ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ

Date:

  • ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ
  • ಯುವ ಸಂಗೀತ ನಿರ್ದೇಶಕನ ಇಂಟರೆಸ್ಟಿಂಗ್ ಮ್ಯೂಸಿಕಲ್ ಜರ್ನಿ ಇಲ್ಲಿದೆ
  • ಸಂಗೀತವನ್ನೇ ಉಸಿರಾಡುವ ಅಪ್ಪಟ ಪ್ರತಿಭಾವಂತನ ಕಹಾನಿ ಹೀಗಿದೆ

ಕೀಬೋರ್ಡ್, ಕೊಳಲು, ಗಿಟಾರ್, ವೀಣೆ, ಮೆಲೊಡಿಕಾ, ತಬಲಾ, ಹಾರ್ಮೋನಿಯಂ, ಡ್ರಮ್ಸ್, ಮೌತ್ ಆರ್ಗನ್ ಹೀಗೆ ಬಗೆಬಗೆಯ ವಾದ್ಯ ಸಂಗೀತವನ್ನೇ ಉಸಿರಾಡುತ್ತಿರುವ, ಯುವ ಸಂಗೀತ ನಿರ್ದೇಶಕ ಪ್ರಣವ್ ಸತೀಶ್ Pranav Sathish ಅವರ ಸಂಗೀತದ ಜರ್ನಿ ಸ್ವಾರಸ್ಯಕರ. ಸಿನಿಮಾ ಸಂಗೀತದಲ್ಲೂ, ಸಾಂಪ್ರದಾಯಿಕ ಸಂಗೀತದಲ್ಲೂ ಇವರು ಮಿಂಚಿದ ನಕ್ಷತ್ರ. ಸದ್ಯ ಸಿನಿಮಾ ಸಂಗೀತ ಸಂಯೋಜನೆಯಲ್ಲಿ ಬ್ಯುಸಿಯಾಗಿ ಸದ್ದು ಮಾಡುತ್ತಿರುವ ಈ ಪ್ರತಿಭಾವಂತ ಯುವ ಸಂಗೀತ ನಿರ್ದೇಶಕನ ಇಂಟರೆಸ್ಟಿಂಗ್ ಕಹಾನಿಯಿದು.

ಕನಸು ಕಂಗಳ ಸಂಗೀತದ ನಕ್ಷತ್ರ

10 ರ ಹರೆಯದಲ್ಲಿಯೇ ಕೀಬೋರ್ಡ್ ಮೇಲೆ ಬೆರಳಾಡಿಸಿ ಸ್ವರ ಮಾಧುರ್ಯ ಹೊಮ್ಮಿಸಿದ ಪ್ರಣವ್, ಎಸ್ ಜೆ ಪ್ರಸನ್ನ S J Prasana, ಎನ್ ವಿ ರಾಜೇಶ್ N V Rajesh, ಕರ್ನಲ್ ಚಕ್ರವರ್ತಿColonel Chakravarthy, ವಿದ್ವಾನ್ ವಿಜಯ್ ರಂಗ Vidvan Vijay Ranga, ಮ್ಯಾಕ್ಸ್ ವೆಲ್ ಪಿ ಜೆ Max Well P J ಅವರಿಂದ ಆಳವಾಗಿ ಕೀಬೋರ್ಡ್ ವಾದನವನ್ನು ಕಲಿತರು. ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ಡಿ ರಾವ್ Pravin D Rav ಅವರ ಅಂತರ್ ಧ್ವನಿ ಮ್ಯೂಸಿಕ್ ಬ್ಯಾಂಡ್ ನಲ್ಲಿ ಪ್ರಣವ್ ಸ್ವರಗಳನ್ನು ನುಡಿಸಿಯೇ ಎಲ್ಲರ ಹೃದಯ ಗೆದ್ದರು. ತಾಯಿ ವಿಶಾಲ ಕೆ ಆರ್ Vishala K R ಮತ್ತು ತಂದೆ ಸತೀಶ್ ಬಾಬು Sathish Baabu ಪ್ರಣವ್ ಕನಸಿಗೆ ಸಂಪೂರ್ಣ ಜೊತೆಯಾದರು. ಅಲ್ಲದೆ ಪೂರ್ಣ ಶಾಲೆಯ ಸಾಯಿರಾ ಬಾನು ಸಲೀಮ್, ಪ್ರಜ್ವಲ್ ಮಾವ ಮತ್ತು ಅಚ್ಚುಮೆಚ್ಚಿನ ಅಜ್ಜಿಯರಾದ ಸುಮಿತ್ರ ರಾಮಕೃಷ್ಣ ಮತ್ತು ಜಾನಕಿ ರಾಮರಾವ್ ಹಾಗೂ ಕುಟುಂಬದವರೆಲ್ಲರ ಸಹಕಾರ ಇತ್ತು. ಹಾಗಾಗಿ ಸಣ್ಣ ಪೋರನಾಗಿರುವಾಗಲೇ ಬೆಂಗಳೂರಿನ ಬಾಲಭವನ, ಟೌನ್ ಹಾಲ್, ರವೀಂದ್ರ ಕಲಾಕ್ಷೇತ್ರ ಮೊದಲಾದ ಸ್ಥಳಗಳಲ್ಲಿ ಇವರ ಪ್ರತಿಭೆಗೆ ದೊಡ್ಡ ವೇದಿಕೆ ಸಿಕ್ಕಿತು.

ಸ್ವರಲೋಕದ ಸುಮಧುರ ಜರ್ನಿ

ಪ್ರಣವ್ ಸತೀಶ್ ಅವರಿಗೆ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ವೆಸ್ಟರ್ನ್ ಕ್ಲಾಸಿಕಲ್ ಹಾಗೂ ಲೈಟ್ ಮ್ಯೂಸಿಕ್ ಕ್ಷೇತ್ರಗಳೆಂದರೆ ಅಪಾರ ಆಸಕ್ತಿ. ಇಲ್ಲಿಯವರೆಗೆ ಸುಮಾರು 600 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬೆಂಗಳೂರು ಸ್ಕೂಲ್ ಆಫ್ ಮ್ಯೂಸಿಕ್, ಅಲಯನ್ಸ್ ಫ್ರಾಂಚೈಸ್, ಗಾಲ್ಫ್ ಕ್ಲಬ್, ರಾಜಭವನ ಹಾಗೂ ಜೆಎಸ್ಎಸ್ ಆಡಿಟೋರಿಯಂ ಸೇರಿದಂತೆ ಹಲವು ಪ್ರಮುಖ ವೇದಿಕೆಗಳಲ್ಲಿ ಸೋಲೋ, ಆರ್ಕೆಸ್ಟ್ರಾ ಮತ್ತು ಬ್ಯಾಂಡ್ ಕಾರ್ಯಕ್ರಮಗಳಲ್ಲಿ ಮಿಂಚಿದ ಪ್ರತಿಭೆ ಇವರದ್ದು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ರಾಧಾಕೃಷ್ಣ ನಾಯಕ್ ಜೀರವರೊಂದಿಗೆ 120 ಕ್ಕೂ ಹೆಚ್ಚು ಸತ್ಸಂಗ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನಲ್ಲಿ ಅಲ್ಲದೆ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ತುಮಕೂರು, ಹುಬ್ಬಳ್ಳಿ, ಬಳ್ಳಾರಿ, ಮೈಸೂರು, ರಾಣಿಬೆನ್ನೂರು, ಗಂಗಾವತಿ, ಧರ್ಮಸ್ಥಳ, ಚಿತ್ರದುರ್ಗ ಮೊದಲಾದ ಕರ್ನಾಟಕದ ವಿವಿದೆಡೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ಪ್ರಸಿದ್ದಿ ಪಡೆದಿದ್ದಾರೆ.

ಪ್ರಶಸ್ತಿಗಳ ಗರಿ ಮೂಡಿದಾಗ

ಇವರ ಸಂಗೀತ ಸಾಧನೆಗೆ ವಿಶ್ವೇಶ್ವರಯ್ಯ ಪ್ರಶಸ್ತಿ, ಮಯೂರ ಪ್ರಶಸ್ತಿ, ವಿಶ್ವ ಚೇತನ ಪ್ರಶಸ್ತಿ, ಸ್ವರ್ಣಶ್ರೀ ಪ್ರಶಸ್ತಿ, ವಿಪ್ರ ಪ್ರತಿಭಾ ಪುರಸ್ಕಾರ, ಬಹು ನಾದ ವಾದ್ಯ ಪ್ರವೀಣ, ಸಂಗೀತ ಲಯ ವಾದ್ಯ ಸೇವಾರತ್ನ, ದಾದಾಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಮೋಟಿವೇಷನಲ್ ಪ್ರಶಸ್ತಿಗಳ ಗರಿಗಳು ಪ್ರಣವ್ ಸತೀಶ್ ಅವರಿಗೆ ಮೂಡಿದೆ.

ಉದಯ ಟಿವಿ, ಚಂದನ ಟಿವಿ, ಟಿವಿ 9, ವಿಜಯ ನ್ಯೂಸ್, ಕಸ್ತೂರಿ ನ್ಯೂಸ್, ಸುದ್ದಿ ಟಿ ವಿ ಮತ್ತು ಆಯುಷ್ ಮ್ಯೂಸಿಕ್ ವಾಹಿನಿಗಳಲ್ಲಿ ಇವರ ಕಾರ್ಯಕ್ರಮಗಳು ವೀಕ್ಷಕರ ಮನ ಸೆಳೆದಿದೆ. AAT ಮೀಡಿಯಾ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಮ್ಯೂಸಿಕ್ ಪ್ರೊಡಕ್ಷನ್ ಡಿಪ್ಲೊಮಾ ಓದಿ, ಟ್ರಿನಿಟಿ ಗಿಲ್ಡ್ ಹಾಲ್ ಲಂಡನ್ ರವರ, 8ನೇ ಗ್ರೇಡ್ ಪ್ರಾಕ್ಟಿಕಲ್ ಹಾಗೂ 5ನೇ ಗ್ರೇಡ್ ಥಿಯರಿ ಆಫ್ ಮ್ಯೂಸಿಕ್ ಕೀಬೋರ್ಡ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ಭಾರತ ಸರ್ಕಾರದ ಸಾಂಗ್ & ಡ್ರಾಮಾ ವಿಭಾಗದಿಂದ ಇನ್ಸ್ಟ್ರುಮೆಂಟಲಿಸ್ಟ್ (ಕೀಬೋರ್ಡ್) ಆಗಿಯೂ ಆಯ್ಕೆಯಾದ ಹೆಗ್ಗಳಿಕೆ ಪ್ರಣವ್ ಅವರದ್ದು.

ಸಿನಿಮಾದಲ್ಲಿ “ಪ್ರಣವ” ಸರಿಗಮ

ಸುಮಾರು 250 ಕ್ಕೂ ಹೆಚ್ಚು ಭಕ್ತಿಗೀತೆಗಳು ಮತ್ತು ನುರಿತ ಸಂಗೀತಗಾರರ ಆಲ್ಬಮ್ ಹಾಡುಗಳ ಜೊತೆಗೆ ಟಿ ವಿ ವಾಹಿನಿಗಳ ಕಾರ್ಯಕ್ರಮಗಳು, ಡಾಕ್ಯುಮೆಂಟರಿ, ಜಾಹಿರಾತು, ವೆಬ್ ಸೀರೀಸ್ ಅಲ್ಲದೆ ಕಿರುಚಿತ್ರಗಳಿಗೂ, ಸಿನಿಮಾ ಸಂಗೀತಗಳಿಗೂ ಪ್ರಣವ್ ರಾಗವಾಗಿದ್ದಾರೆ. ಅವರ ಗುರುಗಳಾದ ಶ್ರೀ ಆರ್ ಎಸ್ ಗಣೇಶ್ ನಾರಾಯಣ್ ರವರ ಜೊತೆ ಹಲವಾರು ಆಲ್ಬಮ್ ಸಾಂಗ್ ಗಳಿಗೆ, ಕಿರುಚಿತ್ರಗಳಿಗೆ ಹಾಗೂ ಅವರ ಹತ್ತಾರು ಚಲನಚಿತ್ರಗಳಿಗೆ ಸಹಾಯಕನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾನೆ.

ನವಿಲುಗರಿ ನವೀನ್ ಪಿ ಬಿ ಅವರ ನಿರ್ದೇಶನದ “ಲೆಜೆಂಡ್ ಡೈರೆಕ್ಟರ್” ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ, “ಹೈ ವೈಬ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್” ನಲ್ಲಿ ಸ್ಥಾನ ಪಡೆದಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಉತ್ತಮ ಸಂಗೀತ ನಿರ್ದೇಶನಕ್ಕಾಗಿ “ದಾದಾ ಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಮೋಟಿವೇಷನಲ್ ಅವಾರ್ಡ್” ಪಡೆದ ದೈತ್ಯ ಪ್ರತಿಭೆ ಪ್ರಣವ್.

ಸದ್ಯ “ಜನರಿಂದ ನಾನು ಮೇಲೆ ಬಂದೆ” ಚಿತ್ರದ ಸಂಗೀತ ನಿರ್ದೇಶನವನ್ನು ಮುಗಿಸಿರುವ ಪ್ರಣವ್, ಇನ್ನೂ ಮೂರು ಸಿನಿಮಾಗಳಿಗೆ ಮ್ಯೂಸಿಕ್ ಡೈರೆಕ್ಷನ್ ನೀಡಲು ಒಪ್ಪಿಕೊಂಡಿದ್ದಾರೆ. ಹೊಸತನದ ಸುಮಧುರ ಸಂಗೀತ ನೀಡಿ ತಮ್ಮ ಮ್ಯೂಸಿಕಲ್ ಜರ್ನಿಯನ್ನು ಇನ್ನಷ್ಟು ಇಂಪುಗೊಳಿಸಲು ಪ್ರಣವ್ ಸತೀಶ್ ರೆಡಿಯಾಗಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್! – Are You Looking for a song to make Reels? These songs are in great...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್!...