾಯಿಯ ಜೊತೆ ಭಾವನಾತ್ಮಕ ಟ್ರಿಪ್ ಕೈಗೊಳ್ಳುವ ನಾಯಕನ ಕತೆ ಇಲ್ಲಿದೆ. ರಕ್ಷಿತ್ ಶೆಟ್ಟಿ ಈ ಚಿತ್ರದ ನಾಯಕ
ಒಲವೇ ಮಂದಾರ: ಪ್ರೀತಿಯ ಹುಡುಕುತ್ತ ಅಸ್ಸಾಂಗೆ ಹೋಗುವ ಪಯಣದ ಕತೆ. ಶ್ರೀಕಾಂತ್, ಆಕಾಂಕ್ಷಾ ನಟಿಸಿದ್ದಾರೆ.
ಮಸ್ತ್ ಮಜಾ ಮಾಡಿ: ನಾಲ್ಕು ನಿರುದ್ಯೋಗಿ ಯುವಕರು ಊಟಿಯ ಗಾರ್ಡನ್ ಒಂದರಲ್ಲಿರುವ ಸಂಪತ್ತಿಗೋಸ್ಕರ ಊಟಿಯೆಡೆಗೆ ಪ್ರಯಾಣ ಬೆಳಸುವ ಕತೆ ಇಲ್ಲಿದೆ ಸುದೀಪ್, ವಿಜಯ್ ರಾಘವೇಂದ್ರ, ಜೆನ್ನಿಫರ್ ಕೊತ್ವಾಲ್ ಮೊದಲಾದವರು ನಟಿಸಿದ್ದಾರೆ.
ಏಕದಂತ : ಮೈಸೂರಿನಿಂದ ಗಣಪತಿ ಮೂರ್ತಿಯನ್ನು ದಂಪತಿಗಳಿಬ್ಬರು ತರುವ ಕತೆ ಇದು. ಪಯಣವೇ ಚಿತ್ರದ ಹೈಲೈಟ್ಸ್. ವಿಷ್ಣುವರ್ದನ್ ಪ್ರೇಮಾ ರಮೇಶ್ ಅರವಿಂದ್ ನಟನೆಯಿದೆ.


