- ಗೇಮ್ ಚೇಂಜರ್ ಟ್ರೇಲರ್ ರಿಲೀಸ್.!
- ಕನ್ನಡದಲ್ಲಿಯೂ ಬಿಡುಗಡೆಯಾಗ್ತಿದೆ ರಾಮ್ ಚರಣ್ ಸಿನಿಮಾ
ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹಾಗೂ ಆರ್.ಶಂಕರ್ ಕಾಂಬಿನೇಷನ್ ಗೇಮ್ ಚೇಂಜರ್ Game Changer Movie ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ, ಪ್ರೇಕ್ಷಕ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಹೈದ್ರಾಬಾದ್ ನಲ್ಲಿ ಇತ್ತೀಚೆಗೆ ಅದ್ದೂರಿಯಾಗಿ ನಡೆದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ನಿರ್ದೇಶಕ ರಾಜಮೌಳಿ ವಿಶೇಷ ಅಥಿತಿಯಾಗಿ ಆಗಮಿಸಿದ್ದರು. ಗೇಮ್ ಚೇಂಜರ್ ಟ್ರೇಲರ್ ರಿಲೀಸ್ ಮಾಡಿ ಜಕ್ಕಣ್ಣ ಇಡೀ ತಂಡಕ್ಕೆ ಶುಭಾಷಯ ತಿಳಿಸಿದರು. 2 ನಿಮಿಷ 40 ಸೆಕೆಂಡ್ ಗಳಿರುವ ಗೇಮ್ ಚೇಂಜರ್ ಟ್ರೇಲರ್ ನಲ್ಲಿ ರಾಮ್ ಚರಣ್ ಡಬಲ್ ರೋಲ್ ನಲ್ಲಿ ಅಬ್ಬರಿಸಿದ್ದಾರೆ. ಒಮ್ಮೆ ರಾಜಕಾರಣಿ ಪಾತ್ರದಲ್ಲಿ, ಇನ್ನೊಂದು ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಐಎಎಸ್ ಅಧಿಕಾರಿಯಾಗಿ ರಾಜಕೀಯದಲ್ಲಿ ನಡೆಯುವ ಭ್ರಷ್ಟಾಚಾರದ ವಿರುದ್ಧ ರಾಮ್ ಹೇಗೆಲ್ಲಾ ಹೋರಾಟ ಮಾಡ್ತಾರೆ ಅನ್ನೋದನ್ನು ಟ್ರೇಲರ್ ನಲ್ಲಿ ಕಟ್ಟಿಕೊಡಲಾಗಿದೆ.

ಕನ್ನಡದಲ್ಲಿಯೂ ಬಿಡುಗಡೆಯಾಗ್ತಿದೆ ರಾಮ್ ಚರಣ್ ಸಿನಿಮಾ;
ಟಾಲಿವುಡ್‌ನ ಗೇಮ್ ಚೇಂಜರ್ ಚಿತ್ರ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ತೆಲುಗು, ತಮಿಳು, ಮಲೆಯಾಳಂ, ಹಿಂದಿ ಹೀಗೆ ಇಷ್ಟು ಭಾಷೆಯಲ್ಲಿ ರಿಲೀಸ್ ಆಗುತ್ತಿರೋ ಈ ಚಿತ್ರ ಕನ್ನಡದಲ್ಲೂ ಬರ್ತಿದೆ. ಕನ್ನಡ ಸಿನಿಮಾ ಪ್ರೇಮಿಗಳು ಈ ತೆಲುಗು ಚಿತ್ರವನ್ನ ಕನ್ನಡದಲ್ಲಿಯೇ ನೋಡಬಹುದು.