- ವೈವಾಹಿಕ ಜೀವನದ ಕತೆ ಹೇಳಲು ಬರ್ತಿದೆ “ಜಸ್ಟ್ ಮ್ಯಾರಿಡ್”
- ಪ್ರೇಮಕಥೆಯನ್ನೊಳಗೊಂಡ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಸಿ.ಆರ್.ಬಾಬಿ
- ಬಿಸ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತಾ ಅಮರ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ
ಸಿ.ಆರ್. ಬಾಬಿ C R Baby ನಿರ್ದೇಶನದಲ್ಲಿ ಮೂಡಿಬಂದಿರುವ, ಬಿಸ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ Shain Shetty ನಾಯಕನಾಗಿ, ಕಿರುತೆರೆಯ ಖ್ಯಾತ ನಟಿ ಅಂಕಿತಾ ಅಮರ್ Ankitha Amar ನಾಯಕಿಯಾಗಿ ನಟಿಸಿರುವ ಚಿತ್ರ “ಜಸ್ಟ್ ಮ್ಯಾರಿಡ್” Just Married ಬಿಡುಗಡೆಗೆ ಸಿದ್ದಗೊಳ್ಳುತ್ತಿದೆ. ವೈವಾಹಿಕ ಜೀವನಕ್ಕೆ ಕಾಲಿಟ್ಟಕೂಡಲೇ ಆಗುವ ಬದಲಾವಣೆಯನ್ನು, ವೈವಾಹಿಕ ಸಂಬಂಧಗಳ ಕೆಲವೊಂದು ಪ್ರಮುಖ ವಿಷಯಗಳನ್ನು ವಿಭಿನ್ನ ನಿರೂಪಣೆಯೊಂದಿಗೆ ಹೇಳಹೊರಟಿರುವ ಈ ಚಿತ್ರದಲ್ಲಿ ನಟ ದೇವರಾಜ್ Devaraj ನ್ಯಾಯಧೀಶರ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಈ ಪಾತ್ರ ಸಿನಿಮಾದ ಪ್ರಮುಖ ಹೈಲೈಟ್ ಕೂಡ ಆಗಿದೆ.
ಅನುಭವಿ ಕಲಾವಿದರ ಸಂಗಮ
ಈ ಚಿತ್ರದಲ್ಲಿ ಹಿರಿಯ ನಟಿ ಶ್ರುತಿ ಹರಿಹರನ್, ಸಾಕ್ಷಿ ಅಗರ್ ವಾಲ್, ರವಿಶಂಕರ್ ಗೌಡ, ವಾಣಿ ಹರಿಕೃಷ್ಣ, ನಿರ್ದೇಶಕ ಅನೂಪ್ ಭಂಡಾರಿ ಮುಂತಾದವರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎಬಿಬಿಎಸ್ ಬ್ಯಾನರ್ ಅಡಿ ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಾದ ಅಜನೀಶ್ ಮತ್ತು ಸಿ.ಆರ್ ಬಾಬಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪಿ.ಜೆ ಛಾಯಾಗ್ರಹಣ ಹಾಗೂ ಅಶಿಕ್ ಕುಸುಗೊಳ್ಳಿ ಸಂಕಲನ ಸಿನಿಮಾಗಿದೆ. ಈಗಾಗಲೇ ಚಿತ್ರದ ಟ್ರೈಲರ್ ಸದ್ದು ಮಾಡುತ್ತಿದ್ದು ಚಿತ್ರದ ರಿಲೀಸ್ ದಿನಾಂಕವಿನ್ನೂ ಘೋಷಣೆಯಾಗಿಲ್ಲ.