“ಉಜ್ಜಯಿನಿ ಮಹಾಕಾಲ” ಹೊಸಪ್ರತಿಭೆಗಳಿಗೆ ವೇದಿಕೆ

Date:

  • “ಉಜ್ಜಯಿನಿ ಮಹಾಕಾಲ” ಹೊಸಪ್ರತಿಭೆಗಳಿಗೆ ವೇದಿಕೆ
  • ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ಬೆಳ್ಳಿತೆರೆಯಲ್ಲಿ ವಿನಯ್
  • ಹರಿಪ್ರಸಾದ್ ಎಂ ಮಂಡ್ಯ ಕೈಚಳಕದಲ್ಲಿ ಮೂಡಿಬರಲಿದೆ ಚಿತ್ರ

ಹೊಸತಂಡದ ಸಮಾಗಮದಲ್ಲಿ ಮೂಡಿಬರುತ್ತಿರುವ “ಉಜ್ಜಯಿನಿ ಮಹಾಕಾಲ” Ujjaini Mahakala ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ನರಸಿಂಹಲು ಬಿಡುಗಡೆ ಮಾಡಿದರು. ಹರಿಪ್ರಸಾದ್ ಎಂ ಮಂಡ್ಯ Hariprasad M Mandya ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದ್ದು, ಒಂದು ತಿಂಗಳಿನಿಂದ ಚಿತ್ರೀಕರಣ ನಡೆಯುತ್ತಿದ್ದು, ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಪೂರೈಸಿದೆ.

ಸಸ್ಪೆನ್ಸ್ ಥ್ರಿಲ್ಲರ್ ಮೂವೀ

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ “ಉಜ್ಜಯಿನಿ ಮಹಾಕಾಲ” ಕೂಡ ಒಂದು. ನಿರ್ದೇಶಕರ ಮಾತುಗಳಲ್ಲೇ ಚಿತ್ರದ ಬಗ್ಗೆ ಕೇಳುವುದಾದರೆ, “ಈ ಚಿತ್ರ ಪೌರಾಣಿಕ ಚಿತ್ರವಲ್ಲ. ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಶೀರ್ಷಿಕೆಯಿಡಲೂ ಕಾರಣವಿದೆ. ಶೀರ್ಷಿಕೆಗೂ ಚಿತ್ರಕ್ಕೂ ಸಂಬಂಧವಿದೆ. ಮುಂದಿನ ಹಂತದಲ್ಲಿ ಉಜ್ಜಯಿನಿಯಲ್ಲೂ ಚಿತ್ರೀಕರಣ ನಡೆಯಲಿದೆ. ಈಗ ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಇನ್ನೂ ಎಲ್ಲರ ಜೀವನದಲ್ಲೂ ಮಹಾಕಾಲ ಅಂತ ಒಂದು ಬರುತ್ತದೆ. ಅದು ನಮ್ಮ ನಾಯಕನ ಜೀವನದಲ್ಲೂ ಬಂದಾಗ ಏನಾಗಬಹುದು? ಎಂಬುದನ್ನು ಸಹ ತೋರಿಸುತ್ತಿದ್ದೇವೆ.” ಎಂದಿದ್ದಾರೆ.

ಹೀಗಿದೆ ಹೊಸಬರ ತಂಡ

ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು, ನಿರ್ಮಾಣಕ್ಕೆ ರತ್ನಾಕರ್ ಹಾಗೂ ಮೋಹನ್ ಅವರು ಸಾಥ್ ನೀಡಿದ್ದಾರೆ. ಸಹ ಕಲಾವಿದನಾಗಿ ಅಭಿನಯಿಸುತ್ತಿದ್ದ ವಿನಯ್ Vinay ಅವರಿಗೆ ನಾಯಕನಾಗಿ ಇದು ಮೊದಲ ಚಿತ್ರ. ನಾಯಕಿಯರಾಗಿ ಅಶ್ವಿನಿ ಬೇಲೂರು, ಡಯಾನ ಜೆಸಿಕಾ ನಟಿಸಿದ್ದಾರೆ. ಇನ್ನುಳಿದಂತೆ ಮೋಹನ್ ಚನ್ನಪಟ್ಟಣ, ರಮಣ್ ಮುಂತಾದವರು ತಾರಾಗಣದಲ್ಲಿದ್ದಾರೆ. ರಘು ಅ ರೂಗಿ ಛಾಯಾಗ್ರಹಣ, ಕಲ್ಕಿ ಅಭಿಷೇಕ್ ಸಂಗೀತ ನಿರ್ದೇಶನ ಹಾಗೂ ಗಣಿ ಲಚ್ಚು & ರಘು ಅ ರೂಗಿ ಅವರ ಸಂಕಲನ ಚಿತ್ರಕ್ಕಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

“ಸು ಫ್ರಮ್ ಸೋ” ಚಿತ್ರದ ಚಿತ್ರೀಕರಣದ ರಿಯಲ್ ಲೊಕೇಶನ್ ರಿವೀಲ್

“ಸು ಫ್ರಮ್ ಸೋ” ಚಿತ್ರದ ಚಿತ್ರೀಕರಣದ ರಿಯಲ್ ಲೊಕೇಶನ್ ರಿವೀಲ್ ಚಿತ್ರತಂಡ ಸೆಟ್...

100 ಕೋಟಿ ಗಳಿಸಿ ದಾಖಲೆ ಬರೆದ ಭಾರತದ ಮೊಟ್ಟ ಮೊದಲ ಆನಿಮೇಷನ್ ಚಿತ್ರ “ಮಹಾವತಾರ ನರಸಿಂಹ”

100 ಕೋಟಿ ಗಳಿಸಿ ದಾಖಲೆ ಬರೆದ ಭಾರತದ ಮೊಟ್ಟ ಮೊದಲ ಆನಿಮೇಷನ್...

ಸದ್ದಿಲ್ಲದೇ ನಡೆಯುತ್ತಿದೆ “ಕಟಕ 2” ಚಿತ್ರದ ತಯಾರಿ

ಸದ್ದಿಲ್ಲದೇ ನಡೆಯುತ್ತಿದೆ “ಕಟಕ 2” ಚಿತ್ರದ ತಯಾರಿ ವಿಭಿನ್ನ ಕತೆ ಮತ್ತು ನಿರೂಪಣೆಯ...

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು ಗ್ರಾಮ ಜೀವನದ ಕತೆ ಹೇಳುವ ಎರಡು ಚಿತ್ರಗಳು

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು...