- ಏ. 11 ಕ್ಕೆ ತೆರೆಗೆ ಬರಲಿದೆ ಮಹಿಳಾ ಪ್ರಧಾನ ಚಿತ್ರ “ಮೀರಾ”
- ತುಳು ಇಂಡಸ್ಟ್ರಿಯಲ್ಲೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಚಿತ್ರ
- ಅಸ್ತ್ರ ಪ್ರೊಡಕ್ಷನ್ ನಿರ್ಮಾಣದ ಈ ಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿದ್ದಾರೆ ಇಶಿತಾ ಶೆಟ್ಟಿ
ತುಳು ಚಿತ್ರರಂಗದಲ್ಲೊಂದು ಮಹತ್ವದ ಮೈಲಿಗಲ್ಲು ಮೂಡಿಸುವ ಭರವಸೆಯೊಂದಿಗೆ ಏಪ್ರಿಲ್ 11 ರಂದು ತೆರೆಗೆ ಬರುತ್ತಿದೆ, ಮಹಿಳಾ ಪ್ರಧಾನ ಚಿತ್ರ “ಮೀರಾ” Meera. ಚಿತ್ರವನ್ನು ಅಸ್ತ್ರ ಪ್ರೊಡಕ್ಷನ್ Asthra Production ಬ್ಯಾನರ್ ಅಡಿಯಲ್ಲಿ ಲಂಚುಲಾಲ್ ಕೆ ಎಸ್ Lanchulal K S ನಿರ್ಮಿಸಿದ್ದು, ಅಶ್ವಥ್ Ashwath ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಮಂಗಳೂರು, ಕಟೀಲು, ಕಾಸರಗೋಡು, ಸೀತಾಂಗೋಳಿ, ಕುಂಬಳೆ ಮತ್ತು ಕರಾವಳಿ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ.
ಹೆಣ್ಣಿನ ನೋವು, ನಲಿವುಗಳನ್ನು ಆಧರಿಸಿದ ಸಿನಿಮಾ
ಮಹಿಳಾ ಪ್ರಧಾನ ಸಿನಿಮಾಗಳ ಕೊರತೆಯನ್ನು ನೀಗಿಸಬಲ್ಲಂತಹಾ ಈ ಚಿತ್ರದಲ್ಲಿ ಒಬ್ಬ ಮಹಿಳೆ ತನ್ನ ಕನಸುಗಳನ್ನು ಸಾಧಿಸುವ ಹಾದಿಯಲ್ಲಿ ಸಮಾಜದಲ್ಲಿ ಅನುಭವಿಸುವ ಕಷ್ಟಗಳು, ಸವಾಲುಗಳು ಹಾಗೂ ಆ ಸವಾಲುಗಳನ್ನು ಆಕೆ ಮೆಟ್ಟಿ ನಿಂತು ಗೆಲ್ಲುವ ಪರಿಯನ್ನು ಕಥಾಹಂದರವಾಗಿ ಹೊಂದಿದೆ ಈ ಚಿತ್ರ. ಹೆಣ್ಣಿನ ನೋವು, ನಲಿವುಗಳನ್ನು ಆಧರಿಸಿದ ಈ ಚಿತ್ರದಲ್ಲಿ ಹಾಸ್ಯವನ್ನೂ ಅಗತ್ಯಕ್ಕೆ ತಕ್ಕಂತೆ ಬಳಸಲಾಗಿದೆಯಂತೆ.
ಸಾಮಾಜಿಕ ಕಾಳಜಿಯ ಚಿತ್ರತಂಡ
ಚಿತ್ರದಲ್ಲಿ ಇಶಿತಾ ಶೆಟ್ಟಿ Ishitha Shetty ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರವಿಂದ್ ಬೋಳಾರ್, ಸ್ವರಾಜ್ ಶೆಟ್ಟಿ, ಜೆ.ಪಿ ತೂಮಿನಾಡು, ಪ್ರಕಾಶ್ ತೂಮಿನಾಡು, ಮಂಜು ರೈ ಮೂಳೂರು, ರೂಪಶ್ರೀ ವೋರ್ಕಾಡಿ, ಯತೀಶ್ ಪೂಜಾರಿ, ಅಶ್ವಥ್, ಬೇಬಿ ಲಕ್ಷ್ಯ ಎಲ್, ಮುಂಬೈ ಮೂಲದ ತುಳು ಬ್ಲಾಗರ್ ನಟಿ ರಕ್ಷಿತಾ ಶೆಟ್ಟಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಸ್ತ್ರ ಪ್ರೊಡಕ್ಷನ್ ಆಶ್ರಯದಲ್ಲಿ ಮಂಗಳೂರಿನ ಸಾಮಾಜಿಕ ಕಾರ್ಯಕರ್ತೆ ರಜನಿ ಶೆಟ್ಟಿ ಅವರಿಗೆ ಒಂದು ಲಕ್ಷ ರೂ ನೀಡಲಾಗಿದೆ ಹಾಗೂ 300 ಸಂಚಾರ ಪೊಲೀಸ್ ಸಿಬ್ಬಂದಿಗೆ ಕೊಡೆಗಳನ್ನು ವಿತರಣೆ ಮಾಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಹೊಂದಿದೆ ಚಿತ್ರತಂಡ.