Bigg boss Gilli Nata dialogues List:
ಕಾಣ್ಬಾರ್ದು ಅಂತ ಕಣ್ಣು ಮುಚ್ಕೋಬೋದು. ಮರೀಬಾರ್ದು ಅಂತ ಮನಸ್ಸು ಮುಚ್ಕೊಳಕ್ಕಾಗತ್ತಾ?
– ಗಿಲ್ಲಿ ನಟ
ನೀನು ಕಾರಲ್ಲಿ ಓಡಾಡ್ತೀಯ, ನಾನು ಕಾಲಲ್ಲಿ ಓಡಾಡ್ತೀನಿ
ನೀನು ಬಟ್ಟೆಗೆ ತುಂಬಾ ಖರ್ಚು ಮಾಡ್ತೀಯ, ನಾನು ಹೊಟ್ಟೆಪಾಡಿಗೆ ಒದ್ದಾಡ್ತೀನಿ
ನಿಂದು ಐಟಿ ಕಂಪೆನಿ ಜಾಬು, ನಂದು ಖಾಲಿ ಜೇಬು
ಆದ್ರೆ ಕೇಳಲ್ಲ ಮನಸ್ಸು ಎಷ್ಟು ಹೇಳಿದ್ರೂ
ಪ್ರತೀ ಸರ್ತಿನೂ ನೀನೇ ನೀನೇ ಬೇಕು ಅನ್ನೋ ತರ ಇರ್ತದೆ.
– ಗಿಲ್ಲಿ ನಟ
ಹುಡ್ಗಿರ್ ಪ್ರೀತಿ ಒಂಥರಾ ಫೋನ್ ನಂಬರ್ ಇದ್ದಂಗೆ ಯಾವಾಗ ಬೇಕಾದ್ರೂ ಚೇಂಜ್ ಆಗ್ಬೋದು, ಆದ್ರೆ ಹುಡ್ಗುರ್ ಪ್ರೀತಿ ಆಧಾರ್ ಕಾರ್ಡ್ ನಲ್ಲಿರೋ ನಂಬರ್ ಇದ್ದಂಗೆ ಯಾವತ್ತೂ ಚೇಂಜ್ ಆಗಲ್ಲ.
-ಗಿಲ್ಲಿ ನಟ
ಹುಟ್ಬೇಕಾದ್ರೆ ಕಮಿಟ್ಮೆಂಟು ಅನ್ನೋ ಮೂಟೇನ ಹೆಗಲ್ಮೇಲೆ ಇಟ್ಕೊಂಡು ಹುಟ್ಟಿರೋವ್ರು ನಾವು. ಮೀಸೆ ಬರಕ್ಕಿಂತ ಮುಂಚೇನೇ ಅಕ್ಕ- ತಂಗಿಯರ ಜೀವನಕ್ಕೆ ಮೆಟ್ಟಿಲಾಗು ಅಂತಾರೆ, ಗ್ಯಾಪಲ್ಲಿ ಲೈಫಲ್ಲಿ ಸೆಟ್ಲಾಗು ಅಂತಾರೆ.
-ಗಿಲ್ಲಿ ನಟ
ಪ್ರೀತಿ ಮಾಡೋ ವಯಸ್ಸಲ್ಲಿ ಆಸ್ತಿ ಮಾಡು ಅಂತಾರೆ, ಆಸ್ತಿ ಮಾಡ್ಕೊಂಡು ಆಮೇಲೆ ಮದ್ವೆ ಆಗಣ ಅಂದ್ರೆ ಏಜ್ ಜಾಸ್ತಿ ಆಯ್ತು ಅಂತಾರೆ.
-ಗಿಲ್ಲಿ ನಟ
ಲವ್ ಮ್ಯಾರೇಜ್ ಆಗಣ ಅಂದ್ರೆ ಬ್ಯೂಟಿ ನೋಡ್ತಾರೆ, ಅರೇಂಜ್ ಮ್ಯಾರೇಜ್ ಆಗಣ ಅಂದ್ರೆ ಗೌರ್ಮೆಂಟ್ ಡ್ಯೂಟಿ ನೋಡ್ತಾರೆ. ಏನೂ ಬೇಡ ಸಾಯೋವರ್ಗೂ ಸಿಂಗಲ್ಲಾಗೇ ಇರಣ ಅಂದ್ರೆ ಹಳೇ ಡವ್ವು ಮಗ ಬಂದು ಅಂಕಲ್ಲು ಅಂತ ಕರೀತಾನೆ.
-ಗಿಲ್ಲಿ ನಟ
ಗಂಡು ಮಕ್ಳು ಒಂಥರಾ ಕುಕ್ಕರ್ ಇದ್ದಂಗೆ. ಕೆಳ್ಗಡೆ ಫೈರ್ ಮೇಲ್ಗಡೆ ಪ್ರೆಷರ್ ಇದ್ರೂನೂ ನಗ್ ನಗ್ತಾ ಬದ್ಕ್ತಾ ಇರ್ತೀವಿ. ಸಾಯೋವರ್ಗೂ ಬೇರೆಯವ್ರ ಖುಷಿಗೋಸ್ಕರ ಬದುಕವ್ನೇ ಈ ಗಂಡು.
-ಗಿಲ್ಲಿ ನಟ
ಜಾತಿನ ಪ್ರೀತ್ಸೋನು ರಾಜಕಾರಣಿ ಆಗ್ತಾನೆ, ಜನರನ್ನ ಪ್ರೀತ್ಸೋನು ರಾಜಕುಮಾರ ಆಗ್ತಾನೆ
-ಗಿಲ್ಲಿ ನಟ


