- ಕರಾವಳಿಯ ಸಸ್ಪೆನ್ಸ್ ಕತೆ ಹೇಳಲು ಬರ್ತಿದೆ “ಮಾರ್ನಮಿ”
- ಟೀಸರ್ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ ಸಿನಿಮಾ ತಂಡ.
- ರಿಶಿತ್ ಶೆಟ್ಟಿ ಅವರ ನಿರ್ದೇಶನದ ಮೊದಲ ಸಿನಿಮಾವಿದು.
ಕರಾವಳಿ ಭಾಗದಲ್ಲಿ ನಡೆಯುವ ಸಸ್ಪೆನ್ಸ್ ಕತೆಯೊಂದನ್ನು ಪ್ರೇಮ ಕತೆಯೊಂದಿಗೆ ಪ್ರೇಕ್ಷಕನಿಗೆ ಕಾಡಿಸುವ ಹೊಸ ಸಿನಿಮಾವೊಂದು ಬರುತ್ತಿದೆ. ಕಿರುತೆರೆಯಲ್ಲಿ ಖ್ಯಾತಿ ಪಡೆದ ರಿತ್ವಿಕ್ ಮಠದ್ Rithvik Matad ನಾಯಕ ನಟನಾಗಿ, ನಾಯಕಿಯಗಿ ಚೈತ್ರ ಜೆ ಆಚಾರ್ Chaithra J Achar ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾದ ಹೆಸರು “ಮಾರ್ನಮಿ” Marnami. ಈಗಾಗಲೇ ಈ ಸಿನಿಮಾದ ಟೀಸರ್ ಅನ್ನು ಸಿನಿಮಾ ತಂಡ ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ರಿಶಿತ್ ಶೆಟ್ಟಿ Rishith Shetty ಅವರ ನಿರ್ದೇಶನದ ಮೊದಲ ಸಿನಿಮಾವಿದು. ಸುಧಿ ಅವರ ಕತೆಯನ್ನು ಚಿತ್ರಕಥೆಯನ್ನಾಗಿಸಿ ರಿಶಿತ್ ಶೆಟ್ಟಿ ಸಂಭಾಷಣೆ ಬರೆದಿದ್ದಾರೆ. ನಿರ್ಮಾಪಕರಾಗಿ ಶಿಲ್ಪಾ ನಿಶಾಂತ್ ಮತ್ತು ಸಹ ನಿರ್ಮಾಪಕರಾಗಿ ನಿಶಾಂತ್ ಚಿತ್ರವನ್ನು ನಿರ್ಮಿಸಿದ್ದಾರೆ.
ಸೃಜನಶೀಲ ಕಲಾವಿದರ ಬಳಗವಿದೆ
ಚರಣ್ ರಾಜ್ ಅವರ ಇಂಪಾದ ಹಿನ್ನೆಲೆ ಸಂಗೀತವಿದೆ. ಛಾಯಾಗ್ರಹಣದಲ್ಲಿ ಶಿವಸೇನಾ, ಎಡಿಟಿಂಗ್ ನಲ್ಲಿ ವಿಜಯ್ ರಾಜ್ ಬಿಜಿ ಕೈಜೋಡಿಸಿದ್ದಾರೆ. ಮಾರ್ನಮಿಯಲ್ಲಿ ಸುಮನ್ ತಲ್ವಾರ್, ಪ್ರಕಾಶ್ ತುಮಿನಾಡು, ಸೋನುಗೌಡ, ಜ್ಯೋತಿಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್, ಚೈತ್ರಾ ಶೆಟ್ಟಿ ಸೇರಿದಂತೆ ಇನ್ನೂ ಬಹಳಷ್ಟು ಸೃಜನಶೀಲ ಕಲಾವಿದರು ನಟಿಸಿದ್ದಾರೆ. “ಗುನಾಧ್ಯ”ಬ್ಯಾನರ್ ನಡಿ ಮಾರ್ನಮಿ ನಿರ್ಮಾಣವಾಗಿದೆ, ಈಗಾಗಲೇ ಸಿನಿಮಾ ತಂಡ ಚಿತ್ರೀರಣ ಮುಗಿಸಿದೆ. ಸೆಪ್ಟೆಂಬರ್ ಹೊತ್ತಿಗೆ “ಮಾರ್ನಮಿ” ತೆರೆಪ್ಪಳಿಸುವ ಸಾಧ್ಯತೆ ಇದೆ.