- ಗಣೇಶ್ ಹಾಗೂ ರಮೇಶ್ ಅರವಿಂದ್ ನಟನೆಯ ಬಹುನಿರೀಕ್ಷಿತ ಚಿತ್ರ ‘Your’s Sincerely ರಾಮ್’
- ನಿರ್ಮಾಣ ಹಂತದಲ್ಲಿರುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ವಿಖ್ಯಾತ್
- ಕನ್ನಡಕ್ಕೆ ಮತ್ತೆ ಎಂಟ್ರಿ ಕೊಡಲಿದ್ದಾರೆ ಮೀರಾ ಜಾಸ್ಮಿನ್?
‘Your’s Sincerely ರಾಮ್’ ಚಿತ್ರದ ಒಂದು ಪೋಸ್ಟರ್ ಬಿಡುಗಡೆಯಾಗಿದ್ದು ಇದರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ Golden Star Ganesh ಹಾಗೂ ನಟ ರಮೇಶ್ ಅರವಿಂದ್ Ramesh Aravind ಇಬ್ಬರೂ ಸೈಕಲ್ ಮೇಲೆ ಕುಳಿತುಕೊಂಡು ಹೋಗುತ್ತಿಉವ ಚಿತ್ರಣವಿದ್ದು ಸಿನಿಪ್ರಿಯರಲ್ಲಿ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸದ್ಯ ನಿರ್ಮಾಣ ಹಂತದಲ್ಲಿರುವ ಚಿತ್ರಕ್ಕೆ, ಇತ್ತೀಚೆಗೆ ಜನಪ್ರಿಯ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಬೆಂಗಳೂರಿನಲ್ಲಿ ಹಾಡೊಂದರ ಚಿತ್ರೀಕರಣ ನಡೆಸಿದ್ದರು.

ಮೀರಾ ಜಾಸ್ಮಿನ್ ಮತ್ತೆ ಕನ್ನಡಕ್ಕೆ?
ರಾಯಲ ಸ್ಟುಡಿಯೋಸ್ ಅಡಿಯಲ್ಲಿ ಸತ್ಯ ರಾಯಲ ನಿರ್ಮಿಸಿರುವ ಈ ಚಿತ್ರದ ಮೂಲಕ ನಟಿ ಮೀರಾ ಜಾಸ್ಮಿನ್ Meera Jasmine ಕನ್ನಡ ಚಿತ್ರರಂಗಕ್ಕೆ ಮರಳುವ ಸಾಧ್ಯತೆ ಇದೆ ಎಂಬ ಸುದ್ದಿ ಅಲ್ಲಲ್ಲಿ ಕೇಳಿಬರುತ್ತಿದೆ. ಕನ್ನಡ ಚಿತ್ರರಂಗ ಮೀರಾ ಜಾಸ್ಮಿನ್ ಗೆ ಹೊಸತೇನಲ್ಲ. ಈಗಾಗಲೇ ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜಕುಮಾರ್ ಜೊತೆ ಹಲವು ಚಿತ್ರಗಳಲ್ಲಿ ನಟಿಸಿದ ಅನುಭವ ಇವರಿಗೆ ಇದೆ. ‘Your’s Sincerely ರಾಮ್’ ಚಿತ್ರದಲ್ಲಿ ಇವರ ನಟನೆಯ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.