- ಬಿಗ್ ಬಾಸ್ ಸ್ಪರ್ಧಿಗಳನ್ನು ಯಾರು ಆಯ್ಕೆ ಮಾಡ್ತಾರೆ ಅನ್ನೋ ಕುತೂಹಲ ನಿಮಗಿದೆಯೇ?
- ಪ್ರತಿವರ್ಷ ಬಿಗ್ ಬಾಸ್ ಆರಂಭವಾಗುವ ಮುನ್ನ ಮನೆಗೆ ಹೋಗಲು ದೊಡ್ಡ ಪೈಪೋಟಿಯೇ ನಡೆಯುತ್ತದೆ.
- ಬಿಗ್ ಬಾಸ್ ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡೋದ್ಯಾರು, ಇನ್ಫ್ಲುಯೆನ್ಸ್ ನಡೆಯತ್ತಾ ಅನ್ನೋದನ್ನ ಬಿಚ್ಚಿಟ್ಟಿದ್ದಾರೆ ಬಿಗ್ ಬಾಸ್ ವಿನ್ನರ್ ಪ್ರಥಮ್
ಸದ್ಯದಲ್ಲೇ ಕನ್ನಡದ ಬಿಗ್ ಬಾಸ್ ಸೀಸನ್ 12 BBK 12 ರ ಸ್ಪರ್ಧೆ ಆರಂಭವಾಗಲಿದೆ. ಇದಕ್ಕೂ ಮೊದಲು ಈ ಬಾರಿ ಸುದೀಪ್ Kiccha Sudeep ನಿರೂಪಣೆ ಮಾಡ್ತಾರೋ ಇಲ್ವೋ ಅನ್ನೋ ಯಕ್ಷಪ್ರಶ್ನೆ ಎಲ್ಲರ ಮನದಲ್ಲಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದ್ದು, ಈ ಬಾರಿಯ ಬಿಗಬಾಸ್ Bigboss ಮನೆಗೆ ಯಾರೆಲ್ಲಾ ಹೋಗಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಇದರ ನಡುವೆ ಬಿಗ್ ಬಾಸ್ ನ ಮಾಜಿ ಕಂಟೆಸ್ಟೆಂಟ್ ಹಾಗೂ ವಿನ್ನರ್ ಒಳ್ಳೆ ಹುಡುಗ ಪ್ರಥಮ್ Olle Huduga Pratham ಅವ್ರು ಒಂದು ಸೀಕ್ರೆಟ್ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಜನರೊಂದಿಗೆ ಹಂಚಿಕೊಂಡಿದ್ದಾರೆ.
ಎಕ್ಸ್ ಖಾತೆಯಲ್ಲಿ ಹೀಗೆ ಹೇಳಿದ್ದಾರೆ ಪ್ರಥಮ್
ಬಿಗ್ ಬಾಸ್ ಪ್ರೆಸ್ ಮೀಟ್ Pressmeet ಆದ್ಮೇಲೆ ನೂರಾರು ಜನ ಪ್ರಥಮ್ ಅವರಿಗೆ, ನೇರವಾಗಿ ಹಾಗೂ ಇತರರ ಮೂಲಕ ಕರೆಮಾಡಿ, ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳಾಗಿ ಹೋಗೋಕೆ ನಮಗೊಂದು ಚಾನ್ಸ್ ಕೊಡಿಸಿ ಅಂತ ಕೇಳುತ್ತಿದ್ದಾರಂತೆ. ಆ ಕರೆಗಳಿಂದ ಕಿರಿಕಿರಿ ಅನುಭವಿಸಿರುವ ಪ್ರಥಮ್, ಬಿಗ್ ಬಾಸ್ ಮನೆಗೆ ಹೋಗುವ ಬಗೆಗೆ ಸೀಕ್ರೆಟ್ ಬಿಟ್ಟುಕೊಟ್ಟಿದ್ದಾರೆ. ಅವರು “ಎಲ್ಲರಿಗೂ ಒಂದೇ ಮಾತು, ಯಾವ ಇನ್ಫ್ಲುಯೆನ್ಸ್ ಕೂಡ ವರ್ಕ್ ಆಗಲ್ಲ. ಕಲರ್ಸ್ ಕನ್ನಡ Colors Kannada ಹೆಡ್ ಪ್ರಶಾಂತ್ ನಾಯಕ್ ಸರ್ & ಪ್ರಕಾಶ್ ಸರ್ ಅವ್ರದ್ದೇ ತಂಡವಿದೆ! ಅವ್ರೇ ಕಾಂಟ್ಯಾಕ್ಟ್ ಮಾಡ್ತಾರೆ. ಯಾವ ಕಾಸ್ಟಿಂಗ್ ಮಾತು ನಡೆಯಲ್ಲ, ಬೇರೆ ಯಾರೇ ಹೇಳಿದರೂ ಅದು ಫೇಕ್. ಯಾಮಾರಬೇಡಿ, ಆನ್‌ಲೈನ್ ಹುಚ್ಚಾಟ ನಿಲ್ಲಿಸಿ” ಎಂದು ಹೇಳಿದ್ದಾರೆ. ಪ್ರಥಮ್ ಅವರೇ ಹಿಂದೊಮ್ಮೆ ಹೇಳಿದಂತೆ ಹಣ, ಇನ್ಫ್ಲುಯೆನ್ಸ್ ಯಾವ್ದೂ ಬೇಡ ನಮ್ಮ ಸಾಮರ್ಥ್ಯವೇ ಬಿಗ್ ಬಾಸ್ ಮನೆಗೆ ನಮ್ಮನ್ನು ಕರೆದೊಯ್ಯುತ್ತದೆ ಹಾಗೂ ಗೆಲುವಿನ ಹಾದಿ ತೋರಿಸುತ್ತದೆ.