ಸಂಚಲನ ಮೂಡಿಸ್ತಿದೆ “ಎಕ್ಕ” ಸಿನಿಮಾದ ಈ “ರೌಡಿ ರೈಮ್ಸ್”

Date:

  • ಸಂಚಲನ ಮೂಡಿಸ್ತಿದೆ “ಎಕ್ಕ” ಸಿನಿಮಾದ ಈ “ರೌಡಿ ರೈಮ್ಸ್”
  • ಈ ಹಾಡನ್ನು ರೌಡಿಸಂ ಜಗತ್ತಿನ ಸುತ್ತ ಹೆಣೆಯಲಾಗಿದೆ.
  • A ನಿಂದ Z ವರೆಗಿನ ವರ್ಣಮಾಲೆಯ ಮೂಲಕ ಕಥೆ ಹೇಳುತ್ತಾ ಸಾಗುವುದು ವಿಶೇಷ.

“ಬ್ಯಾಂಗಲ್ ಬಂಗಾರಿ” Bangle Bangari ಹಾಡಿನ ಮೂಲಕ ಸಖತ್ತಾಗಿ ಸದ್ದು ಮಾಡ್ತಿರೋ “ಎಕ್ಕ” Ekka ಚಿತ್ರತಂಡ, ಇದೀಗ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದ್ದು ಆ ಹಾಡೂ ಕೂಡ ಯುಟ್ಯೂಬ್ ನಲ್ಲಿ ಅಬ್ಬರಿಸ್ತಾ ಇದೆ. ಈ ಹಾಡನ್ನು ರೌಡಿಸಂ ಜಗತ್ತಿನ ಸುತ್ತ ಹೆಣೆಯಲಾಗಿದೆ. ಅಂದರೆ ಹಾಡಲ್ಲಿ ರೌಡಿಸಂ ಸಂಸ್ಕೃತಿಯನ್ನು ಆಕರ್ಷಕ ರೀತಿನಲ್ಲಿ ಕಟ್ಟಿಕೊಡಲಾಗಿದೆ. ಜೊತೆಗಳ ರೌಡಿಗಳ ಜೀವನದ ವಿವಿಧ ಆಯಾಮಗಳನ್ನು ಈ ಹಾಡು ಬಿಚ್ಚಿಡುತ್ತದೆ. ಸಿನಿಮಾದ ಕುರಿತು ಕುತೂಹಲ ಕೂಡ ಮೂಡಿಸುತ್ತದೆ ಈ ಹಾಡು. ಹಾಗಾಗಿ ಇದನ್ನು “ರೌಡಿ ರೈಮ್ಸ್” Rowdi Rhyms ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಾಡು A ನಿಂದ Z ವರೆಗಿನ ವರ್ಣಮಾಲೆಯ ಮೂಲಕ ಕಥೆ ಹೇಳುತ್ತಾ ಸಾಗುವುದು ವಿಶೇಷ.

ಹಾಡಿನ ಹಿಂದೆ ಇವರ ಕೈಚಳಕವಿದೆ

ಚಿತ್ರರಂಗಕ್ಕೆ ಟ್ರೆಂಡ್ ಸೆಟ್ಟಿಂಗ್ ಹಾಡುಗಳನ್ನು ನೀಡುತ್ತಿರುವ ಸಂಗೀತ ನಿರ್ದೇಶಕ ಚರಣ್ ರಾಜ್ Charan Raj ಈ ರೌಡಿ ಹಾಡನ್ನು ಹುಟ್ಟಿಸಿದ್ದಾರೆ. ಹಾಡಿಗೆ ನಾಗಾರ್ಜುನ್ ಶರ್ಮಾ Nagarjuna Sharma ಮತ್ತು ಚಿತ್ರದ ನಿರ್ದೇಶಕ ರೋಹಿತ್ ಪದಕಿ Rohith Padaki ಅವರ ಸಾಹಿತ್ಯವಿದೆ. ಅಲ್ಲದೆ ಈ ಹಾಡಿಗೆ ಚರಣ್ ರಾಜ್ ಮತ್ತು ರೋಹಿತ್ ಪದಕಿ ಅವರು ವಿಭಿನ್ನ ಶೈಲಿಯ ಧ್ವನಿ ನೀಡಿ ಹಾಡಿರುವುದು ಬೇರೆಯದ್ದೇ ಆದ ಫೀಲ್ ಕೊಟ್ಟಿದೆ. ಯುವ ರಾಜ್ ಕುಮಾರ್ Yuva Rajkumar ನಟನೆಯ ಈ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನವಿದ್ದು , ಅಶ್ವಿನಿ ಪುನೀತ್ ರಾಜ್‌ಕುಮಾರ್ Ashwini Punith Raj Kumar ಅವರ ಪಿಆರ್‌ಕೆ ಪ್ರೊಡಕ್ಷನ್ಸ್, PRK Productions ಜಯಣ್ಣ ಮತ್ತು ಬೋಗೇಂದ್ರ ಅವರ ಜಯಣ್ಣ ಫಿಲ್ಮ್ಸ್ Jayanna Films ಮತ್ತು ಕಾರ್ತಿಕ್ ಗೌಡ ಅವರ ಕೆಆರ್‌ಜಿ ಸ್ಟುಡಿಯೋಸ್ KRG Studios ಜಂಟಿಯಾಗಿ ನಿರ್ಮಿಸಿವೆ. ಸಿನಿಮಾ ರಿಲೀಸ್ ಗೂ ಮೊದಲೇ “ಎಕ್ಕ”ದ ಹಾಡುಗಳು ಸಂಚಲನ ಮೂಡಿಸುತ್ತಿದ್ದು ಪ್ರೇಕ್ಷಕರು ಥ್ರಿಲ್ಲಾಗಿರೋದಂತೂ ನಿಜ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಗೆ ಎಂಟ್ರಿ ಕೊಡುತ್ತಿದೆ ಎರಡು ಬಹುನಿರೀಕ್ಷಿತ ಸಿನಿಮಾಗಳು – Two of the Most Awaited Movies are Finally Entering OTT This Week

• ಮಳೆಗಾಲದಲ್ಲಿ ಮನೆಯಲ್ಲಿಯೇ ಬಿಂದಾಸ್ ಮನರಂಜನೆ• ಒಂದು ಆಕ್ಷನ್ ಇನ್ನೊಂದು ಅಪರೂಪದ...

ಓಟಿಟಿಯಲ್ಲಿ ಸದ್ದು ಮಾಡ್ತಿವೆ ಈ ಸೂಪರ್ ಹಿಟ್ ಚಿತ್ರಗಳು

ಜೂನ್ ಮಳೆಯೊಂದಿಗೆ ಆನಂದಿಸಬಹುದಾದ ಇಂಟರೆಸ್ಟಿಂಗ್ ಸಿನಿಮಾಗಳು ಆಕ್ಷನ್, ಕಾಮಿಡಿ, ಸಖತ್ ಥ್ರಿಲ್ಲರ್ ಮೂವಿಗಳದ್ದೇ...

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್ ರಂಗಭೂಮಿಯಿಂದ ಕಲಾಯಾತ್ರೆ ಆರಂಭಿಸಿ...

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ ಯುವ ಸಂಗೀತ ನಿರ್ದೇಶಕನ...