ಗಣೇಶ್ ಹಾಗೂ ರಮೇಶ್ ಅರವಿಂದ್ ನಟನೆಯ ಬಹುನಿರೀಕ್ಷಿತ ಚಿತ್ರ ‘Your’s Sincerely ರಾಮ್’

Date:

  • ಗಣೇಶ್ ಹಾಗೂ ರಮೇಶ್ ಅರವಿಂದ್ ನಟನೆಯ ಬಹುನಿರೀಕ್ಷಿತ ಚಿತ್ರ ‘Your’s Sincerely ರಾಮ್’
  • ನಿರ್ಮಾಣ ಹಂತದಲ್ಲಿರುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ವಿಖ್ಯಾತ್
  • ಕನ್ನಡಕ್ಕೆ ಮತ್ತೆ ಎಂಟ್ರಿ ಕೊಡಲಿದ್ದಾರೆ ಮೀರಾ ಜಾಸ್ಮಿನ್?

‘Your’s Sincerely ರಾಮ್’ ಚಿತ್ರದ ಒಂದು ಪೋಸ್ಟರ್ ಬಿಡುಗಡೆಯಾಗಿದ್ದು ಇದರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ Golden Star Ganesh ಹಾಗೂ ನಟ ರಮೇಶ್ ಅರವಿಂದ್ Ramesh Aravind ಇಬ್ಬರೂ ಸೈಕಲ್ ಮೇಲೆ ಕುಳಿತುಕೊಂಡು ಹೋಗುತ್ತಿಉವ ಚಿತ್ರಣವಿದ್ದು ಸಿನಿಪ್ರಿಯರಲ್ಲಿ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸದ್ಯ ನಿರ್ಮಾಣ ಹಂತದಲ್ಲಿರುವ ಚಿತ್ರಕ್ಕೆ, ಇತ್ತೀಚೆಗೆ ಜನಪ್ರಿಯ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಬೆಂಗಳೂರಿನಲ್ಲಿ ಹಾಡೊಂದರ ಚಿತ್ರೀಕರಣ ನಡೆಸಿದ್ದರು.

ಮೀರಾ ಜಾಸ್ಮಿನ್ ಮತ್ತೆ ಕನ್ನಡಕ್ಕೆ?

ರಾಯಲ ಸ್ಟುಡಿಯೋಸ್ ಅಡಿಯಲ್ಲಿ ಸತ್ಯ ರಾಯಲ ನಿರ್ಮಿಸಿರುವ ಈ ಚಿತ್ರದ ಮೂಲಕ ನಟಿ ಮೀರಾ ಜಾಸ್ಮಿನ್ Meera Jasmine ಕನ್ನಡ ಚಿತ್ರರಂಗಕ್ಕೆ ಮರಳುವ ಸಾಧ್ಯತೆ ಇದೆ ಎಂಬ ಸುದ್ದಿ ಅಲ್ಲಲ್ಲಿ ಕೇಳಿಬರುತ್ತಿದೆ. ಕನ್ನಡ ಚಿತ್ರರಂಗ ಮೀರಾ ಜಾಸ್ಮಿನ್ ಗೆ ಹೊಸತೇನಲ್ಲ. ಈಗಾಗಲೇ ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜಕುಮಾರ್ ಜೊತೆ ಹಲವು ಚಿತ್ರಗಳಲ್ಲಿ ನಟಿಸಿದ ಅನುಭವ ಇವರಿಗೆ ಇದೆ. ‘Your’s Sincerely ರಾಮ್’ ಚಿತ್ರದಲ್ಲಿ ಇವರ ನಟನೆಯ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಗೆ ಎಂಟ್ರಿ ಕೊಡುತ್ತಿದೆ ಎರಡು ಬಹುನಿರೀಕ್ಷಿತ ಸಿನಿಮಾಗಳು – Two of the Most Awaited Movies are Finally Entering OTT This Week

• ಮಳೆಗಾಲದಲ್ಲಿ ಮನೆಯಲ್ಲಿಯೇ ಬಿಂದಾಸ್ ಮನರಂಜನೆ• ಒಂದು ಆಕ್ಷನ್ ಇನ್ನೊಂದು ಅಪರೂಪದ...

ಓಟಿಟಿಯಲ್ಲಿ ಸದ್ದು ಮಾಡ್ತಿವೆ ಈ ಸೂಪರ್ ಹಿಟ್ ಚಿತ್ರಗಳು

ಜೂನ್ ಮಳೆಯೊಂದಿಗೆ ಆನಂದಿಸಬಹುದಾದ ಇಂಟರೆಸ್ಟಿಂಗ್ ಸಿನಿಮಾಗಳು ಆಕ್ಷನ್, ಕಾಮಿಡಿ, ಸಖತ್ ಥ್ರಿಲ್ಲರ್ ಮೂವಿಗಳದ್ದೇ...

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್ ರಂಗಭೂಮಿಯಿಂದ ಕಲಾಯಾತ್ರೆ ಆರಂಭಿಸಿ...

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ ಯುವ ಸಂಗೀತ ನಿರ್ದೇಶಕನ...