- ಓಟಿಟಿ ವೇದಿಕೆಯಲ್ಲಿ ನೀವು ನೋಡಲೇಬೇಕಾದ ಕನ್ನಡದ ಎರಡು ಅತ್ಯುತ್ತಮ ಚಿತ್ರಗಳು
- ವಿಭಿನ್ನ ಕತೆ-ವಿಭಿನ್ನ ನಿರೂಪಣೆಯ ಚಿತ್ರ
- ಭಾವನಾತ್ಮಕ ದೃಶ್ಯಗಳ ಅಪೂರ್ವ ಸಂಗಮ
ಕನ್ನಡದ ಎರಡು ಸುಂದರ ಚಿತ್ರಗಳು ಓಟಿಟಿಗೆ ಬಂದಿದ್ದು ಈ ವಾರ ನೀವು ಓಟಿಟಿಯಲ್ಲಿ ನೋಡಬಹುದಾದ ಅತ್ಯುತ್ತಮ ಚಿತ್ರಗಳ ಸಾಲಿಗೆ ಇವೆರಡನ್ನೂ ಸೇರಿಸಬಹುದು
ಕ್ಷೇತ್ರಪತಿ:
ಕನ್ನಡದ ಕ್ಷೇತ್ರಪತಿ ಸಿನಿಮಾ ಇದೀಗ ಡಿಜಿಟಲ್ ವೇದಿಕೆಗೆ ಬಂದಿದೆ.2023ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ನವೀನ್ ಶಂಕರ್ ಮತ್ತು ಅರ್ಚನಾ ಜೋಯಿಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಬಿಡುಗಡೆಯಾದ ನಂತರ ಓಟಿಟಿಗೆ ಬರಲು ವಿಳಂಬವಾಗಿದ್ದರೂ, ಇದೀಗ Jio Hotstar ನಲ್ಲಿ ಸ್ಟ್ರೀಮಿಂಗ್ ಆರಂಭವಾಗಿದೆ.
ಶ್ರೀಕಾಂತ್ ಕಟಗಿ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ನವೀನ್ ಶಂಕರ್ ರೈತನ ಪಾತ್ರದಲ್ಲಿ ಮಿಂಚಿದ್ದಾರೆ. ಅನ್ಯಾಯದ ವಿರುದ್ಧ ಎದ್ದುನಿಲ್ಲುವ ಸಾಮಾನ್ಯ ರೈತನ ಹೋರಾಟವೇ ಚಿತ್ರದ ಪ್ರಧಾನ ಅಂಶ. ಕಥೆಯ ಭಾವನಾತ್ಮಕ ಅಂಶಗಳು ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರೂ ಥಿಯೇಟರ್ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿರಲಿಲ್ಲ.
ನೀಲಿ ಹಕ್ಕಿ:
ಗಣೇಶ್ ಹೆಗಡೆ ನಿರ್ದೇಶನದ ಕನ್ನಡ ಸಿನಿಮಾ ‘ನೀಲಿ ಹಕ್ಕಿ’ ಇದೀಗ ಸನ್ ನೆಕ್ಸ್ಟ್ ಓಟಿಟಿಗೆ ಬಂದಿದೆ. ಹಲವು ಚಿತ್ರೋತ್ಸವಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡು ಗಮನ ಸೆಳೆದಿತ್ತು. 5 ವರ್ಷಗಳ ಹಿಂದೆ ಬಹಳ ಸದ್ದು ಮಾಡಿದ್ದ ಈ ಸಿನಿಮಾ ಹಳ್ಳಿಯ ಅದ್ಬುತ ಲೋಕಕ್ಕೆ ಕರೆದೊಯ್ಯುತ್ತದೆ. ಸಿದ್ಧ ಎಂಬ ಬಾಲಕನ ದೃಷ್ಟಿಕೋನದಲ್ಲಿ ಹಳ್ಳಿ ಮತ್ತು ನಗರದ ಬದುಕಿನ ನಡುವಿನ ಸಂಘರ್ಷವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.


