ದರ್ಶನ್ ಅಭಿಮಾನಿಗಳಿಗೆ ಮೇಲಿಂದ ಮೇಲೆ ಸಿಗ್ತಿದೆ ಗುಡ್ ನ್ಯೂಸ್

Date:

  • ದರ್ಶನ್ ಅಭಿಮಾನಿಗಳಿಗೆ ಮೇಲಿಂದ ಮೇಲೆ ಸಿಗ್ತಿದೆ ಗುಡ್ ನ್ಯೂಸ್
  • ಜಾಮೀನು ಪಡೆದು ಮೈಸೂರಿನಲ್ಲಿ ರೆಸ್ಟ್ ಮಾಡ್ತಿದಾರೆ ದರ್ಶನ್
  • ಸದ್ಯದಲ್ಲೇ ಡೆವಿಲ್ ಚಿತ್ರದ ಶೂಟಿಂಗ್ ಗೆ ದಿನಾಂಕ ಫಿಕ್ಸ್ ಸಾಧ್ಯತೆ
  • ದರ್ಶನ್ ಜೈಲು ಸೇರಿದ್ದರಿಂದ ಅರ್ಧಕ್ಕೇ ನಿಂತಿತ್ತು ಶೂಟಿಂಗ್

ನಟ ದರ್ಶನ್ Darshan ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಅರೆಸ್ಟ್ ಆಗಿದ್ದು, ಆರು ತಿಂಗಳ ಜೈಲು ವಾಸ ಮುಗಿಸಿ ಈಗ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ತಮ್ಮ ಸಾಕು ಪ್ರಾಣಿಗಳೊಂದಿಗೆ ಅರಾಮಾಗಿ ಕಾಲ ಕಳೆಯುತ್ತಿದ್ದಾರೆ. ಇವರ ಬಂಧನ ಸಾಕಷ್ಟು ಚರ್ಚೆ, ಅಸಮಾಧಾನಗಳಿಗೆ ಕಾರಣವಾಗಿತ್ತು.

ಅಭಿಮಾನಿಗಳಿಗೆ ಗುಡ್ ನ್ಯೂಸ್

ದರ್ಶನ್ ಜೈಲು ಸೇರಿದ ಬಳಿಕ ಅರ್ಧಕ್ಕೇ ನಿಂತಿದ್ದ ಪ್ರಕಾಶ್ ವೀರ್ ನಿರ್ದೇಶಿಸುತ್ತಿರುವ ‘ಡೆವಿಲ್’ Devil Movie ಚಿತ್ರೀಕರಣದ ಬಗ್ಗೆ ಸಿಹಿಸುದ್ದಿ ಸಿಕ್ಕಿದೆ. ದರ್ಶನ್ ಜೈಲಿಗೆ ಹೋಗುವುದಕ್ಕೂ ಮೊದಲೇ ಒಪ್ಪಿಕೊಂಡಿದ್ದ ಈ ಚಿತ್ರದ ಕೆಲವು ಪಾರ್ಟ್ ಶೂಟಿಂಗ್ ಆಗಿದ್ದರೂ ಇನ್ನೂ ಚಿತ್ರೀಕರಣ ಬಾಕಿ ಇತ್ತು. ದರ್ಶನ್ ಬಂಧನದ ಬಳಿಕ ಸಿನಿಮಾದ ಶೂಟಿಂಗ್ ನಿಂತು ಹೋಗಿತ್ತು. ಕೆಲವು ಮೂಲಗಳಿಂದ ಬಂದಿರುವ ಮಾಹಿತಿಯಂತೆ ಸದ್ಯದಲ್ಲೇ ಶೂಟಿಂಗ್ ಆರಂಭವಾಗಬಹುದೇನೋ. ಜನವರಿ ಮಧ್ಯ ಭಾಗದ ನಂತರ ‘ಡೆವಿಲ್’ ಚಿತ್ರದ ಶೂಟಿಂಗ್ ಮತ್ತೆ ಆರಂಭ ಆಗಲಿದೆ ಎನ್ನಲಾಗಿದೆ. ಚಿತ್ರಕ್ಕಾಗಿ ದುಡಿಯುತ್ತಿರು ತಾಂತ್ರಿಕ ವರ್ಗದವರಿಗೆ ಈ ಕುರಿತು ಸಂದೇಶ ಬಂದಿದೆ ಎನ್ನಲಾಗುತ್ತಿದೆ.

ಶೂಟಿಂಗ್ ಗೆ ತಯಾರಾಗಬೇಕಿದೆ ಡಿ ಬಾಸ್

ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಅವರ ಸರ್ಜರಿ ಇನ್ನೂ ಆಗಿರುವುದಿಲ್ಲ. ಅಲ್ಲದೇ ಬೆನ್ನು ನೋವು ಸಂಪೂರ್ಣ ಗುಣಮುಖವಾಗಿಲ್ಲ. ಜೈಲಿನಲ್ಲಿ ಆರೈಕೆ ಇಲ್ಲದೇ ತೂಕ ಕಳೆದುಕೊಂಡಿರುವ ಸಂಭವವೂ ಇದೆ. ಹಾಗಾಗಿ ಈ ಎಲ್ಲಾ ಚಾಲೆಂಜ್ ಗಳನ್ನು ಮೆಟ್ಟಿ ನಿಂತು ದರ್ಶನ್ ಮತ್ತೆ ಶೂಟಿಂಗೆ ಗೆ ಅಣಿಯಾಗಬೇಕಿದೆ. ಸಂಕ್ರಾಂತಿ ಬಳಿಕ ಡೆವಿಲ್ ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ಸಿಗುವ ನಿರೀಕ್ಷೆಯಿದೆ. ಅಭಿಮಾನಿಗಳಂತೂ ಈ ಎಲ್ಲಾ ಬೆಳವಣಿಗೆಗಳಿಂದ ಫುಲ್ ಖುಷಿಯಾಗಿದ್ದಾರೆ ಎಂಬುದಂತೂ ಸತ್ಯ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಲವ್ ಮಾಕ್ಟೇಲ್ ಲವ್ಲಿ ಜೋಡಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಫುಲ್ ಫನ್ ಸ್ಟೋರಿ ಇಲ್ಲದೆ

ಲವ್ ಮಾಕ್ಟೇಲ್ ಲವ್ಲಿ ಜೋಡಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಫುಲ್...

ಯುಗಾದಿ ಬಂತು, ಎಲ್ಲೆಲ್ಲೂ ಸಂಭ್ರಮ ತಂದಿತು: ಯುಗಾದಿ ಸಂಭ್ರಮಕ್ಕೆ ಈ ಹಾಡುಗಳು ನಿಮಗೆ ಜೊತೆಯಾಗುತ್ತವೆ

ಯುಗಾದಿ ಬಂತು, ಎಲ್ಲೆಲ್ಲೂ ಸಂಭ್ರಮ ತಂದಿತು: ಯುಗಾದಿ ಸಂಭ್ರಮಕ್ಕೆ ಈ ಹಾಡುಗಳು...

ದೂರ ಪಯಣಕ್ಕೆ ಕರೆದೊಯ್ಯುವ ರೋಮಾಂಚಕ ಸಿನಿಮಾಗಳಿವು

ದೂರ ಪಯಣಕ್ಕೆ ಕರೆದೊಯ್ಯುವ ರೋಮಾಂಚಕ ಸಿನಿಮಾಗಳಿವು ಟ್ರಾವೆಲ್ ಥ್ರೀಂ ನಲ್ಲಿ ಪ್ರೇಕ್ಷಕರನ್ನು ಮೋಡಿ...

ಓಟಿಟಿ ವೇದಿಕೆಯಲ್ಲಿ ನೀವು ನೋಡಲೇಬೇಕಾದ ಕನ್ನಡದ ಎರಡು ಅತ್ಯುತ್ತಮ ಚಿತ್ರಗಳು

ಓಟಿಟಿ ವೇದಿಕೆಯಲ್ಲಿ ನೀವು ನೋಡಲೇಬೇಕಾದ ಕನ್ನಡದ ಎರಡು ಅತ್ಯುತ್ತಮ ಚಿತ್ರಗಳು ವಿಭಿನ್ನ ಕತೆ-ವಿಭಿನ್ನ...