ಹೊರದೇಶದಲ್ಲೂ ಹವಾ ಮೂಡಿಸ್ತಿದೆ ಉಪ್ಪಿ ಚಿತ್ರ “ಯುಐ”… ಸಿಂಗಲ್ ಸ್ಕ್ರೀನ್ ಟಿಕೆಟ್ ಗಳು ಸೋಲ್ಡ್ ಔಟ್!
ಡಿ.20 ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗ್ತಿರುವ ಉಪ್ಪಿ ಸಿನೆಮಾದ ಟಿಕೆಟ್ ಗಳು ರಿಲೀಸ್ ಗೂ ಮೊದಲೇ ಕೆಲವು ದೇಶಗಳಲ್ಲಿ ಸೋಲ್ಡ್ ಔಟ್ ಆಗಿದ್ಯಂತೆ. ಯಾವ್ಯಾವ ದೇಶಗಳಲ್ಲಿ ಉಪ್ಪಿ ಹವಾ ಹೇಗಿದೆ ಇಲ್ಲಿ ನೋಡಿ.
ಸದಾ ಉಪ್ಪಿ ಚಿತ್ರಗಳ ಹವಾನೇ ಬೇರೆ. ಡಿಸೆಂಬರ್ 20 ರಂದು ವಿಶ್ವದಾದ್ಯಂತ ತೆರೆಗಪ್ಪಳಿಸಲು ಸಿದ್ಧವಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಅವ್ರ ಯುಐ ಚಿತ್ರದ ಟಿಕೆಟ್ ಗಳು ಈಗಾಗ್ಲೇ ಸೋಲ್ಡ್ ಔಟ್ ಆಗಿದ್ಯಂತೆ. ಇದು ಉಪ್ಪಿ ಚಿತ್ರಗಳ ಬಗ್ಗೆ ಜನರಿಗಿರುವ ನಂಬಿಕೆ ಮತ್ತು ಅಭಿಮಾನವನ್ನು ತೋರಿಸುತ್ತದೆ. ಉಪೇಂದ್ರ ಅವರೇ ನಟಿಸಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಉಪೇಂದ್ರ ಅವ್ರು ಎಂಟು ವರ್ಷಗಳ ಹಿಂದಿನಿಂದಲೇ ಪ್ಲಾನ್ ಹಾಕ್ತಿದ್ರಂತೆ. ಇದೇ ಶುಕ್ರವಾರ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ.
ಯಾವಾಗ್ಲೂ ಹೊಸ ಹೊಸ ಕಲ್ಪನೆಗಳ ಮೂಲಕ ನೋಡುಗರಿಗೆ ಬೆರಗನ್ನು ಮೂಡಿಸ್ತಿರೋ ಉಪ್ಪಿಯ ಈ ಹೊಸ ಕಲ್ಪನೆಯ ಬಗ್ಗೆನೂ ಎಲ್ಲರಿಗೂ ಇನ್ನಿಲ್ಲದಂತೆ ಉತ್ಸಾಹ ಮತ್ತು ಕುತೂಹಲ ಎರಡೂ ಇದೆ. ಹಾಗೇ ಬಹು ಕೋಟಿ ವೆಚ್ಚದ ಕನ್ನಡ ಸಿನಿಮಾದ ಕುರಿತು ನಿರೀಕ್ಷೆಯೂ ಜಾಸ್ತಿ ಇದೆ.
‘ಯುಐ’ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ತಾರಾಗಣದಲ್ಲಿ ಸಾಧು ಕೋಕಿಲ, ಮುರಳಿ ಶರ್ಮಾ, ಸನ್ನಿ ಲಿಯೋನ್, ಇಂದ್ರಜಿತ್ ಲಂಕೇಶ್, ಓಂ ಪ್ರಕಾಶ್ ರಾವ್, ಗುರುಪ್ರಸಾದ್ ಮುಂತಾದವರು ಕಾಣಿಸಿಕೊಂಡಿದ್ದಾರೆ.