ಮಿಲನಾ ನಾಗರಾಜ್ ಬದುಕಿನ ಇಂಟರೆಸ್ಟಿಂಗ್ ಕಹಾನಿ

Date:

  • ಮಿಲನಾ ನಾಗರಾಜ್ ಬದುಕಿನ ಇಂಟರೆಸ್ಟಿಂಗ್ ಕಹಾನಿ
  • ಸಿನಿಮಾ ಕಡಲಲ್ಲಿ ಈಜಿದ ಹಾಸನದ ಬೆಡಗಿ, ರಿಯಲ್ ಸ್ವಿಮ್ಮರ್
  • ಲವ್ ಮಾಕ್ಟೇಲ್ ಹುಡುಗಿಯ ಸಿನಿ ಜಗತ್ತಿನ ಸಕ್ಕತ್ ಸುದ್ದಿ..

ಮಿಲನಾ ನಾಗರಾಜ್ Milana Nagaraj ಕನ್ನಡ ಚಿತ್ರರಂಗದ ಖ್ಯಾತ ನಟಿ- Famous Actress ಮತ್ತು ನಿರ್ಮಾಪಕಿ. “ನಮ್ ದುನಿಯಾ ನಮ್ ಸ್ಟೈಲ್” Nam Duniya Nam style ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಮಿಲನಾ ನಾಗರಾಜ್, ಬೃಂದಾವನ, ಚಾರ್ಲಿ, ಜಾನಿ, ಲವ್ ಮಾಕ್ಟೇಲ್,-Love mocktail ಮತ್ತೆ ಉದ್ಭವ, ಲವ್ ಮಾಕ್ಟೇಲ್ 2, ವಿಕ್ರಾಂತ್ ರೋಣ, ಓ, ಮಿಸ್ಟರ್ ಬ್ಯಾಚುಲರ್, ಲವ್ ಬರ್ಡ್ಸ್, ಕೌಸಲ್ಯಾ ಸುಪ್ರಜಾ ರಾಮ ಚಿತ್ರಗಳ ಮೂಲಕ ಕನ್ನಡಿಗರ ನೆಚ್ಚಿನ ನಟಿಯಾದರು. ಅದರಲ್ಲೂ ಲವ್ ಮಾಕ್ಟೇಲ್ ಚಿತ್ರ ಅವರ ಲೈಫ್ ಗೆ ದೊಡ್ಡ ಸಕ್ಸಸ್ ತಂದುಕೊಟ್ಟಿತು. ನಟ ಡಾರ್ಲಿಂಗ್ ಕೃಷ್ಣ-Darling Krishna ಅವರನ್ನು ಪ್ರೀತಿಸುತ್ತಿದ್ದ ಮಿಲನಾ ನಾಗರಾಜ್, 2021ರ ರಂದು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಿಲನಾ ನಾಗರಾಜ್ ಕುರಿತ ಇಂಟರೆಸ್ಟಿಂಗ್ ಕಹಾನಿಯಿದು

ಸಿನಿಮಾ ಹಾದಿ ಹಿಡಿದ ಈಜುಗಾರ್ತಿ:

ಹಾಸನದಲ್ಲಿ Hasana ಹುಟ್ಟಿದ ಮಿಲನಾ ನಾಗರಾಜ್, ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ ಪಡೆದರೂ, ಅವರ ಹುಡುಕಾಟದ ಓಟದಲ್ಲಿ ಜೊತೆಯಾದದ್ದು ಸಿನಿಮಾ. ಆದ್ರೆ ಅವರು ರಾಜ್ಯಮಟ್ಟದ ಈಜುಗಾರ್ತಿಯಾಗಿಯೂ ಖ್ಯಾತಿ ಪಡೆದಿದ್ದರು ಎನ್ನುವುದು ಅವರ ಅಭಿಮಾನಿಗಳಿಗೆ ಗೊತ್ತಿಲ್ಲ, ಹೌದು, ಈ ಕುರಿತು ಅವರು ಸಂದರ್ಶನೊಂದರಲ್ಲಿ ಹೇಳಿಕೊಂಡಿದ್ದಾರೆ.

“ಈಜು ನಂಗೆ ತುಂಬಾ ಖುಷಿಕೊಡ್ತಿತ್ತು. ರಾಜ್ಯಮಟ್ಟದ ಈಜು ಸ್ಪರ್ಧೆಗಳಲ್ಲೂ ನಾನಾಗ ಫೇಮಸ್ಸು, ಹಾಸನದಲ್ಲಿ ಮಾತ್ರವಲ್ಲ ಎಲ್ಲೂ ಈಜು ಸ್ಪರ್ಧೆ ಇರ್ಲಿ ಅಲ್ಲಿ ನಾನಿರ್ತಿದ್ದೆ. ಬೆಳಿಗ್ಗೆ 5.15 ರ ವೇಳಗೆ ನೀರಿಗಿಳಿದು ಈಜು ಪ್ರಾಕ್ಟೀಸ್ ಶುರು ಮಾಡ್ತಿದ್ದೆ. ಆದ್ರೆ ಪಿಯುಸಿ ನಲ್ಲಿ ಓದು ಜಾಸ್ತಿಯಾಗಿ ಈಜು ಕಡಿಮೆಯಾಯ್ತು. ಕ್ರೀಡೆಗೆ ಬೇಕಾದ ಎಲ್ಲಾ ಪ್ರೋತ್ಸಾಹ ಮನೆಯಲ್ಲಿ ಅಪ್ಪ ಅಮ್ಮ ಕೊಡ್ತಾ ಇದ್ರು, ಆ ಕಾಲದಲ್ಲೇ ಅವರು ಕ್ರೀಡೆ, ಡಯಟ್, ವ್ಯಾಯಾಮ ಇತ್ಯಾದಿಗಳ ಬಗ್ಗೆ ಭಾರೀ ಜ್ಞಾನ ಹೊಂದಿದ್ರು ಇದು ನನ್ನ ಬದುಕಿಗೆ ಪ್ಲಸ್ ಪಾಯಿಂಟ್ ಆಯ್ತು” ಎಂದು ಈ ಹಾಸನದ ಬೆಡಗಿ ಮಿಲನಾ ನಾಗರಾಜ್, ಈಜುಗಾರ್ತಿಯಾಗಿದ್ದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಸಾಯೋರೆಗೂ ದುಡಿತಾ ಇರಬೇಕು:

“ಸಾಯೋವರೆಗೂ ದುಡಿತ ಇರಬೇಕು ಎನ್ನುವುದು ನನ್ನ ಆಸೆ. ಕೊಡೋದರಲ್ಲಿರುವ ಸುಖ ತೆಗೆದುಕೊಳ್ಳೋದ್ರಲ್ಲಿ ಇರಲ್ಲ, ನನ್ನ ಕೈಯಲ್ಲಿ ಆಗೋದನ್ನು ಮಾಡ್ಬೇಕು, ಒಂದು ಗೆಲುವು ಸಿಕ್ಕಿದೆ ಅಂದ್ರೆ ಅದನ್ನೂ ಮೀರಿದ ಗೆಲುವನ್ನು ಜನ ನಮ್ಮಿಂದ ನಿರೀಕ್ಷೆ ಮಾಡ್ತಾರೆ, ಗೆಲ್ಲುವುದು ಸುಲಭ ಅಲ್ಲ, ಆದರೆ ಗೆದ್ದ ಬಳಿಕ ಜವಾಬ್ದಾರಿ ಜಾಸ್ತಿಯಾಗಬೇಕು” ಎನ್ನುವ ಪಾಸಿಟಿವ್ ಮಾತನ್ನು ಮಿಲನಾ ಹೇಳುತ್ತಾರೆ.

ಪ್ರವಾಸ, ಪುಸ್ತಕ ಮತ್ತು ಪಾತ್ರ:

ಕತೆಗಳಲ್ಲಿ ತಮ್ಮ ಪಾತ್ರ ಫೋಷಣೆಗೆ ಜಾಸ್ತಿ ಅವಕಾಶವಿದ್ದರೆ ಮಾತ್ರ ಮಿಲನಾ ನಾಗರಾಜ್ ಆ ಪಾತ್ರಕ್ಕೆ ಸೈ ಎನ್ನುತ್ತಾರಂತೆ. ಕತೆಯಲ್ಲಿ ಪಾತ್ರ, ಪ್ರೇಕ್ಷಕನ ಮನಸ್ಸಲ್ಲಿ ಗಟ್ಟಿಯಾಗಿ ಕೂತರೆ ಮಾತ್ರ ಅವರಿಗೆ ಸಮಾಧಾನವಂತೆ. ಸಿನಿಮಾದ ಜೊತೆ ಪ್ರವಾಸಗಳು, ಪುಸ್ತಕಗಳ ಓದು ಬದುಕಿಗೆ ಪೊಸಿಟಿವ್ ಪರಿಣಾಮ ಬೀರುತ್ತೆ. ಕಳೆದು ಹೋದ ದಿನಗಳ ಬಗ್ಗೆ ಕಡಿಮೆ ಯೋಜನೆ ಮಾಡ್ತಾ ಪ್ರಸ್ತುತ ಮತ್ತು ಭವಿಷ್ಯದ ಬಗ್ಗೆ ಒಂದಷ್ಟು ಯೋಚಿಸಿದರೆ ಗೆಲುವು ಕಾಣಬಹುದು” ಎನ್ನುವುದನ್ನು ಸಂದರ್ಶನವೊಂದರಲ್ಲಿ ಮಿಲನಾ ನಾಗರಾಜ್ ವಿಶ್ವಾಸದಿಂದ ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಕನ್ನಡದ ಟಾಪ್ ಲವ್ ಸ್ಟೋರಿ ಫಿಲ್ಮ್ಸ್ ಡಿಟೈಲ್ಸ್ ಇಲ್ಲಿದೆ Top Love Story Films List In Kannada

ಬೋರ್ ಆದಾಗ ಮನಸ್ಸನ್ನು ಚಿಲ್ ಮಾಡಲು ನೋಡ್ಬೋದು ಈ ಮೂವೀಸ್ ಎಷ್ಟು...

Dr Rajkumar All Movies List – ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಮೂವೀ ಲಿಸ್ಟ್ ಇಲ್ಲಿದೆ

ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಎ ಟು ಝಡ್ ಮೂವೀ...

ಸಿನಿಪ್ರಿಯರಿಗೆ ರಸದೌತಣ- ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಸಿನಿಪ್ರಿಯರಿಗೆ ರಸದೌತಣ- ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಿನಿ ಪ್ರಿಯರಿಗೆ ಸಡಗರದ ಸುಗ್ಗಿ ಈ ಸಲದ...