ಉಪೇಂದ್ರ ಅಭಿನಯದ UI ಸಿನಿಮಾ ಪ್ರೀ ರಿಲೀಸ್‌.!

Date:

  • ಉಪೇಂದ್ರ ಅಭಿನಯದ UI ಸಿನಿಮಾ ಪ್ರೀ ರಿಲೀಸ್‌.!
  • ಡಿಫರೆಂಟ್ ಕ್ರೈಮ್ಯಾಕ್ಸ್? ಸ್ಪಷ್ಟನೆ ನೀಡಿದ ಉಪೇಂದ್ರ
  • ಡಿ. 20 ರಂದು ವಿಶ್ವದಾದ್ಯಂತ ‘ಯುಐ’ ಅದ್ದೂರಿ ಬಿಡುಗಡೆ

ಉಪೇಂದ್ರ Upendra ಅವರ ನಟನೆಯ ಬಹು ನಿರೀಕ್ಷಿತ ‘ಯುಐ’ UI Movie ಚಿತ್ರದ ಪ್ರೀ ರಿಲೀಸ್ ಇವೆಂಟ್ ಅದ್ದೂರಿಯಾಗಿ ನೆರವೇರಿತು. ಈ ಕಾರ್ಯಕ್ರಮಕ್ಕೆ ಶಿವರಾಜಕುಮಾರ್, ದುನಿಯಾ ವಿಜಯ್, ಡಾಲಿ ಧನಂಜಯ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು. ಉಪೇಂದ್ರ ಅವರ ಸಿನಿಮಾ ರಿಲೀಸ್ ಇವೆಂಟ್‌ನಲ್ಲಿ ಶಿವರಾಜ್ ಕುಮಾ‌ರ್ ಮಾತನಾಡಿ ನಾನು “ಶ್” ಚಿತ್ರದ ಪ್ರೀಮಿಯರ್ ಶೋ ಅನ್ನು ಪಲ್ಲವಿ ಚಿತ್ರಮಂದಿರದಲ್ಲಿ ನೋಡಿದ್ದೆ. ಹಗೂ “ಓಂ” ಚಿತ್ರದ ಚಿತ್ರೀಕರಣ ಸಮಯದಲ್ಲಿ ಉಪೇಂದ್ರ ಅವರ ಕಾರ್ಯವೈಖರಿ ನೋಡಿ, ನೀವು ಭಾರತ ಚಿತ್ರರಂಗದ ಮಹಾನ್ ನಿರ್ದೇಶಕರಲ್ಲೊಬ್ಬರಾಗುತ್ತಿರ ಎಂದು ಹೇಳಿದ್ದೆ. ಆಗಿನಿಂದಲೂ ನನಗೆ ಉಪೇಂದ್ರ ಅವರನ್ನು ಕಂಡರೆ ವಿಶೇಷ ಪ್ರೀತಿ ಎಂದರು. ನಾನು ಕೂಡ “UI” ಚಿತ್ರವನ್ನು ನೋಡುವ ಕಾತುರದಲ್ಲಿದ್ದೇನೆ ಎಂದಿದ್ದಾರೆ.

ಟ್ರೇಲರ್ ನೋಡಿ ಸಂತಸ ವ್ಯಕ್ತಪಡಿಸಿದ ಅಭಿಮಾನಿಗಳು;

ಇನ್ನು ಚಿತ್ರದ ಟ್ರೇಲರ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಒಂಭತ್ತು ವರ್ಷಗಳ ನಂತರ ಉಪೇಂದ್ರ ಅವರು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಏನೆಲ್ಲ ಇರಬಹುದು ಎಂದು ಊಹಿಸಿಕೊಂಡು ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ.

ಡಿ. 20 ರಂದು ವಿಶ್ವದಾದ್ಯಂತ ಬಿಡುಗಡೆ;

ಚಿತ್ರಕ್ಕೆ ಪ್ರೋತ್ಸಾಹ ನೀಡಲು ಬಂದಿರುವ ಎಲ್ಲಾ ಗಣ್ಯರಿಗೆ ಧನ್ಯವಾದ ತಿಳಿಸಿ ಮಾತನಾಡಿದ ಉಪೇಂದ್ರ ರವರು ಈ ಚಿತ್ರ ಆರಂಭವಾಗಲು ಕಾರಣ ಕೆ.ಪಿ.ಶ್ರೀಕಾಂತ್. ಐವತ್ತು ವರ್ಷಗಳ ಇತಿಹಾಸವಿರುವ ಲಹರಿ ಸಂಸ್ಥೆ ಈ ಚಿತ್ರ ನಿರ್ಮಾಣ ಮಾಡಿದ್ದು, ಮನೋಹರನ್ ಹಾಗೂ ಶ್ರೀಕಾಂತ್ ಅವರು ನಿರ್ಮಾಪಕರಾಗಿದ್ದಾರೆ. ನವೀನ್, ಲಹರಿ ವೇಲು, ನಾಗೇಂದ್ರ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಇದು ನನ್ನೊಬ್ಬನ ಚಿತ್ರವಲ್ಲ. ನನ್ನ ತಂಡದ ಚಿತ್ರ. ಈ ಚಿತ್ರ ಉತ್ತಮವಾಗಿ ಮೂಡಿಬರಲು ಇವರೆಲ್ಲರ ಸಹಕಾರವೇ ಕಾರಣ. ಈ ಸಮಯದಲ್ಲಿ ಚಿತ್ರತಂಡದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ. ಇದೇ ಡಿಸೆಂಬರ್ 20ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ಎಲ್ಲರೂ ನೋಡಿ ಎಂದರು.

ಡಿಫರೆಂಟ್ ಕ್ರೈಮ್ಯಾಕ್ಸ್? ಸ್ಪಷ್ಟನೆ ನೀಡಿದ ಉಪೇಂದ್ರ!

ಇನ್ನು ಚಿತ್ರದ ಕ್ಲೈಮಾಕ್ಸ್ ಬಗ್ಗೆ ಮಾತನಾಡಿ ಯಐ ಚಿತ್ರಕ್ಕೆ ಎರಡು ಕ್ಲೈಮ್ಯಾಕ್ಸ್ ಇರಲಿದ್ದು, ಒಂದೊಂದು ಥಿಯೇಟರ್​ನಲ್ಲಿ ಒಂದೊಂದು ಕ್ಲೈಮ್ಯಾಕ್ಸ್ ಬಿತ್ತರ ಆಗಲಿದೆ. ಪ್ರೇಕ್ಷಕರಿಗೆ ಬೇರೆ ಬೇರೆಯದೇ ಆದ ಕ್ಲೈಮ್ಯಾಕ್ಸ್ ನೋಡ ಸಿಗಲಿದೆ ಎನ್ನುವ ವದಂತಿ ಇತ್ತು. ಇದು ಅಸಾಧ್ಯ ಎಂಬ ಮಾತನ್ನು ಉಪೇಂದ್ರ ಹೇಳಿದ್ದಾರೆ. ಎರಡು ಕ್ಲೈಮ್ಯಾಕ್ಸ್ ಎಂಬ ವಿಚಾರದಲ್ಲಿ ಯಾವುದೇ ಸತ್ಯ ಇಲ್ಲ. ಸಿನಿಮಾಗೆ ಒಂದೇ ಕ್ಲೈಮ್ಯಾಕ್ಸ್ ಇದೆ. ಕಂಟೆಂಟ್ ಉತ್ತಮವಾಗಿದೆ. ಹೀಗಾಗಿ, ನೀವು ಸಿನಿಮಾ ಎರಡು ಬಾರಿ ನೋಡಬೇಕು ಎಂದನಿಸುತ್ತದೆ ಎಂದು ಉಪೇಂದ್ರ ಹೇಳಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ತೆರೆಯ ಮೇಲೆ ಮಿಂಚಲಿದೆ ತಂದೆ ಮಕ್ಕಳ ಬಾಂಧವ್ಯದ ಕಹಾನಿ: ಬರ್ತಿದೆ ಬಹುನಿರೀಕ್ಷಿತ ಚಿತ್ರಗಳು!

ತಂದೆ ಮಕ್ಕಳ ಬಾಂಧವ್ಯವನ್ನು ಸಾರುವ ಬಹಳಷ್ಟು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಬಂದು...

ಜೂನ್ 20 ರಂದು ರಾಯಲ್ ಆಗಿ ತೆರೆಗಪ್ಪಳಿಸಲಿದೆ “ಕುಬೇರ”

ಜೂನ್ 20 ರಂದು ರಾಯಲ್ ಆಗಿ ತೆರೆಗಪ್ಪಳಿಸಲಿದೆ “ಕುಬೇರ” ದುಡ್ಡೇ ದೊಡ್ಡಪ್ಪ, ನ್ಯಾಯ...

ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್

ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್ ಕೊಡಗಿನ ಸ್ವಾದವಿರುವ ವಿಭಿನ್ನ ಚಿತ್ರವಿದು ರಾ.ಸೂರ್ಯ...

ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ ಗೀತೆ

ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ...