- ತಂದೆ ಮಗನ ಬಾಂಧವ್ಯ ಬಿಂಬಿಸುವ ಚಿತ್ರ “ಫಾದರ್ಸ್ ಡೇ” ಮಳೆಗಾಲದಲ್ಲಿ ತೆರೆಗೆ
- ಇಲೆವೆನ್ ಎಲಿಮೆಂಟ್ಸ್ ಫಿಲ್ಮ್ಸ್ ಮತ್ತು ರೆಕ್ಟ್ಯಾಂಗಲ್ ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರವನ್ನು ರಾಜರಾಮ್ ರಾಜೇಂದ್ರನ್ ನಿರ್ದೇಶಿಸಿದ್ದಾರೆ.
- ನಾಯಕ ನಟನಾಗಿ ಮಿಂಚಿದ್ದಾರೆ ಹರ್ಷಿಲ್ ಕೌಶಿಕ್.
ಬೈಕ್ ನಲ್ಲಿ ಸವಾರಿ ನಡೆಸುತ್ತಾ ಸಂಬಂಧಗಳನ್ನು ಹೆಚ್ಚು ಅರ್ಥಮಾಡಿಕೊಳ್ಳುತ್ತಾ ಸಾಗುವ ತಂದೆ ಮತ್ತು ಮಗನ ಭಾವನಾತ್ಮಕ ಪ್ರಯಾಣದ ಕಥೆಯನ್ನು ಕಥಾಹಂದರವಾಗಿ ಹೊಂದಿದೆ “ಫಾದರ್ಸ್ ಡೇ”. Fathers Day ಈ ಚಿತ್ರವು ಮರುಶೋಧನೆ, ನಗು, ಸುಖ-ದುಃಖ, ಜೀವನದ ಸಿಹಿ-ಕಹಿ ಸತ್ಯಗಳನ್ನು ವಿವರಿಸುವ ಕಥೆಯಾಗಿದೆ ಎನ್ನುತ್ತಾರೆ ನಾಯಕ ನಟ ಆಚಾರ್ & ಕೋ ಮತ್ತು ಅನಾಮಧೇಯ ಅಶೋಕ್ ಕುಮಾರ್ ಚಿತ್ರಗಳ ಖ್ಯಾತಿಯ ಹರ್ಷಿಲ್ ಕೌಶಿಕ್ Harshik Koushik.
ನಿರ್ದೇಶಕ ರಾಜಾರಾಮ್ ರಾಜೇಂದ್ರನ್ Rajaram Rajendran ಅವರಿಗೆ ಇದು ಚೊಚ್ಚಲ ಚಿತ್ರವಾಗಿದ್ದು, ಹಾಸ್ಯ ಮತ್ತು ಭಾವನಾತ್ಮಕ ಕಥೆಯ ಸಮ್ಮಿಶ್ರವಾಗಿದೆ. ಇಲೆವೆನ್ ಎಲಿಮೆಂಟ್ಸ್ ಫಿಲ್ಮ್ಸ್ Eleven Elimints Films ಮತ್ತು ರೆಕ್ಟ್ಯಾಂಗಲ್ ಸ್ಟುಡಿಯೋಸ್ Rectangal Studios ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ತಂದೆಯ ಪಾತ್ರವನ್ನು ಅಜಿತ್ ಹಂದೆ Ajith Hande ನಿರ್ವಹಿಸಿದ್ದಾರೆ. ಕರ್ನಾಟಕದ ಸುಂದರವಾದ ಭಾಗಗಳಲ್ಲಿ ಚಿತ್ರೀಕರಣ ನಡೆದಿದ್ದು, ಹಾಡುಗಾರ ಅಲೋಕ್ ಬಾಬು ಆರ್ ಅಲಿಯಾಸ್ ಆಲ್ ಓಕೆ ಮತ್ತು ಸಾಮ್ರಾಗ್ನಿ ಅವರು ಸಹ ನಟಿಸಿದ್ದಾರೆ. ಚಿತ್ರವು ಜೂನ್ನಲ್ಲಿ ಬಿಡುಗಡೆಯಾಗಲಿದೆ.