ಕರಾವಳಿಯಲ್ಲಿ ಮಿಂಚಲಿದೆ “ಮಿಡಲ್ ಕ್ಲಾಸ್ ಫ್ಯಾಮಿಲಿ”

Date:

  • ಕರಾವಳಿಯಲ್ಲಿ ಮಿಂಚಲಿದೆ “ಮಿಡಲ್ ಕ್ಲಾಸ್ ಫ್ಯಾಮಿಲಿ”
  • ಇಂದು ತೆರೆಯ ಮೇಲೆ ರಾಹುಲ್ ಅಮೀನ್ ನಿರ್ದೇಶನದ ತುಳು ಚಿತ್ರ ಮಿಡಲ್ ಕ್ಲಾಸ್ ಫ್ಯಾಮಿಲಿ
  • ಜ. 19 ರಂದು ಯುಎಇ ನಲ್ಲಿ ದಾಖಲೆಯ 16 ಪ್ರೀಮಿಯರ್ ಶೋ ಯಶಸ್ವಿ ಪ್ರದರ್ಶನ

ಕೌಟುಂಬಿಕ ಕಥೆಯನ್ನು ಒಳಗೊಂಡ ಹಾಸ್ಯ ಪ್ರಧಾನ ತುಳು ಚಿತ್ರ “ಮಿಡಲ್ ಕ್ಲಾಸ್ ಫ್ಯಾಮಿಲಿ” Middle Class Family Movie ಕರಾವಳಿಯಾದ್ಯಂತ ಜ. 31 ರಂದು ಬಿಡುಗಡೆಯಾಗಿದೆ. ಎಂಟರ್ಟೈನ್ಮೆಂಟ್ ಪ್ರೊಡಕ್ಷನ್, ಎಚ್.ಆರ್.ಪಿ. ಫಿಲ್ಮ್ಸ್, ಹರಿಪ್ರಸಾದ್ ರೈ ಅವರ ಸಹಯೋಗದಲ್ಲಿ ಆನಂದ ಕುಂಪಲ ನಿರ್ಮಾಣ ಮಾಡುತ್ತಿರುವ ಚಿತ್ರ ಇದಾಗಿದ್ದು ರಾಹುಲ್ ಅಮೀನ್ ಅವರ ನಿರ್ದೇಶನವಿದೆ.

ಚಿತ್ರದಲ್ಲಿ ನಟಿಸಿದ್ದಾರೆ ತುಳುರಂಗದ ಮೇರು ನಟರು

ವಿನೀತ್ ಕುಮಾರ್ Vinith Kumar ಹಾಗೂ ಸಮತಾ ಅಮೀನ್ Ameen ಮುಖ್ಯಭೂಮಿಕೆಯಲ್ಲಿ ಮಿಂಚಿದ್ದಾರೆ. ಇನ್ನುಳಿದಂತೆ ತುಳು ಚಿತ್ರ ರಂಗದ ಮೇರು ನಟರುಗಳಾದ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಚೈತ್ರಾ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರು, ಸಂದೀಶ್ ಶೆಟ್ಟಿ ಮಾಣಿಬೆಟ್ಟು, ಮೈಮ್ ರಾದುದಾಸ್, ರೂಪಾ ವರ್ಕಾಡಿ, ರವಿ ರಾಮಕುಂಜ ಮುಂತಾದ ಘಟಾನುಘಟಿಗಳಿದ್ದಾರೆ.

ಯುಎಇ ಹಾಗೂ ಕೆನಡಾದಲ್ಲೂ ಬಿಡುಗಡೆ

ಈಗಾಗಲೇ ಜ. 25 ರಂದು ರೋಹನ್ ಕಾರ್ಪೋರೇಷನ್ ಅಧಿಕಾರಿಗಳ ನೇತೃತ್ವದಲ್ಲಿ ಮಂಗಳೂರಿನ ಭಾರತ್ ಸಿನಿಮಾಸ್ ನಲ್ಲಿ 3 ಪ್ರೀಮಿಯರ್ ಶೋ ಗಳು ನಡೆದಿದ್ದು, 31 ರಂದು ಕರಾವಳೀಯಾದ್ಯಂತ, ಫೆ. 2 ರಂದು ಕೆನಡಾದಲ್ಲಿ ಹಾಗೂ ಫೆ.7 ರಂದು ಯುಎಇ ನಲ್ಲಿ ತೆರೆಕಾಣಲಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಗೆ ಎಂಟ್ರಿ ಕೊಡುತ್ತಿದೆ ಎರಡು ಬಹುನಿರೀಕ್ಷಿತ ಸಿನಿಮಾಗಳು – Two of the Most Awaited Movies are Finally Entering OTT This Week

• ಮಳೆಗಾಲದಲ್ಲಿ ಮನೆಯಲ್ಲಿಯೇ ಬಿಂದಾಸ್ ಮನರಂಜನೆ• ಒಂದು ಆಕ್ಷನ್ ಇನ್ನೊಂದು ಅಪರೂಪದ...

ಓಟಿಟಿಯಲ್ಲಿ ಸದ್ದು ಮಾಡ್ತಿವೆ ಈ ಸೂಪರ್ ಹಿಟ್ ಚಿತ್ರಗಳು

ಜೂನ್ ಮಳೆಯೊಂದಿಗೆ ಆನಂದಿಸಬಹುದಾದ ಇಂಟರೆಸ್ಟಿಂಗ್ ಸಿನಿಮಾಗಳು ಆಕ್ಷನ್, ಕಾಮಿಡಿ, ಸಖತ್ ಥ್ರಿಲ್ಲರ್ ಮೂವಿಗಳದ್ದೇ...

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್ ರಂಗಭೂಮಿಯಿಂದ ಕಲಾಯಾತ್ರೆ ಆರಂಭಿಸಿ...

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ ಯುವ ಸಂಗೀತ ನಿರ್ದೇಶಕನ...