- ಜೂನ್ ಮಳೆಯೊಂದಿಗೆ ಆನಂದಿಸಬಹುದಾದ ಇಂಟರೆಸ್ಟಿಂಗ್ ಸಿನಿಮಾಗಳು
- ಆಕ್ಷನ್, ಕಾಮಿಡಿ, ಸಖತ್ ಥ್ರಿಲ್ಲರ್ ಮೂವಿಗಳದ್ದೇ ಹಬ್ಬ
ಓಟಿಟಿಯಲ್ಲಿ ಹೊಸ ಸಿನಿಮಾಗಳು ರಿಲೀಸಾಗಿ ಸದ್ದು ಮಾಡುತ್ತಿದೆ. ಸಖತ್ ಇಂಟರೆಸ್ಟಿಂಗ್ ಕಥನವುಳ್ಳ ಈ ಸಿನಿಮಾಗಳನ್ನು ಜೂನ್ ಮಳೆಯೊಂದಿಗೆ ನೀವು ಆನಂದಿಸಬಹುದು.
List of Kannada Movies released in OTT
ದಿ ರೈಸ್ ಆಫ್ ಅಶೋಕ: The Rise Of Ashoka
”ದಿ ರೈಸ್ ಆಫ್ ಅಶೋಕ”. ಸತೀಶ್ ನೀನಾಸಂ Sathish Ninasam ಅಭಿನಯದ ಚಿತ್ರ. ಸಪ್ತಮಿ ಗೌಡ Sapthami Gowda ಈ ಚಿತ್ರದ ನಾಯಕಿ. ದಿವಂಗತ ನಿರ್ದೇಶಕ ವಿನೋದ್ ವಿ ಧೋಂಡಾಳೆ ನಿರ್ದೇಶನದ ಈ ಚಿತ್ರ ಫೆಬ್ರವರಿ 27ರಂದು ಬಿಡುಗಡೆಯಾಗಿತ್ತು. ಬಿಡುಗಡೆಯ ಮುನ್ನ ಅಪಾರವಾದ ನಿರೀಕ್ಷೆಯನ್ನು ಕೂಡ ಮೂಡಿಸಿತ್ತು. ಆದರೆ ಪ್ರೇಕ್ಷಕರನ್ನು ಅಷ್ಟಾಗಿ ಸೆಳೆದಿರಲಿಲ್ಲ. 70ರ ದಶಕದ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ, ಪ್ರೀತಿಯ ಜೊತೆಗೆ ಕ್ರಾಂತಿಯ ಸ್ಪರ್ಶವಿರುವ ಕತೆ ಚಿತ್ರದ್ದು. ಬಿ ಸುರೇಶ್, ಗೋಪಾಲಕೃಷ್ಣ ದೇಶಪಾಂಡೆ, ಯಶ್ ಶೆಟ್ಟಿ, ಡ್ಯ್ರಾಗನ್ ಮಂಜು, ರವಿಶಂಕರ್, ಜಗ್ಗಪ್ಪ ತಾರಾಗಣದಲ್ಲಿರುವ ಈ ಚಿತ್ರವನ್ನು ವಿನೋದ್. ವಿ. ಧೋಂಡಾಳೆ ನಿರ್ದೇಶಿಸಿದ್ದಾರೆ. ಇದೇ ಜೂನ್ 5 ಕ್ಕೆ ”ಸನ್ ನೆಕ್ಸ್ಟ್” ನಲ್ಲಿ ಬಿಡುಗಡೆಯಾಗಿದೆ ಚಿತ್ರ.
ಕೆಡಿ: ದಿ ಡೆವಿಲ್ KD:The Devil
ಪ್ರೇಮ್ Prem ಆಕ್ಷನ್ ಕಟ್ ಹೇಳಿರೋ ಧೃವ ಸರ್ಜಾ Dhruva Sarja ನಾಯಕತ್ವದ ಈ ಸಿನಿಮಾ ಜೂನ್ 5 ರಿಂದ ಜೀ5 Zee5 ನಲ್ಲಿ ಲಭ್ಯವಿರಲಿದೆ.
ಪೀಟರ್ Peter
ಸುಕೇಶ್ ಶೆಟ್ಟಿ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪೀಟರ್ ಜೂನ್ 5 ರಿಂದ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ವಲವಾರ Valavaara
ಮಲೆನಾಡ ಹಳ್ಳಿಯ ಜೀವನಶೈಲಿಯ ಕಥೆ ವಲವಾರ ಜೂನ್ 5 ರಿಂದ ಜೀ5 ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿರಲಿದೆ.
ಲೀಡರ್: Leader
ಎಪ್ರಿಲ್ 3 2026 ರಂದು ತೆರೆಗೆ ಬಂದಿದ್ದ ಬಹುನಿರೀಕ್ಷಿತ ಚಿತ್ರ “ಲೀಡರ್”. ಇದೊಂದು ತಮಿಳು ಚಿತ್ರವಾಗಿದ್ದು ಕನ್ನಡಕ್ಕೆ ಡಬ್ ಮಾಡಲಾಗಿದೆ. ಕನ್ನಡ ವೀಕ್ಷಕರಿಗೂ ಇಷ್ಟವಾಗುವ ಕತೆ ಚಿತ್ರಕ್ಕಿದೆ. ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಇರುವ ತೀವ್ರವಾದ ರಾಜಕೀಯ ಕಥಾಹಂದರವು ಪ್ರೇಕ್ಷಕರನ್ನು ಸೆಳೆಯುತ್ತಿದೆ. ಆಕ್ಷನ್ ಕೂಡ ಬೇಕಾದಷ್ಟಿದೆ. ಸರಾನ್ ಅರುಲ್, ಪಾಯಲ್ ರಜಪೂತ್, ಶಾಮ್ ಮೊದಲಾದವರು ನಟಿಸಿದ್ದಾರೆ, ”ಸನ್ ನೆಕ್ಸ್ಟ್”ನಲ್ಲಿ ಈ ಚಿತ್ರ ಲಭ್ಯ ಇರಲಿದೆ. ಆಸಕ್ತರು ನೋಡಬಹುದು.
‘ಸೀಟ್ಎಡ್ಜ್’ Seat Edge
ಹಾರರ್ ಕಾಮಿಡಿ ಸಿನಿಮಾ ‘ಸೀಟ್ಎಡ್ಜ್’ ಓಟಿಟಿಯಲ್ಲಿ ಸದ್ದು ಮಾಡಿದೆ. ಜನವರಿ 30ರಂದು ತೆರೆಗೆ ಬಂದಿದ್ದ ಸಿನಿಮಾ ಈಗ ಅಮೇಜಾನ್ ಪ್ರೈಂ Amazon Prime ವೀಡಿಯೋದಲ್ಲಿ ಲಭ್ಯವಿದೆ. ಸಿದ್ದು ಮೂಲಿಮನಿ Siddu Moolimani ಹಾಗೂ ರವೀಕ್ಷಾ ಶೆಟ್ಟಿ Raviksha Shetty ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಕಿರಣ್, ಪುನೀತ್ ತಾರಾಗಣದಲ್ಲಿದ್ದಾರೆ. ಚೇತನ್ ಶೆಟ್ಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಡಾರ್ಕ್ ಕಾಮಿಡಿ ಜೊತೆಗೆ ಹಾರರ್-ಥ್ರಿಲ್ಲರ್ ಅಂಶಗಳು ಚಿತ್ರದಲ್ಲಿದೆ. ಯೂಟ್ಯೂಬ್ ನಲ್ಲಿ ಲೈಕ್ಸ್, ವೀವ್ಸ್ ಗಾಗಿ ವ್ಲಾಗರ್ಸ್ ಏನೆಲ್ಲಾ ಸರ್ಕಸ್ ಮಾಡ್ತಾರೆ ಎನ್ನುವ ಕತೆ ಚಿತ್ರದಲ್ಲಿದೆ.


