- ಹೊಸಪ್ರತಿಭೆಗಳ ಹೊಸ ಪ್ರಯತ್ನ “ಬರ್ಗೆಟ್ ಬಸ್ಯಾ” ಈ ವಾರ ತೆರೆಗೆ
- ರಿಶ್ ಹಿರೇಮಠ್ ನಿರ್ದೇಶನ ಹಾಗೂ ನಾಯಕತ್ವದಲ್ಲಿ ಮೂಡಿಬರುತ್ತಿರುವ ಚಿತ್ರ
- ಆನಂದ್ ಮ್ಯೂಸಿಕ್ ಚಾನಲ್ ನಲ್ಲಿ ರಿಲೀಸ್ ಆಗಿದೆ ಚಿತ್ರದ ಟ್ರೇಲರ್
ಯರ್ರಂರೆಡ್ಡಿ ಪಿಕ್ಚರ್ಸ್ Yarram Reddy ಬ್ಯಾನರ್ ನಲ್ಲಿ ಬಳ್ಳಾರಿಯ ನಾಗಾರ್ಜುನ ರೆಡ್ಡಿ Nagarjuna Reddy ನಿರ್ಮಾಣ ಮಾಡಿರುವ ಕಾಮಿಡಿ ಜಾನರ್ ಮೂವೀ “ಬರ್ಗೆಟ್ ಬಸ್ಯಾ” Barget Basya ಈ ವಾರ ಸಿನಿ ಪ್ರಿಯರೆದುರು ಚಿತ್ರಮಂದಿರಗಳಲ್ಲಿ ತೆರೆದುಕೊಳ್ಳಲಿದೆ. ಡೈರೆಕ್ಷನ್ ಕೋರ್ಸ್ ಮಾಡಿ, ಹಲವು ನಿರ್ದೇಶಕರ ಗರಡಿಯಲ್ಲಿ ಪಳಗಿ, ಕಿರುಚಿತ್ರ ನಿರ್ಮಾಣಗಳಿಂದ ಅನುಭವ ಗಳಿಸಿಕೊಂಡ ರಿಶ್ ಹಿರೇಮಠ್ Rish Hiremath ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಲ್ಲದೇ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ಸಂಗೀತ ಎನ್. ಸ್ವಾಮಿ Sangeetha N Swamy ಇವರಿಗೆ ಜೋಡಿಯಾಗಿದ್ದಾರೆ.
ಬರಗೆಟ್ಟಿರುವ ಬಸ್ಯಾನ ಕಥೆ
ಕಂಡ ಕಂಡ ಹುಡುಗಿಯರನ್ನೆಲ್ಲಾ ಲವ್ ಮಾಡಿ ಎಂದು ಬೆನ್ನು ಬೀಳುವ ನಾಯಕ ಬಸ್ಯಾ ಪಡೆದುಕೊಳ್ಳುವುದೇನು, ಕಳೆದುಕೊಳ್ಳುವುದೇನು, ಅನುಭವಿಸುವ ಅವಾಂತರಗಳು, ಹೇಗೆ ಜೀವನ ಪಾಠ ಕಲಿಯುತ್ತಾನೆ ಎಂದೆಲ್ಲಾ ತಿಳಿದುಕೊಳ್ಳಲು ಮೂವೀ ನೋಡಬೇಕಿದೆ. ಘಟನೆಗಳನ್ನು ಹಾಸ್ಯಮಯವಾಗಿ ಚಿತ್ರೀಕರಿಸಲಾಗಿದೆ.
ಇವರೆಲ್ಲರ ತಾಂತ್ರಿಕ ಸಹಕಾರವಿದೆ
ಬೆಂಗಳೂರು, ತೀರ್ಥಹಳ್ಳಿ, ಕೊಪ್ಪ, ಸಕಲೇಶಪುರ, ಬೆನಗನಹಳ್ಳಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಪ್ರಕಾಶ್ ಜಿ ಸಾಹಿತ್ಯಕ್ಕೆ ಸಿದ್ಧಾರ್ಥ್ ಕಾಮತ್ ಸಂಗೀತವಿದೆ. ಶಾಮ್ ಸಾಲ್ವಿನ್ ಛಾಯಾಗ್ರಹಣ, ಸಿದ್ಧು ದಳವಾಯಿ ಸಂಕಲನ ಚಿತ್ರಕ್ಕಿದೆ. ಇದೇ ಮಾರ್ಚ್ 21ರಂದು ಚಿತ್ರ ತೆರೆಗೆ ಬರಲಿದೆ.