- ಅಲೋಕ್ ದುರ್ಗಾಪ್ರಸಾದ್ ಅಭಿನಯದ ‘ಕುಡ್ಲ ನಮ್ದು ಊರು’ ಆಡಿಯೋ ಮತ್ತು ಟ್ರೈಲರ್ ಲಾಂಚ್
- ಮಂಗಳೂರಿನ ಯುವ ಪ್ರತಿಭೆ ಅಲೋಕ್ ದುರ್ಗಾಪ್ರಸಾದ್ ಚೊಚ್ಚಲ ಸಿನಿಮಾ
- ತುಳುನಾಡಿನ ಕಲೆ, ಸಂಸ್ಕೃತಿ, ಆಚರಣೆಗಳ ಮೆರಗನ್ನು ಪ್ರತಿನಿಧಿಸುವ ಸಿನಿಮಾ
- ತುಳುನಾಡಿನ ಯುವಪ್ರತಿಭೆಗಳಿಗೆ ಅವಕಾಶ
ಕೃತಾರ್ಥ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣಗೊಂಡು, ಮಂಗಳೂರಿನ ಯುವ ಪ್ರತಿಭೆ ಅಲೋಕ್ ದುರ್ಗಾಪ್ರಸಾದ್ Alok Durga Prasad ಅವರೇ ನಿರ್ದೇಶಿಸಿ, ನಾಯಕನಟನಾಗಿ ಕಾಣಿಸಿಕೊಂಡಿರುವ ಚಿತ್ರ ‘ಕುಡ್ಲ ನಮ್ದು ಊರು’. Kudla Namdu Uru movie ಇದರ ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭವು ಇತ್ತೀಚಿಗೆ ನಡೆದಿದ್ದು, ಸದ್ಯದಲ್ಲೇ ತೆರೆಯ ಮೇಲೆ ಮಿಂಚಲು ರೆಡಿಯಾಗಿದೆ ವಿಭಿನ್ನ ಶೈಲಿಯ ಕುಡ್ಲ ನಮ್ದು ಊರು ಚಿತ್ರ.

ತುಳುನಾಡಿನ ಪರಂಪರೆ ಬಿಂಬಿಸುವ ಚಿತ್ರ
ಅಲೋಕ್ ದುರ್ಗಾ ಪ್ರಸಾದ್ ರ Alok Durga Prasad ಚೊಚ್ಚಲ ಸಿನಿಮಾ ಇದಾಗಿದ್ದು, ಈ ಸಿನಿಮಾವು ತುಳುನಾಡಿನ ಆಚಾರ-ವಿಚಾರ, ಭಾಷಾ ವೈವಿಧ್ಯತೆ, ಕಲೆ, ಸಂಸ್ಕೃತಿ, ಸಾಮರಸ್ಯ ಮುಂತಾದ ವಿಷಯಗಳ ಕುರಿತ ವಿಶಿಷ್ಟ ಕಥಾಹಂದರವನ್ನು ಒಳಗೊಂಡಿದೆ. ಚಿತ್ರೀಕರಣ ಪೂರ್ಣಗೊಂಡಿದ್ದು ಸದ್ಯದಲ್ಲೇ ಬಿಡುಗಡೆಯಾಗುವ ಸಿದ್ಧತೆಯಲ್ಲಿದೆ.
ಸ್ಥಳೀಯ ಹಾಗೂ ಬೆಳಕಿಗೆ ಬರುತ್ತಿರುವ ಉದಯೋನ್ಮುಖ ಪ್ರತಿಭೆಗಳಿಗೆ ಈ ಚಿತ್ರದಲ್ಲಿ ಅವಕಾಶ ಕಲ್ಪಿಸಿದ್ದು, ಯುವಪ್ರತಿಭೆಗಳಿಗೊಂದು ಪ್ರೋತ್ಸಾಹ ಕೊಟ್ಟಂತಾಗಿದೆ. ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್.ಆರ್.ಕೆ ವಿಶ್ವನಾಥ್ ಮತ್ತು ಮಾಜಿ ಅಧ್ಯಕ್ಷರಾದ ಭಾ.ಮಾ.ಹರೀಶ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭಾಷಯ ಕೋರಿ, ಬೆಂಬಲ ನೀಡಿದರು.

ನಿಮ್ಮ ಎಲ್ಲಾ ಸಿನಿಮಾ ತಂಡಕ್ಕೆ ಶುಭವಾಗಲಿ ನಿಮ್ಮ ಯುವ ಪ್ರತಿಭೆಗಳಿಗೆ ಮತ್ತು ಹೊಸ ಪ್ರತಿಭೆಗಳಿಗೆ ಕರೆ ನೀಡಿರುವುದರಿಂದ ಯುವ ಪ್ರತಿಭೆಗಳು ಹೊಸ ಪ್ರತಿಭೆಗಳು ನಿಮ್ಮ ಚಿತ್ರಕ್ಕೆ ಬಹುಸಂಖ್ಯಾದಲ್ಲಿ ಬಂದು ನಿಮ್ಮ ಚಿತ್ರವನ್ನು ಯಶಸ್ವಿಗೊಳಿಸಲು ಸಾಕಾರವಾಗಲೆಂದು ನನ್ನ ಕೋರಿಕೆ ಧನ್ಯವಾದಗಳು ಅಂದಿಗೆ ಡಿ ಅರುಣ್ ಕುಮಾರ್ ಅಣ್ಣಾಜಿ ಬಳ್ಳಾರಿ