- ದೇವಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದ್ರು ನಟ ದರ್ಶನ್
- ಪತ್ನಿ ಜೊತೆಗೆ ರಿಲ್ಯಾಕ್ಸ್ ಮೂಡ್ ನಲ್ಲಿ ದರ್ಶನ ದೇವಿಯ ದರ್ಶನ ಪಡೆದ ದರ್ಶನ್
- ಸೆಲ್ಫಿ ತೆಗೆಯಲು ಮುಗಿಬಿದ್ದ ಅಭಿಮಾನಿಗಳು
ನಾಡದೇವತೆ ಚಾಮುಂಡೇಶ್ವರಿಯ ಕುರಿತು ವಿಶೇಷ ಭಕ್ತಿ ಇರಿಸಿಕೊಂಡಿರುವ ನಟ ದರ್ಶನ್ Darshan, ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಆಷಾಢದ ಮೊದಲ ವಾರದ ಶುಕ್ರವಾರ ದರ್ಶನ್ ಚಾಮುಂಡಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಸಂಪ್ರದಾಯ ಪ್ರತಿವರ್ಷ ಇರಿಸಿಕೊಂಡಿದ್ದಾರೆ.
ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು
ತಮ್ಮ ಪತ್ನಿ ಜೊತೆಗೆ ರಿಲ್ಯಾಕ್ಸ್ ಮೂಡ್ ನಲ್ಲಿ ದರ್ಶನ್ ದೇವಿಯ ದರ್ಶನ ಪಡೆದು ತೆರೆಳುವಾಗ ದೇವಳದ ಬಳಿ ಅವರೊಂದಿಗೆ ಸೆಲ್ಫಿ ತೆಗೆಯಲು ಅಭಿಮಾನಿಗಳು ಮುಗಿಬಿದ್ದರು. ದರ್ಶನ್ ನಟನೆಯ “ದಿ ಡೆವಿಲ್” The Devil ಚಿತ್ರ ಶೂಟಿಂಗ್ ನಡೆಯುತ್ತಿದ್ದು ಅವರ ಕಮ್ ಬ್ಯಾಕ್ ಚಿತ್ರ ಇದಾಗಿದೆ. ಆದರೆ ಮೈಸೂರಿನವರೇ ಆಗಿರುವ ದರ್ಶನ್ ರ ಈ ಚಿತ್ರ ಮೈಸೂರು ದಸರಾ ಸಮಯದಲ್ಲೇ ಬಿಡುಗಡೆಗೊಳ್ಳಲಿದೆ ಎನ್ನುವ ನಿರೀಕ್ಷೆ ಅವರ ಅಭಿಮಾನಿಗಳಿಗಿತ್ತು. ಆದರೆ ಡಿಸೆಂಬರ್ ಮೊದಲು ಈ ಸಿನಿಮಾ ಬಿಡುಗಡೆ ಕಷ್ಟ ಎನ್ನಲಾಗಿದೆ. ಆದರೆ ಸಿನಿಮಾ ರಿಲೀಸ್ ಗೆ ಮೊದಲೇ ತಮ್ಮ ನೆಚ್ಚಿನ ನಟ ಚಾಮುಂಡಿ ಬೆಟ್ಟದಲ್ಲಿ ಸಿಕ್ಕಿದ್ದಕ್ಕೆ ಪ್ರೇಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.


