ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ “ಅನಾಮಧೇಯ ಅಶೋಕ್ ಕುಮಾರ್”

Date:

  • ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ “ಅನಾಮಧೇಯ ಅಶೋಕ್ ಕುಮಾರ್”
  • ಸಾಗರ್ ಕುಮಾರ್ ನಿರ್ದೇಶನದ ಹಾಗೂ ಕಿಶೋರ್ ಕುಮಾರ್ ಅಭಿನಯದ ಚಿತ್ರ ಇದಾಗಿದೆ ಫೆ.7 ರಂದು ತೆರೆಗೆ ಬರಲು ಸಿದ್ಧವಾಗಿದೆ.
  • ಟೀಸರ್ ಹಾಗೂ ಟ್ರೇಲರ್ ಮೂಲಕ ಸದ್ದು ಮಾಡುತ್ತಿದೆ “ಅನಾಮಧೇಯ ಅಶೋಕ್ ಕುಮಾರ್”

ಎಸ್ಕೆಎನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಲಾ ಕುಮಾರ್ Nirmala Kumar ಮತ್ತು ರಮ್ಯಾ ಸಾಗರ್ ಕುಮಾರ್ Ramya Sagar Kumar ನಿರ್ಮಿಸಿರುವ ಈ ಬಹು ನಿರೀಕ್ಷಿತ ಚಿತ್ರ “ಅನಾಮಧೇಯ ಅಶೋಕ್ ಕುಮಾರ್” Anamadheya Ashok Kumar ಈಗಾಗಲೇ ತನ್ನ ಟೀಸರ್ ಹಾಗೂ ಟ್ರೈಲರ್ ಮೂಲಕ ಜನರ ಮನಸ್ಸನ್ನು ಕೊಳ್ಳೆ ಹೊಡೆಯುತ್ತಿದೆ.

ಸಂಜೆ ಆರರಿಂದ ಬೆಳಗ್ಗೆ ಆರರವರೆಗಿನ ಕಥೆ

ಐಟಿ ವೃತ್ತಿಪರರಾಗಿರುವ ಸಾಗರ್ ಕುಮಾರ್ ಇದೀಗ ಚಿತ್ರ ನಿರ್ದೇಶಕರಾಗಿ ಹಾಗೂ ಸ್ವತಃ ಚಿತ್ರದ ಕತೆಗಾರರಾಗಿಯೂ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದಾರೆ. ಇವರೊಂದಿಗೆ ಮತ್ತು ಬೆನ್ನಿ ಥಾಮಸ್ ಚಿತ್ರಕ್ಕೆ ಕಥೆ ಬರೆದಿದ್ದಾರೆ. ನಿಜ ಜೀವನದ ಕ್ರೈಂ ಪ್ರಕರಣಗಳು ಮತ್ತು ಮಾಜಿ ಪೋಲೀಸ್ ಅಧಿಕಾರಿಯಿಂದ ಸ್ಫೂರ್ತಿ ಪಡೆದ ಕಥಾವಸ್ತುವನ್ನು ಒಳಗೊಂಡಿದ್ದು, ಸಂಜೆಯಿಂದ ಬೆಳಗಿನವರೆಗೆ ಪ್ರಸಿದ್ಧ ವಕೀಲರ ಹತ್ಯೆಯ ಸುತ್ತ ಕೇಂದ್ರೀಕೃತವಾಗಿದೆ. ಕುಮಾರ್ ಕಿಶೋರ್ ಕುಮಾರ್ ಪತ್ರಕರ್ತನಾಗಿ ನಟಿಸಿದರೆ, ಹರ್ಷಿಲ್ ಕೌಶಿಕ್ ಸರ್ಕಲ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿನ ರಹಸ್ಯವು ಕೊನೆಯವರೆಗೂ ಸಿನಿಮಾ ನೋಡುಗರನ್ನು ಕುತೂಹಲಿಗಳಾಗಿ ಉಳಿಯುವಂತೆ ಮಾಡುತ್ತದೆ ಎಂದು ನಿರ್ದೇಶಕರ ಅಭಿಪ್ರಾಯ.

ಉಳಿದಂತೆ ಚಿತ್ರದಲ್ಲಿ ಸುಧೀಂದ್ರ ನಾಯರ್, ಕಾಂತರಾಜ್ ಕಡ್ಡಿಪುಡಿ, ವೀರೇಶ್, ಸುಷ್ಮಾ, ಗಗನ್ ಮತ್ತು ದೀಪಕ್ ಮುಂತಾದವರು ಪಾತ್ರವಹಿಸಿದ್ದಾರೆ. ಆಜಾದ್ ಅವರ ಸಂಗೀತ ಸಂಯೋಜನೆ, ಸುನಿಲ್ ಹೊನಳ್ಳಿ ಛಾಯಾಗ್ರಹಣ, ಯೇಸು ಸಂಕಲನವಿದೆ. ಚಿತ್ರವನ್ನು ಕುನಾಲ್ ಮತ್ತು ರವಿಚಂದ್ರನ್ ವಿತರಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ...

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...