ಡಿಫರೆಂಟ್ ಆಗಿ ಗಮನ ಸೆಳೀತಿದೆ “ಬ್ರ್ಯಾಟ್” ಟೀಸರ್

Date:

  • ಡಿಫರೆಂಟ್ ಆಗಿ ಗಮನ ಸೆಳೀತಿದೆ “ಬ್ರ್ಯಾಟ್” ಟೀಸರ್
  • ಡಾರ್ಲಿಂಗ್ ಕೃಷ್ಣ ಹುಟ್ಟಿದ ದಿನಕ್ಕೆ ರಿಲೀಸ್ ಆಯ್ತು ಟೀಸರ್
  • ಮಂಜುನಾಥ್ ಕಂದಕೂರ್ ನಿರ್ಮಿಸುತ್ತಿರುವ ಹಾಗೂ ಶಶಾಂಕ್ ನಿರ್ದೇಶನದ ಚಿತ್ರ “ಬ್ರ್ಯಾಟ್”

ಈಗಾಗಲೇ ಶೀರ್ಷಿಕೆ, ಫಸ್ಟ್ ಲುಕ್ ಮೂಲಕ ಎಲ್ಲರ ಗಮನ ಸೆಳೆದಿರುವ “ಬ್ರ್ಯಾಟ್” ಚಿತ್ರದ ಟೀಸರ್ ಕೂಡಾ ಫುಲ್ ಸ್ಪೆಷಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಡಾರ್ಲಿಂಗ್ ಕೃಷ್ಣ Darling Krishna ಬರ್ತ್ ಡೇ ಗಿಫ್ಟ್ ಆಗಿ ಹೊರಬಂದಿರುವ ಟೀಸರ್ ನಲ್ಲಿ ನಾಯಕನಾಗಿ ಎರಡು ವಿಭಿನ್ನ ಶೇಡ್ ಗಳಲ್ಲಿ ಮಿಂಚಿದ್ದಾರೆ ಡಾರ್ಲಿಂಗ್ ಕೃಷ್ಣ. “ಫಸ್ಟ್ ರ್ಯಾಂಕ್ ರಾಜು” ಖ್ಯಾತಿಯ ನಿರ್ಮಾಪಕ ಮಂಜುನಾಥ್ ಕಂದಕೂರ್ Manjunath Kandakur ನಿರ್ಮಾಣದ, ಸದಭಿರುಚಿಯ ಚಿತ್ರ ನಿರ್ದೇಶಕ ಶಶಾಂಕ್ Shashank ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಸಾಥ್ ನೀಡಿದ್ದಾರೆ ಮನಿಶಾ ಕಂದಕೂರ್ Manisha Kandakur. ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು, ಅಚ್ಯುತ್ ಕುಮಾರ್ Achyuth Kumar ಮುಂತಾದವರ ತಾರಾಬಳಗವಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ Arjun Janya ಸಂಗೀತ ನಿರ್ದೇಶನ ಹಾಗೂ ಅಭಿಲಾಶ್ ಕಲ್ಲತ್ತಿ ಛಾಯಾಗ್ರಹಣವಿದೆ.

ಎರಡು ಶೇಡ್ ನಲ್ಲಿ ನಾಯಕ

ಟೀಸರ್ನಲ್ಲಿ ಡಾರ್ಲಿಂಗ್ ಕೃಷ್ಣ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ, ನಮ್ಮ ದುಡ್ಡಿನಲ್ಲಿ ನಮ್ಮ ಬೆವರಿನ ವಾಸನೆ ಇರಬೇಕು ಅನ್ನುವ ಅಪ್ಪನ ಹಾದಿಯಲ್ಲಿಯೇ ಸಾಗೋ ಓರ್ವ ಡಾರ್ಲಿಂಗ್ ಕೃಷ್ಣ ಕಾಣಿಸುತ್ತಾರೆ. ಮುಂದುವರಿದರೆ, ಇದೇ ಕೃಷ್ಣ ಶ್ರೀಮಂತ ಕೃಷ್ಣನಾಗಿ ಕಾಣಿಸೋ ರೂಪವೂ ಇದೆ. ಹೀಗೆ ಬದಲಾಣೆ ಟೀಸರ್ನಲ್ಲಿ ಕಾಣಬಹುದು. ಬಹು ನಿರೀಕ್ಷಿತ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಹೆಸರಿನಿಂದಲೇ ಕುತೂಹಲ ಹುಟ್ಟಿಸಿರುವ ಚಿತ್ರ ತೆರೆಗೆ ಬರುವ ದಿನಕ್ಕಾಗಿ ಸಿನಿ ಪ್ರೇಮಿಗಳು ಕಾತುರರಾಗಿದ್ದು, ಜನರ ನಿರೀಕ್ಷೆ ತಣಿಸುತ್ತಾ “ಬ್ರ್ಯಾಟ್” ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ...

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...