- ಹೊಸವರ್ಷದ ಹರುಷಕ್ಕೆ ದ್ಯಾವನೂರು ಮಂಜುನಾಥ್ ರವರ “ಎಣ್ಣೆ ಪಾರ್ಟಿ ಡಿಜೆ” ಹಾಡು ರಿಲೀಸ್
- ಡಿಸೆಂಬರ್ 29ರಂದು “ಎಣ್ಣೆ ಪಾರ್ಟಿ ಡಿಜೆ” ಹಾಡು ಬಿಡುಗಡೆ
- ಹಾಡನ್ನು Let’s Pack & Go ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಬಹುದು
ಹಾಸನದ ದ್ಯಾವನೂರು ಮಂಜುನಾಥ್ ಅವರು ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ವಿಶೇಷ ಉಡುಗೊರೆ ನೀಡಿ, ತಮ್ಮ ಹೊಸ ಹಾಡು “ಎಣ್ಣೆ ಪಾರ್ಟಿ ಡಿಜೆ”ಯನ್ನು ರಿಲೀಸ್ ಮಾಡುತ್ತಿದ್ದಾರೆ. ಇಂದಿನ ಯುವಜನತೆಯ ಅಭಿರುಚಿಗೆ ತಕ್ಕನಾಗಿರುವ ಈ ಹಾಡು ಹೊಸವರ್ಷಾಚರಣೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲಿದೆ.
ಪಾರ್ಟಿ ಮೂಡ್ ಗೆ ಕಿಕ್ ಕೊಡತ್ತೆ ಈ ಹಾಡು
ಆಧುನಿಕ ಸಂಗೀತದ ಝಲಕ್ ನೀಡುವ ಈ ಹಾಡು ಪಾರ್ಟಿ ಗೆ ಪರ್ಫೆಕ್ಟ್ ಫೀಲ್ ಕೊಡತ್ತೆ. ಹೊಸವರ್ಷಕ್ಕೆ ಹಿಟ್ ಆಗಲಿದೆ ಈ ಹಾಡು. ಈ ಹಾಡಿನಲ್ಲಿ “ಮಿನಿ ಮಿನಿ ಕಣ್ಣಿಗೆ ಕ್ಯಾಟ್ ವಾಕ್ ಡ್ಯಾನ್ಸ್”, “ಗ್ಲಾಸ್ ಎತ್ತಿ ಹೇಳು ಚಸ್”, “ಹೊಸ ವರ್ಷಕ್ಕೆ ಬೇಕೆ ಬೇಕು ಎಣ್ಣೆ ಪಾರ್ಟಿ ಡಿಜೆ” ಇಂತಹ ಅದ್ಧೂರಿ ಸಾಲುಗಳು ಪಾರ್ಟಿ ಮೂಡ್ ಗೆ ಕಿಕ್ ಕೊಡ್ತಾವೆ. ಅಷ್ಟೇ ಅಲ್ಲದೇ ಈ ಹಾಡು ಹಾರ್ಟ್ ಗೆ ಟಚ್ ಆಗುವ ಡಿಜೆ ಬೀಟ್ಸ್ ಮತ್ತು ರೋಮಾಂಚಕ ಸೌಂಡ್ ಎಫೆಕ್ಟ್ಸ್‌ಗಳಿಂದ ತುಂಬಿದೆ.

ಹಾಡನ್ನು ವೀಕ್ಷಿಸಲು ಹೀಗೆ ಮಾಡಿ
“ಎಣ್ಣೆ ಪಾರ್ಟಿ ಡಿಜೆ” ಹಾಡು 29/12/2024 ರಂದು ದ್ಯಾವನೂರು ಮಂಜುನಾಥ್ ಅವರ Let’s Pack & Go ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ. ಹಾಡಿನ ಫೀಲ್ ಪಡೆಯಲು, ಹೊಸವರ್ಷಕ್ಕೊಂದು ಹೊಸ ಹಾಡಿಗೆ ಹೆಜ್ಜೆ ಹಾಕಲು ಯೂಟ್ಯೂಬ್ ಚಾನಲ್ ವಿಸಿಟ್ ಮಾಡಿ.