ಸೆಟ್ಟೇರಲಿದೆ “ಕಾವೇರಿ ತೀರದಲ್ಲಿ ಮುಂಗಾರಿದೆ”

Date:

  • ಸೆಟ್ಟೇರಲಿದೆ “ಕಾವೇರಿ ತೀರದಲ್ಲಿ ಮುಂಗಾರಿದೆ”
  • ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಆರ್.ಕೆ.ಗಾಂಧಿ ನಿರ್ದೇಶಿಸಲಿರುವ ಚಿತ್ರ
  • ಉದಯ್ ಹಾಗೂ ಸುಪ್ರೀತಾ ರಾಜ್ ನಾಯಕತ್ವದಲ್ಲಿ ಮೂಡಿಬರಲಿದೆ ಹೊಸ ಸಿನಿಮಾ

ವಿಭಿನ್ನ ಶೀರ್ಷಿಕೆಯಿಂದ ಸಿನಿಮನಸ್ಸುಗಳ‌ ಗಮನ ಸೆಳೆಯುತ್ತಿದೆ “ಕಾವೇರಿ ತೀರದಲ್ಲಿ ಮುಂಗಾರಿದೆ” Kaveri Theeradalli Mungaride ಮೂವಿ. ಸದ್ಯದಲ್ಲೇ ಸೆಟ್ಟೇರಲಿರುವ ಈ ಸಿನಿಮಾದ ಹೆಸರಿನಂತೆ ಕಂಟೆಂಟ್ ಕೂಡಾ ವಿಭಿನ್ನವಾಗಿರಲಿದೆಯಂತೆ. ತೆಲುಗು ಚಿತ್ರದಲ್ಲಿ ಪ್ರಸಿದ್ಧರಾಗಿರುವ ಆರ್.ಕೆ.ಗಾಂಧಿ R.K. Gandhi ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಸ್ನೇಹಾಲಯಂ ಕ್ರಿಯೇಷನ್ಸ್ Snehalayam Creations ಬ್ಯಾನರ್ ಅಡಿ ಬಂಡವಾಳ ಹೂಡಿದ್ದಾರೆ ನವೀನ್ ಕುಮಾರ್ ಗೌಡ, ಗೋಪಾಲ ಸ್ವಾಮಿ ಹಾಗೂ ವಸಂತ ನಾಯಕ್.

ಮನುಷ್ಯನ ಜೀವನವನ್ನು ಈ ಚಿತ್ರದಲ್ಲಿ ಸಮುದ್ರ ತೀರಕ್ಕೆ ಹೋಲಿಸಲಾಗಿದೆಯಂತೆ. ಮನುಷ್ಯನ ಜೀವನ ಸಮುದ್ರ ತೀರದಂತೆ‌, ಕೆಲವೊಮ್ಮೆ ಶಾಂತವಾಗಿ ಹರಿಯುತ್ತಿದ್ದರೆ, ಮತ್ತೆ ಕೆಲವೊಮ್ಮೆ ಭೋರ್ಗರೆಯುವ ಅಲೆಗಳಂತೆ ಕಷ್ಟಗಳನ್ನೂ ಅನುಭವಿಸಬೇಕಾಗುತ್ತದೆ. ಜೀವನ ಯಾವಾಗ ಹೇಗೆ ಬದಲಾಗುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇದನ್ನೇ ಕಥಾಹಂದರವಾಗಿಟ್ಟುಕೊಂಡು ನಿರ್ಮಿಸಲಾಗುತ್ತಿದೆ ಈ ಮೂವಿ. ಉದಯ್ Uday ಹಾಗೂ ಸುಪ್ರೀತಾ ರಾಜ್ Supreetha Raj ಚಿತ್ರದ ನಾಯಕತ್ವವಹಿಸಿದ್ದು, ಮಮತಾ, ಹೊಸಪೇಟೆ ರಾಘವೇಂದ್ರ, ಆಂಜಿನಪ್ಪ, ಅನ್ನಪೂರ್ಣ, ಸಿದ್ದಯ್ಯ ಹಿರೇಮಠ್, ಶೋಭರಾಜ್, ಪುಷ್ಪಗೌಡ ತಾರಾಗಣದಲ್ಲಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

“ಚೌಕಿದಾರ್”ಚಿತ್ರದ ಈ ಹೊಸ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಪೃಥ್ವಿ ಅಂಬಾರ್-ಸಾಯಿ ಕುಮಾರ್

“ಚೌಕಿದಾರ್”ಚಿತ್ರದ ಈ ಹೊಸ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಪೃಥ್ವಿ ಅಂಬಾರ್-ಸಾಯಿ...

“ಕೂಲಿ” ಸಿನಿಮಾದಲ್ಲಿ ಉಪೇಂದ್ರ ಪಾತ್ರವೇನು? ಕೊನೆಗೂ ಸಿಕ್ಕಿತು ಉತ್ತರ

“ಕೂಲಿ” ಸಿನಿಮಾದಲ್ಲಿ ಉಪೇಂದ್ರ ಪಾತ್ರವೇನು? ಕೊನೆಗೂ ಸಿಕ್ಕಿತು ಉತ್ತರ ಸೂಪರ್ ಸ್ಟಾರ್ ರಜನಿಕಾಂತ್...

“ರೌಡಿಸಂ ಮಾಡಬೇಡಿ” ಎನ್ನುವ ಸಂದೇಶ ನೀಡಲು ಬರ್ತಿದೆ “ಸೂರಿ ಅಣ್ಣ” ಸಿನಿಮಾ: ಏನಿದೆ ಈ ಚಿತ್ರದ ವಿಶೇಷ?

“ರೌಡಿಸಂ ಮಾಡಬೇಡಿ” ಎನ್ನುವ ಸಂದೇಶ ನೀಡಲು ಬರ್ತಿದೆ “ಸೂರಿ ಅಣ್ಣ” ಸಿನಿಮಾ:...

ಸ್ವಾತಂತ್ರ್ಯ ದಿನಾಚರಣೆಯಂದೇ ಸದ್ದು ಮಾಡಲಿದೆ “ದಿ ಡೆವಿಲ್” ಚಿತ್ರದ ಮೊದಲ ಸಾಂಗ್

ಸ್ವಾತಂತ್ರ್ಯ ದಿನಾಚರಣೆಯಂದೇ ಸದ್ದು ಮಾಡಲಿದೆ “ದಿ ಡೆವಿಲ್” ಚಿತ್ರದ ಮೊದಲ ಸಾಂಗ್ “ಇದ್ರೆ...