ಜೂನ್ 6 ಕ್ಕೆ ತೆರೆಯ ಮೇಲೆ “ಕಾಲೇಜ್ ಕಲಾವಿದ”

Date:

  • ಜೂನ್ 6 ಕ್ಕೆ ತೆರೆಯ ಮೇಲೆ “ಕಾಲೇಜ್ ಕಲಾವಿದ”
  • ಫುಲ್ ಟ್ರೆಂಡಿಂಗ್ ಆಗಿತ್ತು ಚಿತ್ರದ ಹಾಡುಗಳು
  • ಸಂಜಯ್ ಮಳವಳ್ಳಿ ನಿರ್ದೇಶನದ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡಿದೆ.

ಟೈಟಲ್ ನಿಂದಲೇ ಸಿನಿ ಪ್ರೇಮಿಗಳ ಸೆಳೆಯುತ್ತಿದೆ “ಕಾಲೇಜ್ ಕಲಾವಿದ” College Kalavida ಸಿನಿಮಾವನ್ನು ಗಜಾನನ ಫಿಲ್ಮ್ಸ್ Gajanana Films ಬ್ಯಾನರ್ ನಲ್ಲಿ ತರುಣ್ ಶರ್ಮಾ Tharun Sharma ನಿರ್ಮಾಣ ಮಾಡಿದ್ದಾರೆ. ಕಾಲೇಜು ಲವ್ ಸ್ಟೋರಿಗೆ ಸಂಬಂಧಿಸಿದ ಸಿನಿಮಾ ಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಸಂಜಯ್ ಮಳವಳ್ಳಿ Sanjay Malavalli. ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ ಆರವ್ ಸೂರ್ಯ Arav Surya. ಇವರಿಗೆ ಜೋಡಿಯಾಗಿ ಚೈತ್ರ ಲೋಕನಾಥ್ Chaithra Lokanath ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಟ್ರೆಂಡ್ ಕ್ರಿಯೇಟ್ ಮಾಡಿದೆ ಚಿತ್ರದ ಹಾಡುಗಳು

ಇತ್ತೀಚೆಗಷ್ಟೇ ಈ ಸಿನಿಮಾದ “ಸಿಂಗಾರ ನೀನೆ” Singaara Neene ಹಾಗೂ “ಹೊಂಟಾಯ್ತು ಹಮ್ಮೀರ” Hontaithu Hammeera ಎಂಬ ಎರಡು ಹಾಡುಗಳು ಬಿಡುಹಡೆಗೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡಿಂಗ್ ಆಗ್ತಿದೆ. ಮಾನ್ಸೂನ್ ಸೀಸನ್ ಗೆ ಈ ಹಾಡು ಹೇಳಿ ಮಾಡಿಸಿದ ಹಾಗಿದೆ ಎರಡೂ ಹಾಡುಗಳು. ಚಿತ್ರ ಟ್ರೇಲರ್ ಕೂಡಾ ರಿಲೀಸ್ ಆಗಿದ್ದು, ಚಿತ್ರ ನೋಡಬೇಕೆಂಬ ಹಂಬಲ ಹುಟ್ಟಿಹಾಕುತ್ತಿದೆ. ಇದೊಂದು ಮ್ಯೂಸಿಕಲ್ ಜರ್ನಿ ಸಿನಿಮಾಆಗಿದ್ದು, ಪ್ರೇಮಕಥೆಯೊಂದಿಗೆ ಕಾಲೇಜು ದಿನಗಳ ಸುಂದರ ಅನುಭವ ಕಟ್ಟಿಕೊಡುವ ಪ್ರಯತ್ನ ಮಾಡಿದೆಯಂತೆ ಚಿತ್ರತಂಡ. ಇದರೊಂದಿಗೆ ಕಾಲೇಜು ಸ್ನೇಹಿತರ ಸ್ನೇಹ, ಫೈಟ್ಸ್, ಟ್ರಗ್ಸ್ ಮುಂತಾದ ಕಂಟೆಟ್ ಕೂಡಾ ಇದೆಯಂತೆ.

ಚಿತ್ರತಂಡದಲ್ಲಿ ಹುಲಿ ಕಾರ್ತಿಕ್, ಹರಿಣಿ ಶ್ರೀಕಾಂತ್, ರಮೇಶ್ ಭಟ್, ಶೈಲಪುತ್ರಿ, ನಿಖಿಲ್, ನಂದಿನಿ, ದಿನೇಶ್ ಕುಲಕರ್ಣಿ, ನವೀನ್, ನಿರಂತ್ ಸೂರ್ಯ ಮುಂತಾದವರು ಬಣ್ಣ ಹಚ್ಚಿದ್ದಾರೆ. ಸೂರಜ್ ಜೋಯ್ಸ್ ಸಂಗೀತ, ಆನಂದ್ ಸುಂದರೇಶ ಛಾಯಾಗ್ರಹಣ, ಮಹೇಶ್ ಗಂಗಾವತಿ ಸಂಕಲನ ಚಿತ್ರಕ್ಕಿದೆ. ಜೂನ್ 6 ಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರ ಸಿನಿಪ್ರೇಮಿಗಳು ಮನ ಗೆಲ್ಲುತ್ತದೆಯೇ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ...

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...