- ನಾನು ದರ್ಶನ್ ಗೆ ಸಿನಿಮಾ ಮಾಡೋದು ಖಚಿತ – ನಿರ್ದೇಶಕ ದಿನಕರ್ ತೂಗುದೀಪ
- ದರ್ಶನ್ ಜೊತೆಗೆ ಸಿನಿಮಾ ಮಾಡುವ ಭರವಸೆ
ನಟ ದರ್ಶನ್ ಸಹೋದರ ಮತ್ತು ನಿರ್ದೇಶಕನಾಗಿರುವ ದಿನಕರ್ ತೂಗುದೀಪ್ Dinakar Thoogudeepa ‘ರಾಯಲ್’ ಎಂಬ ಸಿನಿಮಾ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ದರ್ಶನ್‌ಗೆ Darshan ನಾನು ಸಿನಿಮಾ ಮಾಡೋದು ಕನ್ನರ್ಮ್ ಎಂದು ಹೇಳಿದರು. ಈ ಮೂಲಕ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
ರಾಯಲ್ ಸಿನಿಮಾದ Royal Cinema ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ದಿನಕರ್ ತೂಗುದೀಪ್ ದರ್ಶನ್ ಬಗ್ಗೆ ಮಾತನಾಡಿದರು ನಾವು ಅಣ್ಣ-ತಮ್ಮ ಬೇರೆ ಆಗಿದೀವಿ ಅಂತ ಯಾರೂ ಹೇಳಿದರು, ಗಂಡ-ಹೆಂಡತಿ ಮಧ್ಯೆ ಹೇಗೆ ಜಗಳ ಇರುತ್ತದೋ, ಹಾಗೆ ಅಣ್ಣ-ತಮ್ಮ ಅಂದ ಮೇಲೆ ಜಗಳ ಇದ್ದೆ ಇರುತ್ತೆ.
ನಾನು ದರ್ಶನ್ ಮಾತನಾಡುತ್ತಲೆ ಇರುತ್ತೇವೆ. ಅತ್ತಿಗೆ ಜೊತೆಗೆ ಯಾವಾಗಲೂ ಕಾಂಟಾಕ್ಟ್‌ನಲ್ಲಿರುತ್ತೇವೆ. ದರ್ಶನ್‌ಗೆ ಬೆನ್ನು ನೋವಿದೆ, ಅದಕ್ಕೆ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಹೇಳಿದರು.