ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ನಾಯಕತ್ವದ “ಬೇಗೂರು ಕಾಲೋನಿ” ತೆರೆಗೆ

Date:

  • ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ನಾಯಕತ್ವದ “ಬೇಗೂರು ಕಾಲೋನಿ” ತೆರೆಗೆ
  • ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ “ಬೇಗೂರು ಕಾಲೋನಿ” ಚಿತ್ರಕ್ಕಾಗಿ ಡಾ. ವಿ.ನಾಗೇಂದ್ರಪ್ರಸಾದ್ ಬರೆದಿರುವ “ಜೈ ಭೀಮ್” ಹಾಡು ಬಿಡುಗಡೆಯಾಗಿದೆ.
  • ಒಂದು ಪ್ರದೇಶದಲ್ಲಿ ಆಟದ ಮೈದಾನವನ್ನು ಭದ್ರಪಡಿಸಿಕೊಳ್ಳುವ ಹೋರಾಟದ ಸುತ್ತ ಸುತ್ತುವ ಈ ಚಿತ್ರ ಜ.31 ರಂದು ತೆರೆಗೆ

ಶ್ರೀಮಾ ಸಿನಿಮಾಸ್ ಲಾಂಛನದಲ್ಲಿ ಎಂ ಶ್ರೀನಿವಾಸ್ ಬಾಬು ಅವರು ನಿರ್ಮಿಸಿರುವ, ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ಹಾಗೂ “ಬಿಗ್ ಬಾಸ್” Big Boss ಖ್ಯಾತಿಯ ರಾಜೀವ್ ಹನು Rajeev Hanu ನಾಯಕರಾಗಿ ನಟಿಸಿರುವ ಚಿತ್ರ “ಬೇಗೂರು ಕಾಲೋನಿ” Begur Colony Movie ಜೈ ಭೀಮ್ ಹಾಡು ಹಾಗೂ ಟ್ರೈಲರ್ ಆನಂದ್ ಸ್ಟುಡಿಯೋಸ್ ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿದೆ. ಜ.31 ಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರದ ವಿಭಿನ್ನ ಟ್ರೈಲರ್ ಈಗಾಗಲೇ ಎಲ್ಲರ ಮನಮುಟ್ಟಿದೆ.

ಬಿಡುಗಡೆಗೊಂಡಿದೆ “ಜೈ ಭೀಮ್” ಹಾಡು

ಡಾ. ವಿ.ನಾಗೇಂದ್ರಪ್ರಸಾದ್ Dr. V Nagendra Prasad ಅವರು ಬರೆದಿರುವ ಅದ್ಭುತ ಸಾಹಿತ್ಯವಿರುವ “ಜೈ ಭೀಮ್” Jai Bheem ಹಾಡು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಆನಂದ್ ಆಡಿಯೋ ಯೂಟ್ಯೂಬ್ ಮೂಲಕ ಬಿಡುಗಡೆಯಾಗಿದೆ. ಅಭಿನಂದನ್ ಕಶ್ಯಪ್ ಸಂಗೀತ ನೀಡಿರುವ ಈ ಹಾಡನ್ನು ಹೆಸರಾಂತ ಗಾಯಕ ಶಂಕರ್ ಮಹಾದೇವನ್ ಅವರ ಅಮೋಘ ಕಂಠಸಿರಿಯಿದೆ.

ಮೈದಾನದ ಸುತ್ತ ಸುತ್ತುವ ಚಿತ್ರ

ಸಿನಿಮಾ ಪ್ರವೇಶಿಸುವ ಮೊದಲು, ಮಂಜು ರಾಷ್ಟ್ರೀಯ ಮಟ್ಟದ ಖೋ-ಖೋ ಆಟಗಾರರಾಗಿ, ಚುರುಕುತನಕ್ಕಾಗಿ “ಫ್ಲೈಯಿಂಗ್ ಕಿಂಗ್” ಎಂಬ ಬಿರುದನ್ನು ಗಳಿಸಿದ್ದರು. ಇಂದಿನ ಯುವಕರಿಗೆ ಆಟದ ಮೈದಾನಗಳು ಮತ್ತು ದೈಹಿಕ ಚಟುವಟಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಸಿನಿಮಾದ ಪ್ರಮುಖ ಉದ್ದೇಶವಾಗಿದೆ. ಬೇಗೂರ್ ಕಾಲೋನಿ” ಒಂದು ಹೋರಾಟದ ಕಥೆ ಮಾತ್ರವಲ್ಲದೇ, ಕಾಲೋನಿಲ್ಲಿರುವ ಮಧ್ಯಮವರ್ಗದ ಜನರ ಕಥೆಯೂ ಆಗಿದೆ. ಇಲ್ಲಿ ಆಟದ ಮೈದಾನಕ್ಕಾಗಿ ಹೋರಾಟವಿದೆ. ಮೈದಾನಗಳೆಲ್ಲಾ ಮನೆಗಳಾಗುತ್ತಿದೆ. ಮಕ್ಕಳಿಗೆ ಆಡಲು ಜಾಗವಿಲ್ಲದ ಹಾಗೆ ಆಗಿದೆ. ಈ ಅಂಶದ ಆಧಾರದ ಮೇಲೆ ಕಥೆ ಹೆಣೆಯಲಾಗಿದೆ. ಹಿಂದು, ಮುಸ್ಲಿಂ, ಕ್ರೈಸ್ತ ಹೀಗೆ ಎಲ್ಲಾ ಜನಾಂಗದವರು ವಾಸಿಸುವ ಸಾಮರಸ್ಯದ ಸಂಕೇತವಿರುವ ಕಾಲೋನಿಯ ಕತೆಯಿದು.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ತೆರೆಯ ಮೇಲೆ ಮಿಂಚಲಿದೆ ತಂದೆ ಮಕ್ಕಳ ಬಾಂಧವ್ಯದ ಕಹಾನಿ: ಬರ್ತಿದೆ ಬಹುನಿರೀಕ್ಷಿತ ಚಿತ್ರಗಳು!

ತಂದೆ ಮಕ್ಕಳ ಬಾಂಧವ್ಯವನ್ನು ಸಾರುವ ಬಹಳಷ್ಟು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಬಂದು...

ಜೂನ್ 20 ರಂದು ರಾಯಲ್ ಆಗಿ ತೆರೆಗಪ್ಪಳಿಸಲಿದೆ “ಕುಬೇರ”

ಜೂನ್ 20 ರಂದು ರಾಯಲ್ ಆಗಿ ತೆರೆಗಪ್ಪಳಿಸಲಿದೆ “ಕುಬೇರ” ದುಡ್ಡೇ ದೊಡ್ಡಪ್ಪ, ನ್ಯಾಯ...

ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್

ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್ ಕೊಡಗಿನ ಸ್ವಾದವಿರುವ ವಿಭಿನ್ನ ಚಿತ್ರವಿದು ರಾ.ಸೂರ್ಯ...

ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ ಗೀತೆ

ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ...