- ಟ್ರೆಂಡಿಂಗ್ ಆಗ್ತಿದೆ “ಜಾಂಟಿ ಸನ್ ಆಫ್ ಜಯರಾಜ್” ಚಿತ್ರದ “ಕ್ಷಮಿಸು ತಾಯೇ” ಹಾಡು
- ಆನಂದರಾಜ್ ಸಾಹಿತ್ಯ, ವಿಜೇತ್ ಮಂಜಯ್ಯ ಟ್ಯೂನ್ ಹಾಗೂ ಪ್ರೇಮ್ ಧ್ವನಿಯಿದೆ ಈ ಹಾಡಿಗೆ.
- ಚಿತ್ರದ ಕ್ಲೈಮಾಕ್ಸ್ ನಲ್ಲಿ ಬರುವ ಈ ಎಮೋಷನಲ್ ಸಾಂಗ್ ಎಲ್ಲರ ಮನಗೆಲ್ಲುತ್ತಿದೆ.
ಭೂಗತ ಲೋಕದ ಕಥಾನಕದ ಎಳೆಯನ್ನು ಹೊಂದಿರುವ ವಿಶಿಷ್ಟ ಚಿತ್ರ “ಜಾಂಟಿ ಸನ್ ಆಫ್ ಜಯರಾಜ್” Jhonty Son Of Jayaraj ಇದರ ಸೆಂಟಿಮೆಂಟಲ್ ಹಾಡು “ಕ್ಷಮಿಸು ತಾಯೇ” Kshamisu Thaye ಇತ್ತೀಚೆಗಷ್ಟೇ Think Music Kannada ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿದ್ದು ಇದೀಗ ಫುಲ್ ಟ್ರೆಂಡಿಂಗ್ ಆಗ್ತಿದೆ. ಚಿತ್ರಕ್ಕೆ ಆನಂದರಾಜ್ Anandraj ಆಕ್ಷನ್ ಕಟ್ ಹೇಳಿದ್ದು, ಈ ಹಾಡಿನ ಸಾಹಿತ್ಯ ಕೂಡಾ ಅವರದ್ದೇ ಆಗಿದೆ. ವಿಜೇತ್ ಮಂಜಯ್ಯ Vijeth Manjayya ಸಂಗೀತ ಸಂಯೋಜಿಸಿದ್ದು ಪ್ರೇಮ್ Prem ಹಾಡಿಗೆ ಧ್ವನಿಯಾಗುವ ಮೂಲಕ ತಾಯಿಯ ಕುರಿತಾದ ಒಂದು ಭಾವಪೂರ್ಣ ಹಾಡನ್ನು ಕನ್ನಡದ ಜನತೆಗೆ ನೀಡಿದ್ದಾರೆ.
ಸರ್ವಸ್ವವೇ ಆಗಿರುವ ತಾಯಿಯ ಕ್ಷಮೆ ಕೋರುವ ಹಾಡು
ಸೂಗುರ್ ಸಿನಿ ಪ್ರೊಡಕ್ಷನ್ Sugur Cini Production ಬ್ಯಾನರ್ ಅಡಿಯಲ್ಲಿ, ಸೂಗುರು ಕುಮಾರ್ Sugur Kumar ಈ ಚಿತ್ರದ ನಿರ್ಮಾಣ ಮಾಡಿದ್ದಾರೆ. ಕ್ಷಮಿಸು ತಾಯೇ “ಇದು ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಬರುವ ಹಾಡು. ಬೇರೆ ಕಡೆಗಳಲ್ಲಿ ತಪ್ಪು ಮಾಡಿದರೆ ನಾವು ತಕ್ಷಣ ಕ್ಷಮೆ ಕೇಳುತ್ತೇವೆ. ಆದರೆ ಅಮ್ಮನ ಬಳಿ ಕ್ಷಮಿಸು ಅಂತ ಕೇಳುವುದಿಲ್ಲ. ನಮ್ಮ ಸಿನಿಮಾದ ಮೂಲಕ ಎಲ್ಲ ತಾಯಂದಿರಿಗೂ ಕ್ಷಮೆ ಕೇಳುತ್ತೇವೆ. ಅಂತಿಮವಾಗಿ ಅಮ್ಮನೇ ಸರ್ವಸ್ವ ವಾಗಿದ್ದು, ಕ್ಷಮೆ ಕೇಳುವ ದಾರಿಯಲ್ಲಿ ಈ ಸಾಂಗ್ ಬರುತ್ತದೆ” ಎಂದು ನಿರ್ದೇಶಕರು ಈ ಹಾಡಿನ ಬಗ್ಗೆ ಮಾಹಿತಿ ತಿಳಿಸಿದ್ದಾರೆ.
ಬೆಂಗಳೂರಿನ ಭೂಗತ ಪಾತಕಿ ಎಂ.ಪಿ.ಜಯರಾಜ್ ಅವರ ಮಗ ಅಜಿತ್ ಜಯರಾಜ್ Ajith Jayaraj ನಾಯಕನಾಗಿ ನಟಿಸುತ್ತಿದ್ದು, ರಾಜವರ್ಧನ್, ಶರತ್ ಲೋಹಿತಾಶ್ವ, ನಿವಿಷ್ಕಾ ಪಾಟೀಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಅಕೋಟ್ ಅವರ ಛಾಯಾಗ್ರಹಣವಿದೆ.