- ತೆರೆಗೆ ಬರಲು ತಯಾರಾಗಿದೆ ಭಾವನಾತ್ಮಕ ಸಿನಿಮಾ “ನಾನು ಮತ್ತು ಗುಂಡ 2″
- ರಘು ಹಾಸನ್ ಆಕ್ಷನ್ ಕಟ್ ಹೇಳಿರುವ ಸಿನಿಮಾ
- ರಾಕೇಶ್ ಅಡಿಗ, ರಚನಾ ಇಂದರ್ ನಾಯಕತ್ವದ ಭಾವನಾತ್ಮಕ ಸಿನಿಮಾ ಇದಾಗಿದೆ.
ಎರಡೂವರೆ ವರ್ಷಗಳ ಹಿಂದೆ ‘ನಾನು ಮತ್ತು ಗುಂಡ’ ಸಿನಿಮಾ ನಿರ್ದೇಶನ ಮಾಡಿದ್ದ ರಘು ಹಾಸನ್ Raghu Hasan ಅವರೇ ಆಕ್ಷನ್ ಕಟ್ ಹೇಳಿರುವ ಆ ಸಿನಿಮಾದ ಮುಂದುವರೆದ ಭಾಗ “ನಾನು ಮತ್ತು ಗುಂಡ 2″ Nanu mattu Gunda 2 ತೆರೆಗೆ ಬರಲು ಸಿದ್ಧವಾಗಿದೆ. ಪೋಯೆಮ್ ಪಿಕ್ಚರ್ಸ್ Poem Pictures ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಿರೋ ಸಿನಿಮಾಕ್ಕೆ ರಾಕೇಶ್ ಅಡಿಗ Rakesh Adiga ಹಾಗೂ ರಚನಾ ಇಂದರ್ Rachana Inder ನಾಯಕತ್ವ ಇದೆ. ಭಾವನಾತ್ಮಕ ನೆಲೆಗಟ್ಟನ್ನು ಹೊಂದಿರುವ ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದು, ಶೈಲಜಾ ಕಿರಗಂದೂರು ಬಿಡುಗಡೆಗೊಳಿಸಿ ಶುಭಹಾರೈಸಿದ್ದಾರೆ.
ನಾಯಿ ಮತ್ತು ಮಾಲಿಕನ ಅವಿನಾಭಾವ ಸಂಬಂಧದ ಕಥೆ
ಸೋಷಿಯಲ್ ಕನ್ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಹೊಂದಿರುವ ಈ ಚಿತ್ರದ ಮುಖ್ಯ ಕಥಾವಸ್ತು ನಾಯಿ ಮತ್ತದರ ಮಾಲಿಕನ ಅವಿನಾಭಾವ ಸಂಬಂಧ. ಚಿತ್ರದಲ್ಲಿ ಆರು ಹಾಡುಗಳಿದ್ದು ಆರ್.ಪಿ.ಪಟ್ನಾಯಕ್ ಸಂಗೀತ ಸಂಯೋಜನೆ ಇದೆ. ತನ್ವಿಕ್ ಛಾಯಾಗ್ರಹಣ, ರುತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ, ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ತಾರಾಗಣದಲ್ಲಿ ರಾಕೇಶ್ ಅಡಿಗ, ರಚನಾ ಇಂದರ್ ಜೊತೆಯಲ್ಲಿ ಜಿ.ಜಿ. ಮಹಂತೇಶ್, ಶಿವರಾಜ್ ಕೆ.ಆರ್.ಪೇಟೆ, ಬಾಲನಟ ಜೀವನ್ ನಟನೆಯಿದೆ. ಕನ್ನಡ ಮಾತ್ರವಲ್ಲದೇ ಒಟ್ಟು ಐದು ಭಾಷೆಗಳಲ್ಲಿ ಚಿತ್ರ ಮೇ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.