- ಅನೌನ್ಸ್ ಆಯ್ತು ಆಕ್ಷನ್ ಥ್ರಿಲ್ಲರ್ ಮೂವೀ “ಮ್ಯಾಡ್ನೆಸ್”
- ನಿರ್ದೇಶಕ ಎಸ್.ರವೀಂದ್ರನಾಥ್, ಆಕ್ಷನ್ ಕಟ್ ಹೇಳಿರುವ ವಿಭಿನ್ನ ಚಿತ್ರ
- ಶಿವಾಂಕ್ ಚೊಚ್ಚಲ ನಾಯಕತ್ವಕ್ಕೆ ನಾಯಕಿಯಾಗಿ ಸಾಥ್ ನೀಡಿದ್ದಾರೆ ರವೀಕ್ಷಾ
ಕನ್ನಡ ಚಿತ್ರರಂಗಕ್ಕೆ “ಮಾನ್ಸೂನ್ ರಾಗ”, “ಪುಷ್ಪಕ ವಿಮಾನ” ಸಿನಿಮಾಗಳ ಮೂಲಕ ಹೊಸ ಛಾಪು ಮೂಡಿಸಿದ ನಿರ್ದೇಶಕ ಎಸ್.ರವೀಂದ್ರನಾಥ್ S Raveendranath, ಅವರ ನಿರ್ದೇಶನದ ಹೊಸ ಸಿನಿಮಾ “ಮಾಡ್ನೆಸ್” Madnes. ಈ ಚಿತ್ರಕ್ಕೆ ಶಿವಾಂಕ್ Shivank ಅವರನ್ನು ನಾಯಕನನ್ನಾಗಿ ಪರಿಚಯಿಸಿದ್ದಾರೆ. ಚೊಚ್ಚಲ ಬಾರಿಗೆ ಅವರು ನಾಯಕನಾಗಿ ತೆರೆಯ ಮೇಲೆ ಕಾಣಿಸುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ರವೀಕ್ಷಾ Raveeksha ಜೊತೆಯಾಗಿದ್ದಾರೆ. ಈಗಾಗಲೇ “ಮಾಡ್ನೆಸ್” ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ.
ಆಕ್ಷನ್ ಥ್ರಿಲ್ಲರ್ “ಮ್ಯಾಡ್ನೆಸ್”
”ಮ್ಯಾಡ್ನೆಸ್” ಎನ್ನುವ ಟೈಟಲ್ ಪ್ರೇಕ್ಷಕರ ಕೂತೂಹಲಕ್ಕೆ ಕಾರಣವಾಗಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಮೂವೀ ಆಗಿದ್ದು, ಈ ಚಿತ್ರಕ್ಕೆ ನಿಧಿ ಫಿಲ್ಮಸ್ ಅಡಿ ಯತೀಂದ್ರ ಬಿ. ಬಂಡವಾಳ ಹೂಡಿದ್ದು, ಜರೆದ್ ಮತ್ತು ಜೂಡಾ ಸಂಗೀತ ನಿರ್ದೇಶನವಿದೆ. ಪ್ರಜ್ವಲ್ ಗೌಡ ಛಾಯಾಗ್ರಹಣ, ಶ್ರೀನಿವಾಸ್ ಕುಲಾಲ್ ಸಂಕಲನವಿದೆ. ಚಿತ್ರತಂಡ ಈಗಾಗಲೇ ಆಗುಂಬೆ, ಬೆಂಗಳೂರು ಸೇರಿದಂತೆ ವಿವಿದೆಡೆ ಚಿತ್ರೀಕರಣ ಪೂರೈಸಿದ್ದು ಎರಡನೆಯ ಹಂತದ ಚಿತ್ರೀಕರಣ ಇನ್ನೇನು ಶುರುವಾಗಲಿದೆ.