ಆರ್.ಸಿ.ಬಿ. ಯಶಸ್ಸಿಗೆ ಚಪ್ಪಾಳೆ ಹೊಡ್ದಿದಾರೆ ಸಿನಿ ಸ್ಟಾರ್ ಗಳು” – Sandalwood Celebrities who reacted to RCB’s IPL 2025 win

Date:

ಆರ್.ಸಿ.ಬಿ. ಯಶಸ್ಸಿಗೆ ಚಪ್ಪಾಳೆ ಹೊಡ್ದಿದಾರೆ ಸಿನಿ ಸ್ಟಾರ್ ಗಳು” ಯಾರ್ಯಾರು ಏನ್ ಹೇಳಿದಾರೆ ಇಲ್ಲಿದೆ

ಕೇವಲ ಸ್ಯಾಂಡಲ್ ವುಡ್ ನ ನಟರು ಮಾತ್ರಲ್ಲದೇ ಬಾಲಿವುಡ್ ಖ್ಯಾತನಾಮರು, ಪ್ಯಾನ್ ಇಂಡಿಯಾ ನಟರೂ ಕೂಡಾ ಆರ್.ಸಿ.ಬಿ. ಗೆಲುವಿಗೆ ತಮ್ಮ ಸಂತಸವನ್ನು ತಮ್ಮ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಶಿವರಾಜ್ ಕುಮಾರ್

ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ವಿರಾಟ್ ಕೊಹ್ಲಿ ಫೋಟೋ ಹಂಚಿಕೊಂಡು, ”ಚಾಂಪಿಯನ್ಸ್ ಆಫ್ ಹಾರ್ಟ್ ಈಗ ಓನರ್ಸ್ ಆಫ್ ದ ಕಪ್. ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ ಕರುನಾಡ ಚಕ್ರವರ್ತಿ ಶಿವಣ್ಣ

ಡಾಲಿ ಧನಂಜಯ

ತಮ್ಮ ಅಧಿಕೃತ ಇನ್ಸ್ಟಾ ಗ್ರಾಂ ಖಾತೆಯ ಸ್ಟೋರಿಯಲ್ಲಿ ಆರ್ಸಿಬಿ ಗೆಲುವಿನ ಫೋಟೋ ಹಾಕಿ “ನಮ್ದೇ ನಮ್ದೇ ನಮ್ದೇ” ಎಂದು ಬರೆದುಕೊಂಡಿದ್ದಾರೆ ಡಾಲಿ ಧನಂಜಯ್.

ಸುದೀಪ್

ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಆರ್ಸಿಬಿ ಲೋಗೋ ಫೋಟೋ ಹಂಚಿಕೊಂಡು, ”ಫೈನಲಿ ಸುದೀರ್ಘ ಕಾಯುವಿಕೆ ಕೊನೆಗೊಂಡಿದೆ. ವರ್ಷಗಳ ಉತ್ಸಾಹ, ಪರಿಶ್ರಮ ಮತ್ತು ನಂಬಿಕೆಯ ನಂತರ ಆರ್.ಸಿ.ಬಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಪ್ರತಿಯೊಬ್ಬ ಆರ್ಸಿಬಿ ಅಭಿಮಾನಿಗೂ ಎಂಥ ಕ್ಷಣವಿದು. ಈ ಸಲ ಕಪ್ ನಮ್ದು” ಎಂದು ಬರೆದುಕೊಂಡಿದ್ದಾರೆ ಕಿಚ್ಚ ಸುದೀಪ್.

ಅಶ್ವಿನಿ ಪುನೀತ್ ರಾಜ್‌ಕುಮಾರ್

ಆರ್ಸಿಬಿ ತಂಡದ ಫೋಟೋದೊಂದಿಗೆ, ಆರ್ಸಿಬಿ ಜೆರ್ಸಿ ತೊಟ್ಟ ಪುನೀತ್ ರಾಜ್‌ಕುಮಾರ್ ಫೋಟೋ ಹಂಚಿಕೊಂಡು, ”ಫೈನಲಿ ಈ ಸಲ ಕಪ್ ನಮ್ದೇ! ವರ್ಷಗಳ ಅಚಲ ಬೆಂಬಲ, ಅಂತ್ಯವಿಲ್ಲದ ಘೋಷಣೆಗಳು ಮತ್ತು ಅಖಂಡ ನಂಬಿಕೆಯ ನಂತರ ನಮ್ಮ ಕನಸುಗಳು ನನಸಾಗಿವೆ! ಆರ್ಸಿಬಿ ಐಪಿಎಲ್2025 ಚಾಂಪಿಯನ್ಸ್. ನಮ್ಮ ತಂಡ, ನಮ್ಮ ಗೆಲುವು, ನಮ್ಮ ಆರ್ಸಿಬಿ. ವರ್ಷಗಳ ನಿರೀಕ್ಷೆ ಹಾಗೂ ನಂಬಿಕೆ ಮತ್ತು ಅಳಲಿನ ನಂತರ ಇಂದು ಕನಸು ನನಸಾಗಿದೆ” ಎಂದು ಬರೆದುಕೊಂಡಿದ್ದಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್.

ರಮ್ಯಾ

ತಮ್ಮ ಇನ್ಸ್ಟಾಗ್ರಾಮ್ನ ಸ್ಟೋರಿಯಲ್ಲಿ ಆರ್ಸಿಬಿ ಸಂಭ್ರಮಾಚರಣೆಯ ಫೋಟೋ ಹಂಚಿಕೊಂಡು, “ಈ ಸಲ ಕಪ್ ನಮ್ದು” ಎಂದು ಬರೆದುಕೊಂಡಿದ್ದಾರೆ ಮೋಹಕತಾರೆ ರಮ್ಯಾ.

ರಾಜ್ ಬಿ ಶೆಟ್ಟಿ

ಇನ್ಸ್ಟಾಗ್ರಾಮ್ನ ಸ್ಟೋರಿಯಲ್ಲಿ “ಈ ಸಲ ಕಪ್ ನಮ್ದು” ಎಂದು ಒಂದು ಸ್ಟೋರಿ, ಮತ್ತೊಂದರಲ್ಲಿ ಆರ್.ಸಿ.ಬಿ. ತಂಡ ಹಾಗೂ ಇನ್ನೊಂದರಲ್ಲಿ ಆರ್.ಸಿ.ಬಿ ಜೆರ್ಸಿ ತೊಟ್ಟ ಪುನೀತ್ ರಾಜ್ಕುಮಾರ್ ಅವರ ಫೋಟೋ ಹಾಕಿದ್ದಾರೆ ನಟ ರಾಜ್ ಬಿ ಶೆಟ್ಟಿ.

ರಶ್ಮಿಕಾ ಮಂದಣ್ಣ

ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಆರ್.ಸಿ.ಬಿಯ ಎಲ್ಲ ಆಟಗಾರರ ಚಿತ್ರವನ್ನು ಹಂಚಿಕೊಂಡಿದ್ದಾರೆ. “ಗೆಲುವಿನ ವಾಸನೆ ಬರುತ್ತಿದೆ” ಜೊತೆಗೆ ಎಂದೂ ಬರೆದಿದ್ದಾರೆ.

ರಣ್ವೀರ್ ಸಿಂಗ್

ಮುಂಬೈನವರಾದರೂ ಆರ್ಸಿಬಿಯ ದೊಡ್ಡ ಅಭಿಮಾನಿ. ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರ ಚಿತ್ರ ಹಂಚಿಕೊಂಡಿರುವ ರಣ್ವೀರ್ ಸಿಂಗ್ “ಇದೇ ಸರ್ವಸ್ವ” ಎಂದು ಬದುಕೊಂಡಿದ್ದಾರೆ. ವರ್ಷಗಳಿಂದಲೂ ಆರ್ಸಿಬಿ ಗೆಲುವಿಗಾಗಿ ಕಾಯುತ್ತಿದ್ದೆವು, ಈಗ ಆ ಕ್ಷಣ ಬಂದಿದೆ ಎಂದಿದ್ದಾರೆ.

ಅಲ್ಲು ಅರ್ಜುನ್

ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಮಗನ ವಿಡಿಯೋ ಹಂಚಿಕೊಂಡ ಟಾಲಿವುಡ್ ಸೂಪರ್ ಸ್ಟಾರ್, ”ಅಯಾನ್ ಬಹಳ ಭಾವುಕನಾಗುತ್ತಿದ್ದಾನೆ. ವಿರಾಟ್ ಕೊಹ್ಲಿ ಫ್ಯಾನ್ ಬಾಯ್ ಮೂಮೆಂಟ್. ಸೊ ಕ್ಯೂಟ್ ಮೈ ಚಿನ್ನಿ ಬಾಬು” ಎಂದು ಬರೆದುಕೊಂಡಿದ್ದಾರೆ.

ಸೋನು ಸೂದ್

“ಶ್ರಮದ ಫಲ ಸಿಹಿಯಾಗಿರುತ್ತದೆ. ಕೊನೆಗೂ ಆರ್.ಸಿ.ಬಿ ಕಪ್ ಗೆದ್ದಿದ್ದಾರೆ. ಆರ್.ಸಿ.ಬಿಯವರಿಗೆ ಹೃದಯಪೂರ್ವಕ ಅಭಿನಂದನೆಗಳು” ಎಂದಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್

ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್ ಕೊಡಗಿನ ಸ್ವಾದವಿರುವ ವಿಭಿನ್ನ ಚಿತ್ರವಿದು ರಾ.ಸೂರ್ಯ...

ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ ಗೀತೆ

ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ...

ಡಿಫರೆಂಟ್ ಆಗಿ ಗಮನ ಸೆಳೀತಿದೆ “ಬ್ರ್ಯಾಟ್” ಟೀಸರ್

ಡಿಫರೆಂಟ್ ಆಗಿ ಗಮನ ಸೆಳೀತಿದೆ “ಬ್ರ್ಯಾಟ್” ಟೀಸರ್ ಡಾರ್ಲಿಂಗ್ ಕೃಷ್ಣ ಹುಟ್ಟಿದ ದಿನಕ್ಕೆ...

ಕರಾವಳಿಯ ಸಸ್ಪೆನ್ಸ್ ಕತೆ ಹೇಳಲು ಬರ್ತಿದೆ “ಮಾರ್ನಮಿ”

ಕರಾವಳಿಯ ಸಸ್ಪೆನ್ಸ್ ಕತೆ ಹೇಳಲು ಬರ್ತಿದೆ “ಮಾರ್ನಮಿ” ಟೀಸರ್ ಅನ್ನು ಅದ್ದೂರಿಯಾಗಿ ಬಿಡುಗಡೆ...