ಕಾಶ್ಮೀರ-ಕರ್ನಾಟಕದ ಭಾವನಾತ್ಮಕ ಪಯಣ “ಹರ್ಮುಖ್”

Date:

  • ಕಾಶ್ಮೀರ-ಕರ್ನಾಟಕದ ಭಾವನಾತ್ಮಕ ಪಯಣ “ಹರ್ಮುಖ್”
  • ಎರಡು ಸಂಸ್ಕೃತಿ, ಎರಡು ಭಾಷೆಗಳನ್ನು ಬೆಸೆಯು ಸಿನಿಮಾ
  • ಡಾ. ಆಯಶ್ ಆರಿಫ್ ಚಿತ್ರದ ನಿರ್ಮಾಪಕ ಮತ್ತು ನಾಯಕ ನಟರಾಗಿ ಮಿಂಚಿದ್ದಾರೆ.

ಕನ್ನಡ ಮತ್ತು ಕಾಶ್ಮೀರಿ ಭಾಷೆಯನ್ನೊಳಗೊಂಡ, ಕಾಶ್ಮೀರದ ಭಾವವನ್ನು ಕನ್ನಡದಲ್ಲಿ, ಕನ್ನಡದ ಭಾವವನ್ನು ಕಾಶ್ಮೀರದ ಕಣ್ಣಲ್ಲಿ ನೋಡಲು ಪ್ರಯತ್ನಿಸುವ ಅಪರೂಪದ ಸಿನಿಮಾ “ಹರ್ಮುಖ್” Harmukh. ಸೋಮವಾರ ಶ್ರೀನಗರದಲ್ಲಿ ವಿವಿಧ ಇವೆಂಟ್ ಗಳೊಂದಿಗೆ ಪ್ರಮೋಷನ್ ಶುರು ಮಾಡಿ ಈ ಸಿನಿಮಾ ತಂಡ ಸದ್ದು ಮಾಡಿತು. ಎರಡು ಸಂಸ್ಕೃತಿಗಳು, ಎರಡು ಭಾಷೆಗಳೊಂದಿಗೆ ಕಾಶ್ಮೀರ ಮತ್ತು ಕರ್ನಾಟಕದ ಭಾಷೆಗಳನ್ನು ಪರಸ್ಪರ ಮಾತನಾಡಲು ಕಲಿತ ನಟರಿಂದ ನಡೆಯುವ ಸಂಪೂರ್ಣ ಹೃದಯಸ್ಪರ್ಶಿ ನಿರೂಪಣೆ ಈ ಸಿನಿಮಾದಲ್ಲಿದೆ. ಕಾಶ್ಮೀರಿ- ಕನ್ನಡ ಎರಡರಲ್ಲೂ ರಚಿಸಲಾದ ಮೊದಲ ಫುಲ್-ಫ್ಲೆಡ್ಜ್ ಸಿನಿಮಾ ಇದಾಗಿದೆ.

ನಿರೀಕ್ಷೆ ಮೂಡಿಸಿದೆ ಸಿನಿಮಾ

ಸೋಮವಾರ ಶ್ರೀನಗರದಲ್ಲಿ ಹರ್ಮುಖ್ ಸಿನಿಮಾದ ಪ್ರಮೋಶನ್ ಈವೆಂಟ್ ನಡೆಯಿತು. ವಾಯ್ಸ್ಓವರ್ಸ್ ಅಥವಾ ಪೋಸ್ಟ್-ಪ್ರೊಡಕ್ಷನ್ ವರ್ಕ್ ಡಬ್ಬಿಂಗ್ ಅನ್ನು ಅವಲಂಬಿಸದೇ ಸಂಪೂರ್ಣವಾಗಿ ಕಾಶ್ಮೀರಿ ಮತ್ತು ಕನ್ನಡ ಎರಡರಲ್ಲೂ ಈ ಸಿನಿಮಾ ನಿರ್ಮಿಸಲಾಗಿದೆಯಂತೆ. ಟ್ರೇಲರ್, ಹಾಡುಗಳು ಮತ್ತು ಪೋಸ್ಟರ್ಗಳನ್ನು ಅಭಿಮಾನಿಗಳೆದುರು ಬಿಡುಗಡೆ ಮಾಡಲಾಗಿದೆ. ಅಂದ ಹಾಗೆ ಇದೇ ಜೂನ್ 18ರಂದು ಶ್ರೀನಗರದ ಐನಾಕ್ಸ್ನಲ್ಲಿ ಬಿಡುಗಡೆಯಾಗಲಿದ್ದು ನಿರೀಕ್ಷೆ ಮೂಡಿಸಿದೆ. ಡಾ. ಆಯಶ್ ಆರಿಫ್ Dr. Ayush Arif ಚಿತ್ರದ ನಿರ್ಮಾಪಕ ಮತ್ತು ನಾಯಕ ನಟರಾಗಿ ಈ ಸಿನಿಮಾದಲ್ಲಿ ಮಿಂಚಿದ್ದಾರಂತೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಅಶೋಕ್ ಕಶ್ಯಪ್ Ashok Kashyap ಕತೆ ಬರೆದಿದ್ದಾರೆ.

ಕಾಶ್ಮೀರ ಮತ್ತು ಕರ್ನಾಟಕ – ಎರಡು ವಿಭಿನ್ನ ಪ್ರದೇಶಗಳು ಮತ್ತು ಸಂಪ್ರದಾಯಗಳಿಂದ ಬಂದ ಇಬ್ಬರು ಸ್ನೇಹಿತರ ಭಾವನಾತ್ಮಕ ಪ್ರಯಾಣವೇ ಈ ಸಿನಿಮಾದ ಎಳೆ. ಹರ್ಮುಖ್ ಪರ್ವತಕ್ಕೆ ತಲುಪುವ ಅವರ ಕತೆ ಮುಂದೇನಾಗುತ್ತದೆ ಎನ್ನುವ ಕುತೂಹಲ ಸಿನಿಮಾ ಬಿಡುಗಡೆಯಾದ ಮೇಲೆಯೇ ತಣಿಯಬೇಕಿದೆ.
ಚಿತ್ರದಲ್ಲಿ ಜಾವೇದ್ ಖಾನ್ ಗೋರಾ, ಮುಷ್ತಾಕ್ ವಾಣಿ, ಮಸರತ್ ಕಾಂಜಿ, ಟಿ.ಎಸ್.ನಾಗಾಭರಣ ಮೊದಲಾದವರು ನಟಿಸಿದ್ದಾರೆ. ಐಕಾನ್ ವಾಹಿದ್ ಜೀಲಾನಿ ಸಂಗೀತವಿದೆ. ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡುವ ಉದ್ದೇಶ ಹೊಂದಿಲ್ಲದ ಈ ಸಿನಿಮಾ ತಂಡಕ್ಕೆ ಕತೆಯನ್ನು ಪ್ರೇಕ್ಷಕ ಅರ್ಥ ಮಾಡಿಕೊಂಡು ಇಷ್ಟಪಟ್ಟರೆ ಅದೇ ಸಂತೃಪ್ತಿಯಂತೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಗೆ ಎಂಟ್ರಿ ಕೊಡುತ್ತಿದೆ ಎರಡು ಬಹುನಿರೀಕ್ಷಿತ ಸಿನಿಮಾಗಳು – Two of the Most Awaited Movies are Finally Entering OTT This Week

• ಮಳೆಗಾಲದಲ್ಲಿ ಮನೆಯಲ್ಲಿಯೇ ಬಿಂದಾಸ್ ಮನರಂಜನೆ• ಒಂದು ಆಕ್ಷನ್ ಇನ್ನೊಂದು ಅಪರೂಪದ...

ಓಟಿಟಿಯಲ್ಲಿ ಸದ್ದು ಮಾಡ್ತಿವೆ ಈ ಸೂಪರ್ ಹಿಟ್ ಚಿತ್ರಗಳು

ಜೂನ್ ಮಳೆಯೊಂದಿಗೆ ಆನಂದಿಸಬಹುದಾದ ಇಂಟರೆಸ್ಟಿಂಗ್ ಸಿನಿಮಾಗಳು ಆಕ್ಷನ್, ಕಾಮಿಡಿ, ಸಖತ್ ಥ್ರಿಲ್ಲರ್ ಮೂವಿಗಳದ್ದೇ...

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್ ರಂಗಭೂಮಿಯಿಂದ ಕಲಾಯಾತ್ರೆ ಆರಂಭಿಸಿ...

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ ಯುವ ಸಂಗೀತ ನಿರ್ದೇಶಕನ...