- ರಾಜವರ್ಧನ್ ನಾಯಕತ್ವದ “ಗಜರಾಮ” ಫೆ.7 ರಂದು ತೆರೆಗೆ
- ಸುನಿಲ್ ಕುಮಾರ್ ವಿ.ಎ. ಅವರ ನಿರ್ದೇಶನ ಚಿತ್ರಕ್ಕಿದೆ.
- ಸಾರಾಯಿ ಶಾಂತಮ್ಮ ಹಾಡಿನ ಮೂಲಕ ಜನರನ್ನು ಮೋಡಿ ಮಾಡಿದೆ
ಸುನಿಲ್ ಕುಮಾರ್ ವಿ.ಎ. ಆಕ್ಷನ್ ಕಟ್ ಹೇಳಿರುವ, ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನರಸಿಂಹ ಮೂರ್ತಿ ಹಾಗೂ ಬಾಂಡ್ ರವಿ ನಿರ್ಮಾಣ ಮಾಡುತ್ತಿರುವ “ಗಜರಾಮ” Gajarama Movie ಮೂವೀ ಫೆಬ್ರವರಿ 7 ರಂದು ತೆರೆಕಾಣಲಿದೆ. ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ನಾಯಕ ನಟ ರಾಜವರ್ಧನ್ ಗೆ Rajavardhan ಜೋಡಿಯಾಗಿ ತಪಸ್ವಿನಿ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಟೈಟಲ್, ಟೀಸರ್, ಸಾರಾಯಿ ಶಾಂತಮ್ಮ ಹಾಡಿನ ಮೂಲಕ ಜನರ ಮನಸ್ಸನ್ನು ಮೋಡ ಮಾಡಿರುವ ಈ ಸಿನಿಮಾದಲ್ಲಿ ದೀಪಕ್, ಕಬೀರ್ ಸಿಂಗ್, ರಾಗಿಣಿ ಇವರುಗಳು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡುಗಳಿಗೆ ಚಿನ್ಮಯ್ ಭಾವಿಕೆರೆ, ಜಯಂತ ಕಾಯ್ಕಿಣಿಯವರ ಸಾಹಿತ್ಯ ಮನೋಮೂರ್ತಿಯವರ ಸಂಗೀತವಿದೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಜ್ಞಾನೇಶ್ ಬಿ.ಮಠದ್ ಸಂಕಲನ, ಧನಂಜಯ್ ಅವರು ಕೋರಿಯಾಗ್ರಫಿ ಮೂಲಕ ಮಾಸ್ ಎಂಟರ್ಟೈನರ್ ಮೂವಿ ಗಜರಾಗದಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ.