ಬೇಸಿಗೆ ರಜೆ ಕಳೆದು ಶಾಲೆ ಪ್ರಾರಂಭಕ್ಕೆ ರೆಡಿಯಾಯ್ತು “ಸ್ಕೂಲ್ ಲೀಡರ್”

Date:

  • ಬೇಸಿಗೆ ರಜೆ ಕಳೆದು ಶಾಲೆ ಪ್ರಾರಂಭಕ್ಕೆ ರೆಡಿಯಾಯ್ತು “ಸ್ಕೂಲ್ ಲೀಡರ್”
  • ಸನ್ ಮ್ಯಾಟ್ರಿಕ್ಸ್ ಬ್ಯಾನರ್ ಅಡಿಯಲ್ಲಿ ಕೆ.ಸತ್ಯೇಂದ್ರ ಪೈ ನಿರ್ಮಾಣದ ಚಿತ್ರ
  • ರಾಜ್ಯಾದ್ಯಂತ ಮೇ 30 ಕ್ಕೆ ತೆರೆಗೆ “ಸ್ಕೂಲ್ ಲೀಡರ್”

ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಉದ್ದೇಶದ ಚಿತ್ರ “ಸ್ಕೂಲ್ ಲೀಡರ್” School Leader. ಹೈಸ್ಕೂಲ್ ವಿದ್ಯಾರ್ಥಿಗಳ ಮನೋ ವಿಕಾಸ, ಶೈಕ್ಷಣಿಕ ಉನ್ನತಿ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಕಥಾಹಂದರ ಹೊಂದಿದೆ ಈ ಚಿತ್ರ. ಈ ಹಿಂದೆ ಫೇಮಸ್ ಆಗಿ ಪ್ರಶಸ್ತಿ ಪಡೆದಿದ್ದ ಪೆನ್ಸಿಲ್ ಬಾಕ್ಸ್ ಚಿತ್ರದ ನಿರ್ದೇಶಕ ರಝಾಕ್ ಪುತ್ತೂರು Razak Puttur ಈ ಚಿತ್ರಕ್ಕೆ, ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳನ್ನು ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಸನ್ ಮ್ಯಾಟ್ರಿಕ್ಸ್ Sun Matrix ಬ್ಯಾನರ್ ಅಡಿಯಲ್ಲಿ ಕೆ.ಸತ್ಯೇಂದ್ರ ಪೈ K Sathyendra Pai ನಿರ್ಮಾಣ ಈ ಚಿತ್ರಕ್ಕಿದೆ.

25 ಶಾಲೆಗಳ 120 ಕ್ಕೂ ಹೆಚ್ಚು ವಿದ್ಯಾರ್ಥಿಗಳು

ಗಂಭೀರ ಕಥೆಯನ್ನು ಹಾಸ್ಯದ ಲೇಪನದೊಂದಿಗೆ ಆಸಕ್ತಿದಾಯಕವಾಗಿ, ಕುತೂಹಲ ಕೆರಳಿಸುವಂತೆ ನಿರ್ದೇಶಿಸಿದ್ದಾರಂತೆ ನಿರ್ದೇಶಕರು. ಶಾಲಾ ಚುನಾಣೆಯನ್ನು ಆಧರಿಸಿರು ಈ ಕಥೆಯನ್ನು ಕಟಪಾಡಿಯ ಶಾಲೆಯೊಂದರಲ್ಲಿ ಚಿತ್ರೀಕರಿಸಲಾಗಿದೆಯಂತೆ. ಸುಮಾರು 25 ಕ್ಕೂ ಹೆಚ್ಚು ಶಾಲೆಗಳ 120 ವಿದ್ಯಾರ್ಥಿಗಳನ್ನು ಈ ಚಿತ್ರದಲ್ಲಿ ಬಳಸಿಕೊಂಡಿರುವುದು ವಿಶೇಷ. ಕೋಸ್ಟಲ್ ವುಡ್ ನ ದಿಗ್ಗಜರಾದ ಅರವಿಂದ ಬೋಳಾರ್ Aravinda Bolar, ಭೋಜರಾಜ ವಾಮಂಜೂರು Bhojaraj Vamanjur, ದೀಪಕ್ ರೈ ಪಾಣಾಜೆ Deepak Rai Panaje, ಹಿರಿಯ ನಟ ರಮೇಶ್ ಭಟ್ Ramesh Bhat, ಮೂರುಮುತ್ತು ಖ್ಯಾತಿಯ ನಾಗೇಶ್ ಕಾಮತ್ ಕಟಪಾಡಿ Nagesh Kamath Katpady ಮುಂತಾದವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮೋಹನ್ ಪಡ್ರೆ ಛಾಯಾಗ್ರಹಣ, ಜಯಕಾರ್ತಿ ಸಂಗೀತ, ಸಚಿನ್ ರಾಮ್ ಸಂಕಲನ, ಆಶಿಶ್ ಅಂಚನ್ ನೃತ್ಯ ನಿರ್ದೇಶನ, ಅಕ್ಷತ್ ವಿಟ್ಲ ಸಹನಿರ್ದೇಶನ, ಸುದರ್ಶನ್ ಶಂಕರ್, ಎಂ.ಎಂ. ವಿಮಲ್ ಸಹನಿರ್ಮಾಣ ಚಿತ್ರಕ್ಕಿದ್ದು, ಚಿತ್ರದ ಬಗ್ಗೆ ಕುತೂಹಲ ಸಿನಿಪ್ರೇಮಿಗಳಲ್ಲಿ ಮೂಡಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಗೆ ಎಂಟ್ರಿ ಕೊಡುತ್ತಿದೆ ಎರಡು ಬಹುನಿರೀಕ್ಷಿತ ಸಿನಿಮಾಗಳು – Two of the Most Awaited Movies are Finally Entering OTT This Week

• ಮಳೆಗಾಲದಲ್ಲಿ ಮನೆಯಲ್ಲಿಯೇ ಬಿಂದಾಸ್ ಮನರಂಜನೆ• ಒಂದು ಆಕ್ಷನ್ ಇನ್ನೊಂದು ಅಪರೂಪದ...

ಓಟಿಟಿಯಲ್ಲಿ ಸದ್ದು ಮಾಡ್ತಿವೆ ಈ ಸೂಪರ್ ಹಿಟ್ ಚಿತ್ರಗಳು

ಜೂನ್ ಮಳೆಯೊಂದಿಗೆ ಆನಂದಿಸಬಹುದಾದ ಇಂಟರೆಸ್ಟಿಂಗ್ ಸಿನಿಮಾಗಳು ಆಕ್ಷನ್, ಕಾಮಿಡಿ, ಸಖತ್ ಥ್ರಿಲ್ಲರ್ ಮೂವಿಗಳದ್ದೇ...

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್ ರಂಗಭೂಮಿಯಿಂದ ಕಲಾಯಾತ್ರೆ ಆರಂಭಿಸಿ...

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ ಯುವ ಸಂಗೀತ ನಿರ್ದೇಶಕನ...