- ತಾಯಿಗೆ ಕೊಟ್ಟ ಆ ಮಾತನ್ನ ಎಂದೂ ತಪ್ಪಿರಲಿಲ್ಲ ಸರೋಜಾದೇವಿ
- 17 ನೇ ವಯಸ್ಸಿಗೆ ‘ಪಾಂಡುರಂಗ ಮಹಾತ್ಯಂ’ ಎನ್ನುವ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಸರೋಜಾದೇವಿ
- 1960-70 ನಡುವೆ ಕನ್ನಡದ ಬಹುತೇಕ ಚಿತ್ರಗಳಲ್ಲಿ ನಟಿಯಾಗಿ ಎಲ್ಲರ ಗಮನ ಸೆಳೆದಿದ್ದರು
ಹಿರಿಯ ನಟಿ ಬಿ ಸರೋಜಾದೇವಿ B Sarojadevi(87) ಇದೀಗ ಲೋಕ ಬಿಟ್ಟು ಹೋಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅವರ ಬದುಕಿನ ಕುರಿತು ಒಂದಷ್ಟು ಮಾಹಿತಿಗಳೂ ಕೂಡ ರಿವಿಲ್ ಆಗಿದೆ. ಏಳು ದಶಕಗಳ ಕಾಲ ಚಿತ್ರರಂಗದಲ್ಲಿ ಮಿಂಚಿದ್ದ ಕಿತ್ತೂರುರಾಣಿ ಚೆನ್ನಮ್ಮ Kittururani Chennamma, ಅಮರಶಿಲ್ಪಿ ಜಕಣಾಚಾರಿ Amarashilpi Jakanachari, ಬಬ್ರುವಾಹನ Babruvahana, ಭಾಗ್ಯವಂತರು Bhagyavantharu ಸೇರಿದಂತೆ ಸುಮಾರು 200 ಚಿತ್ರಗಳಲ್ಲಿ ನಟಿಸಿರುವ ಅಭಿನಯ ಶಾರದೆ Abhinaya Sharade ಬಿರುದಾಂಕಿತ ಹಿರಿಯ ನಟಿ ಬಿ. ಸರೋಜಾದೇವಿ. ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದು, ಕನ್ನಡ ಚಿತ್ರರಂಗದಲ್ಲಿ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂದೆನಿಸಿಕೊಂಡಿದ್ದರು.
ಸರೋಜಾದೇವಿ ಸಿನಿ ಪಯಣ ಹೀಗಿತ್ತು
ಸಣ್ಣ ವಯಸ್ಸಿಗೆ ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ “ಮಹಾಕವಿ ಕಾಳಿದಾಸ”Mahakavi Kalidasa ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. “ಪಾಂಡುರಂಗ ಮಹಾತ್ಯಂ” Panduranga Mahathyam ಎನ್ನುವ ತೆಲುಗು ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಸರೋಜಾದೇವಿ, ಬಳಿಕ ಕನ್ನಡದ ಬಹುತೇಕ ಚಿತ್ರಗಳಲ್ಲಿ ನಟಿಯಾಗಿ ಎಲ್ಲರ ಗಮನ ಸೆಳೆದಿದ್ದರು. ಬೆಂಗಳೂರಿನವರಾದ ಸರೋಜಾದೇವಿ ಕನ್ನಡದ ನೆಲದಲ್ಲೇ ಇದ್ದುಕೊಂಡು ಕನ್ನಡ ಚಿತ್ರರಂಗದಲ್ಲೂ ಬೇಡಿಕೆಯ ನಟಿ ಅನ್ನಿಸಿ, ತೆಲುಗು, ತಮಿಳು ಭಾಷೆಗಳಲ್ಲೂ ಆ ಕಾಲಕ್ಕೆ ಬೇಡಿಕೆಯ ನಟಿಯಾದರು. 2019ರಲ್ಲಿ ರಿಲೀಸ್ ಆದ ಪುನೀತ್ ರಾಜ್ಕುಮಾರ್ ನಟನೆಯ “ನಟಸಾರ್ವಭೌಮ” Natasarabhouma ಅವರ ಕೊನೆಯ ಚಿತ್ರ.
ತಾಯಿಗೆ ಕೊಟ್ಟ ಮಾತು ಹೀಗಿತ್ತು
ಸಭ್ಯ ಪಾತ್ರಗಳಲ್ಲೇ ನಟಿಸಿದ್ದು ಎಲ್ಲಿಯೂ ಬೋಲ್ಡ್ ಪಾತ್ರಗಳಲ್ಲಿ ಅವರೆಂದೂ ಕಾಣಿಸಿಕೊಂಡಿರಲಿಲ್ಲ, ಇದಕ್ಕೆ ಕಾರಣ ಅವರು ತಾಯಿಗೆ ಕೊಟ್ಟಿದ್ದ ಆ ಮಾತು. ಅವರ ತಂದೆ ಪೊಲೀಸ್ ಅಧಿಕಾರಿಯಾಗಿದ್ರು, ತಾಯಿ ಗೃಹಿಣಿಯಾಗಿದ್ರು. ಇವರಿಗೆ ನೃತ್ಯ ಕಲಿಯಲು, ಚಿತ್ರರಂಗಕ್ಕೆ ಸೇರಲು ಇಬ್ಬರೂ ಪ್ರೋತ್ಸಾಹಿಸಿದ್ರು. ಆದ್ರೆ ತಾಯಿ ಮಾತ್ರ ಮಗಳಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಫಾಲೋ ಮಾಡುವಂತೆ ತಿಳಿ ಹೇಳುತ್ತಿದ್ದರು. ತೀರಾ ಬೋಲ್ಡ್ ಆಗಿ ಕಾಣುವಂತಹ, ಮೈ ತೋರಿಸುವಂತಹ ಈಜುಡುಗೆ, ತೋಳಿಲ್ಲದ ಬ್ಲೌಸ್ ಗಳನ್ನು ಬಳಸದಂತೆ ಕಟ್ಟುನಿಟ್ಟಾಗಿ ಹೇಳುತ್ತಿದ್ದರು. ಸರೋಜಾದೇವಿ ತಮ್ಮ ಚಿತ್ರರಂಗದ ಜೀವನದುದ್ದಕ್ಕೂ ತಾಯಿಯ ಮಾತನ್ನು ಪಾಲಿಸಿದ್ರು. ಎಲ್ಲಿಯೂ ಬೋಲ್ಡ್ ಎನ್ನಿಸುವಂತಹ ಡ್ರೆಸ್ ಗಳನ್ನು ಅವರ ಬಳಸದೇ ನಟನೆ ಮತ್ತು ಸೌಂದರ್ಯದಲ್ಲಿಯೇ ಚಿತ್ರರಂಗದಲ್ಲಿ ಶಾಶ್ವತವಾದ ಸ್ಥಾನ ಪಡೆದದ್ದು ವಿಶೇಷ. ಬೌಲ್ಡ್ ಆಗಿ ಕಂಡರೆ ಮಾತ್ರ ಚಿತ್ರರಂಗದಲ್ಲಿ ಗೆಲ್ಲೋದು ಎನ್ನುವ ಮನಸ್ಥಿತಿ ಈಗಿನ ಚಿತ್ರರಂಗದಲ್ಲಿದೆ. ಆದ್ರೆ ಆ ಕಾಲದಲ್ಲಿ ನಟನೆಗೇ ಜಾಸ್ತಿ ಮೌಲ್ಯವಿತ್ತು ಎನ್ನುವುದು ಈ ಪ್ರಸಂಗದಿಂದ ಸಾಬೀತಾಗುತ್ತದೆ.
ಸರೋಜಾ ದೇವಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ, ಪದ್ಮ ಭೂಷಣ ಪ್ರಶಸ್ತಿ ಸೇರಿದಂತೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಯೂ ಲಭಿಸಿದೆ.