ಆಟೋ ಆಂಬ್ಯುಲೆನ್ಸ್ ಚಾಲಕನ ಕಾಮಿಡಿ ಪ್ರಧಾನ ಕತೆ ಹೇಳಲು ಬರ್ತಿದೆ “ಎಕ್ಸ್ ಅಂಡ್ ವೈ”

Date:

  • ಆಟೋ ಆಂಬ್ಯುಲೆನ್ಸ್ ಚಾಲಕನ ಕಾಮಿಡಿ ಪ್ರಧಾನ ಕತೆ ಹೇಳಲು ಬರ್ತಿದೆ “ಎಕ್ಸ್ ಅಂಡ್ ವೈ”
  • ಟ್ರೈಲರ್ ರಿಲೀಸ್ ಆಗಿದ್ದು ಈ ಸಿನಿಮಾ ಇದೇ ಜೂ. 26 ಕ್ಕೆ ತೆರೆಗಪ್ಪಳಿಸಿದೆ.
  • ನಿರ್ದೇಶಕ ಡಿ ಸತ್ಯಪ್ರಕಾಶ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ

ಈಗಾಗಲೇ ಪೋಸ್ಟರ್ ಮೂಲಕ ಕುತೂಹಲ ಹುಟ್ಟಿಸಿರುವ “ಎಕ್ಸ್ ಅಂಡ್ ವೈ” X and Y ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಈ ಸಿನಿಮಾ ಇದೇ ಜೂ. 26 ಕ್ಕೆ ತೆರೆಗಪ್ಪಳಿಸಿದೆ. ಸಿನಿಮಾದ ಟ್ರೈಲರ್, ಪೋಸ್ಟರ್ ರೀತಿಯಲ್ಲೇ ಕುತೂಹಲ ಮೂಡಿಸಿದೆ. ಕನ್ನಡಕ್ಕೆ ರಾಮಾ ರಾಮಾ ರೇ, ಒಂದಲ್ಲ ಎರಡಲ್ಲಾ ಮತ್ತು ಮ್ಯಾನ್ ಆಫ್ ದಿ ಮ್ಯಾಚ್ ನಂತಹ ಒಳ್ಳೊಳ್ಳೆ ಸಿನಿಮಾಗಳನ್ನು ನೀಡಿದ ನಿರ್ದೇಶಕ ಡಿ ಸತ್ಯಪ್ರಕಾಶ್ D Sathyaprakash ಅವರು ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಸಿನಿಮಾ ಕತೆ , ಚಿತ್ರಕತೆ, ಸಂಭಾಷಣೆಯನ್ನೂ ಬರೆದಿದ್ದಾರೆ. ಈ ಚಿತ್ರವನ್ನು ಸತ್ಯ ಪಿಕ್ಚರ್ಸ್ Sathya Pictures ನಿರ್ಮಾಣ ಮಾಡಿದೆ.

ಚಿತ್ರ ಕಲಾವಿದರ ತಂಡ ಹೀಗಿದೆ

ಚಿತ್ರಕ್ಕೆ ಲವಿತ್ ಅವರ ಛಾಯಾಗ್ರಹಣ, ಬಿ.ಎನ್.ಕೆಂಪರಾಜು, ಕೌಶಿಕ್ ಹರ್ಷ ಸಂಗೀತ ನಿರ್ದೇಶನ ಹಾಗೂ ವರದರಾಜ್ ಕಾಮತ್ ಅವರ ಕಲಾ ನಿರ್ದೇಶನವಿದೆ. ಬೃಂದಾ ಆಚಾರ್ಯ, ಡಿ.ಸತ್ಯಪ್ರಕಾಶ್, ಅಯಾನ, ಅಥರ್ವ ಪ್ರಕಾಶ್, ದೊಡ್ಡಣ್ಣ, ವೀಣಾಸುಂದರ್, ಸುಂದರ್ ವೀಣಾ, ಹರಿಣಿ, ಧರ್ಮಣ್ಣ ಕಡೂರು, ತೇನಪ್ಪನ್ ಮೊದಲಾದವರು ನಟಿಸಿದ್ದಾರೆ. “ಎಕ್ಸ್ ಅಂಡ್ ವೈ” ಸಿನಿಮಾ ಆಟೋ ಆಂಬ್ಯುಲೆನ್ಸ್ ಚಾಲಕನ ಕಾಮಿಡಿ ಜರ್ನಿ ಕುರಿತ ಚಿತ್ರವಾಗಿದ್ದು, ಹಾಸ್ಯದ ಜೊತೆಜೊತೆಗೆ ವಿಭಿನ್ನವಾದ ಕಥಾ ಹಂದರ ಹೊಂದಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಲವ್ ಮಾಕ್ಟೇಲ್ ಲವ್ಲಿ ಜೋಡಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಫುಲ್ ಫನ್ ಸ್ಟೋರಿ ಇಲ್ಲದೆ

ಲವ್ ಮಾಕ್ಟೇಲ್ ಲವ್ಲಿ ಜೋಡಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಫುಲ್...

ಯುಗಾದಿ ಬಂತು, ಎಲ್ಲೆಲ್ಲೂ ಸಂಭ್ರಮ ತಂದಿತು: ಯುಗಾದಿ ಸಂಭ್ರಮಕ್ಕೆ ಈ ಹಾಡುಗಳು ನಿಮಗೆ ಜೊತೆಯಾಗುತ್ತವೆ

ಯುಗಾದಿ ಬಂತು, ಎಲ್ಲೆಲ್ಲೂ ಸಂಭ್ರಮ ತಂದಿತು: ಯುಗಾದಿ ಸಂಭ್ರಮಕ್ಕೆ ಈ ಹಾಡುಗಳು...

ದೂರ ಪಯಣಕ್ಕೆ ಕರೆದೊಯ್ಯುವ ರೋಮಾಂಚಕ ಸಿನಿಮಾಗಳಿವು

ದೂರ ಪಯಣಕ್ಕೆ ಕರೆದೊಯ್ಯುವ ರೋಮಾಂಚಕ ಸಿನಿಮಾಗಳಿವು ಟ್ರಾವೆಲ್ ಥ್ರೀಂ ನಲ್ಲಿ ಪ್ರೇಕ್ಷಕರನ್ನು ಮೋಡಿ...

ಓಟಿಟಿ ವೇದಿಕೆಯಲ್ಲಿ ನೀವು ನೋಡಲೇಬೇಕಾದ ಕನ್ನಡದ ಎರಡು ಅತ್ಯುತ್ತಮ ಚಿತ್ರಗಳು

ಓಟಿಟಿ ವೇದಿಕೆಯಲ್ಲಿ ನೀವು ನೋಡಲೇಬೇಕಾದ ಕನ್ನಡದ ಎರಡು ಅತ್ಯುತ್ತಮ ಚಿತ್ರಗಳು ವಿಭಿನ್ನ ಕತೆ-ವಿಭಿನ್ನ...