- ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ “ಗಿಲ್ಲಿ ನಟ” ನ ಇಂಟೆರೆಸ್ಟಿಂಗ್ ಸ್ಟೋರಿ
- ಗಿಲ್ಲಿ ನಟ ನ ಈ ಡೈಲಾಗ್ ಗಳು ಎಷ್ಟೊಂದು ವೈರಲ್ ಆಗಿತ್ತು.. ಯಾವುದು ಆ ಡೈಲಾಗ್?
- ಗಿಲ್ಲಿ ನಟ ಹೆಸರಿನ ಹಿಂದಿನ ಕತೆ ಏನು? ಇವರ ನಿಜವಾದ ಹೆಸರೇನು
ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ “ಬಿಗ್ ಬಾಸ್” Bigboss ನ 12 ನೇ ಎಪಿಸೋಡ್ ನಲ್ಲಿ ಎಲ್ಲರ ಮನರಂಜಿಸ್ತಿರೋ “ಗಿಲ್ಲಿ ನಟ” Gilli Nata ಅವ್ರ ಲೈಫ್ ಸ್ಟೋರಿ ತಿಳ್ಕೊಳೋ ಇಂಟೆರೆಸ್ಟ್ ಯಾರಿಗೆ ತಾನೇ ಇಲ್ಲ. ಇಲ್ಲಿದೆ ನೋಡಿ ಗಿಲ್ಲಿ ನಟ ಅವ್ರ ಫುಲ್ ಹಿಸ್ಟ್ರಿ. ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ದಡದಪುರ ಎಂಬ ಸಣ್ಣ ಹಳ್ಳಿಯ ರೈತ ಕುಟುಂಬದ ಕುಳ್ಳಯ್ಯ, ಸವಿತಾ ದಂಪತಿಗಳ ಮೂರು ಮಕ್ಕಳಲ್ಲಿ ಕೊನೆಯವರು “ನಟರಾಜ” ಅಲಿಯಾಸ್ “ಗಿಲ್ಲಿ ನಟ”. ಐಟಿಐ ಓದು ಮುಗಿದ ನಂತರ ಸಿನಿನಾ ರಂಗದತ್ತ ಆಕರ್ಷಿತರಾದ ಇವ್ರು ಬೆಂಗಳೂರು ಸೇರಿದ್ರು.
“ಗಿಲ್ಲಿ ನಟ” ಹೆಸರಿನ ಹಿಂದಿದೆ ಈ ಸ್ಟೋರಿ
“ಗಿಲ್ಲಿ ನಟ” ಅವ್ರು ಬೆಂಗಳೂರಿಗೆ ಕೆಲಸ ಅರಸಿಕೊಂಡು ಬಂದ ನಂತರ ಫಿಲ್ಮ್ ಇಂಡಸ್ಟ್ರಿಯಲ್ಲಿ ಸೆಟ್ ಕೆಲಸ ಮಾಡ್ತಿದ್ರಂತೆ. ಅನಂತರ ಒಂದೆರಡು ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದಾರೆ. ಇವರ ಪೂರ್ತಿ ಹೆಸರು “ನಟರಾಜ” ಅಂತ. ಅಲ್ಲೆ ಎಲ್ಲರೂ ಇವರನ್ನ ಶಾರ್ಟ್ ಎಂಡ್ ಸ್ವೀಟ್ ಆಗಿ “ನಟ” ಅಂತ ಕರೀತಿದ್ರಂತೆ. ಅವರ ಊರಿನ ಕಡೆ ನೋಡಲು ಸಣ್ಣಗೆ ಇರುವವರನ್ನು ಗಿಲ್ಲಿ ಅಂತ ಹೇಳ್ತಾರಂತೆ. ಇಂಡಸ್ಟ್ರಿಯಲ್ಲಿ ಕೆಲಸಕ್ಕೆ ಸೇರಿದ ಪ್ರಾರಂಭದಲ್ಲಿ ಫುಲ್ ಉತ್ಸಾಹದಿಂದ ಅಲ್ಲಿ ಇಲ್ಲಿ ಓಡಾಡ್ಕೊಂಡು ಎಲ್ಲರನ್ನೂ ಮಾತಾಡಿಸ್ಕೊಂಡು ಸೆಟ್ ವರ್ಕ್, ಆರ್ಟ್ ವರ್ಕ್ ಮಾಡ್ಕೊಂಡು ಇದ್ರಂತೆ. ಇದನ್ನ ನೋಡಿದ ಯಾರೋ ಗಿಲ್ಲಿ ಅಂತ ಕರೆದ್ರಂತೆ. ಅದು “ಗಿಲ್ಲಿ ನಟ” ಆಯ್ತು.
ಹೀಗಿತ್ತು “ಕಾಮಿಡಿ ಕಿಲಾಡಿಗಳು” ಎಂಟ್ರಿ
“ಕಾಮಿಡಿ ಕಿಲಾಡಿಗಳು” Comedy Kiladigalu ಸೀಸನ್ ಒಂದು ಫುಲ್ ಫೇಮಸ್ ಆಗ್ತಿದ್ದ ಸಮಯದಲ್ಲಿ ಕೆಲಸ ಹುಡುಕಿಕೊಂಡು ಬೆಂಗಳೂರು ಪಾಲಾದ ಗಿಲ್ಲಿ ನಟನ ಒಳಗೆ ನಾನೂ ಈ ಶೋನಲ್ಲಿ ಭಾಗವಹಿಸಬೇಕೆಂಬ ಆಸೆ ಒಳಗೆಲ್ಲೋ ಇಣುಕಿದ್ರೂ ಅದೆಲ್ಲಾ ಹೇಗೆ ಸಾಧ್ಯ ಅಂತ ಸುಮ್ಮನಿದ್ರು. ನಂತರ ಯೂಟ್ಯೂಬ್ ಚಾನೆಲ್ ಎಲ್ಲಾ ಶುರು ಮಾಡಿದ್ಮೇಲೆ ಒಮ್ಮೆ ಯೋಗರಾಜ್ ಭಟ್ರು ಏನೋ ವಿಷಯ ಮಾತನಾಡ್ಲಿಕ್ಕೆ ಗಿಲ್ಲಿ ನಟ ಅವ್ರನ್ನ ಕರ್ದಿದ್ರು, ಅದೇ ಸಂದರ್ಭದಲ್ಲಿ ನೀನು ಯಾಕೆ ಕಾಮಿಡಿ ಕಿಲಾಡಿಗಳು ಷೋ ಗೆ ಆಡಿಷನ್ ಕೊಡ್ಬಾರ್ದು ಅಂತ ಸ್ಫೂರ್ತಿ ನೀಡಿದ್ರಂತೆ. ಆಡಿಷನ್ ಕೊಟ್ಟು ಬಂದ ಎರಡೇ ತಿಂಗಳಲ್ಲಿ ಕಾಲ್ ಬಂತು ಅಂತಾರೆ ಗಿಲ್ಲಿ ನಟ.
ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಈ ಡೈಲಾಗ್
ಗ್ರಾಂಡ್ ಪ್ರೀಮಿಯರ್ ಸಂದರ್ಭದಲ್ಲಿ ಗಿಲ್ಲಿ ನಟ ಹೇಳಿದ “ಜಾತಿನ ಪ್ರೀತ್ಸೋನು ರಾಜಕಾರಣಿ ಆಗ್ತಾನೆ, ಜನರನ್ನ ಪ್ರೀತ್ಸೋನು ರಾಜಕುಮಾರ ಆಗ್ತಾನೆ” ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗತ್ತೆ. ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಪ್ರಪೋಸ್ ಮಾಡೋ ಸೀನ್ ಗೆ “ನೀನು ಕಾರಲ್ಲಿ ಓಡಾಡ್ತೀಯ, ನಾನು ಕಾಲಲ್ಲಿ ಓಡಾಡ್ತೀನಿ
ನೀನು ಬಟ್ಟೆಗೆ ತುಂಬಾ ಖರ್ಚು ಮಾಡ್ತೀಯ, ನಾನು ಹೊಟ್ಟೆಪಾಡಿಗೆ ಒದ್ದಾಡ್ತೀನಿ
ನಿಂದು ಐಟಿ ಕಂಪೆನಿ ಜಾಬು, ನಂದು ಖಾಲಿ ಜೇಬು
ಆದ್ರೆ ಕೇಳಲ್ಲ ಮನಸ್ಸು ಎಷ್ಟು ಹೇಳಿದ್ರೂ
ಪ್ರತೀ ಸರ್ತಿನೂ ನೀನೇ ನೀನೇ ಬೇಕು ಅನ್ನೋ ತರ ಇರ್ತದೆ” ಅಂತ ಹೇಳಿದ್ದಂತೂ ಯುವ ಪ್ರೇಮಿಗಳು, ಭಗ್ನ ಪ್ರೇಮಿಗಳ ಮಧ್ಯೆ ಸಕ್ಕತ್ ಹಿಟ್ ಆಗಿತ್ತು.


