ಹಾಡಿನ ಮೂಲಕ ಸದ್ದು ಮಾಡ್ತಿರೋ “ಮಾದೇವ” ಜೂ. 6 ರಂದು ತೆರೆಗೆ

Date:

  • ಹಾಡಿನ ಮೂಲಕ ಸದ್ದು ಮಾಡ್ತಿರೋ “ಮಾದೇವ” ಜೂ. 6 ರಂದು ತೆರೆಗೆ
  • ವಿನೋದ್ ಪ್ರಭಾಕರ್ ನಾಯಕರಾಗಿ, ಸೋನಾಲ್ ಮೊಂತೆರೊ ನಾಯಕಿಯಾಗಿ ನಟಿಸಿರುವ ಸಿನಿಮಾ
  • ನವೀನ್ ರೆಡ್ಡಿ ಬಿ ನಿರ್ದೇಶನದಲ್ಲಿ ಮೂಡಿಬರಲಿದೆ “ಮಾದೇವ”

ಒಂದು ವಿಭಿನ್ನ ಕಥಾ ಹಂದರದ ಮಾಸ್ ಸಿನಿಮಾ “ಮಾದೇವ” Madeva ಜೂ. 6 ರಂದು ಅದ್ದೂರಿ ತೆರೆ ಕಾಣಲಿದೆ. ಟೈಗರ್ ಪ್ರಭಾಕರ್ ಮಗ ಟೈಗರ್ ವಿನೋದ್ ಪ್ರಭಾಕರ್ Vinod Prabhakar ನಾಯಕರಾಗಿ, ಸೋನಾಲ್ ಮೊಂತೆರೊ Sonal Monteiro ನಾಯಕಿಯಾಗಿ ನಟಿಸಿರುವ ಈ ಸಿನಿಮಾ, ನವೀನ್ ರೆಡ್ಡಿ ಬಿ Naveen Reddy B ನಿರ್ದೇಶನದಲ್ಲಿ ಮೂಡಿಬರಲಿದೆ. 1980ರ ಕಾಲಘಟ್ಟದಲ್ಲಿ ನಡೆಯುವ ಕಥಾಹಂದರನ್ನು ಹೇಳುತ್ತ ಸಾಗುವ ಈ ಸಿನಿಮಾದಲ್ಲಿ ಟೈಗರ್ ವಿನೋದ್ ಪ್ರಭಾಕರ್, “ಹ್ಯಾಂಗ್ ಮ್ಯಾನ್” ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. 19080 ಕಾಲಘಟ್ಟಕ್ಕೆ ಸೂಕ್ತವಾಗುವ ಸ್ಥಳಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ.

ಚಿತ್ರದಲ್ಲಿದ್ದಾರೆ ಘಟಾನುಘಟಿಗಳು

ಇನ್ನು ವಿಶೇಷಪಾತ್ರದಲ್ಲಿ ಶ್ರೀನಗರ ಕಿಟ್ಟಿ, ಅತಿಥಿಪಾತ್ರದಲ್ಲಿ ಮಾಲಾಶ್ರೀ ಮಿಂಚಿದ್ದಾರೆ. ಉಳಿದಂತೆ ಶೃತಿ, ಅಚ್ಯುತಕುಮಾರ್, ಕಾಕ್ರೋಚ್ ಸುಧೀ, ಬಲ ರಾಜವಾಡಿ, ಮೈಕೋ ನಾಗರಾಜ್ ಮುಂತಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಡಿಫರೆಂಟ್ ಡ್ಯಾನಿ, ರಿಯಲ್ ಸತೀಶ್, ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನವಿದೆ. ಬಾಲಕೃಷ್ಣ ತೋಟ ಕ್ಯಾಮರಾವಿದೆ, ವಿಜಯ್ ಎಂ ಕುಮಾರ್ ಸಂಕಲನವಿದೆ. ಗುಣ ಅವರ ಕಲಾ ನಿರ್ದೇಶನವಿದೆ. ಸಂಗೀತ ನಿರ್ದೇಶಕ ಪ್ರದ್ಯೋತನ್ ಸಂಗೀತ ಈಗಾಗಲೇ ಸಂಚಲನ ಉಂಟು ಮಾಡಿದೆ.

ಟ್ರೆಂಡಿಂಗ್ ಆಗ್ತಿದೆ ಡಿಫೆರೆಂಟ್ ಹಾಡು

“ಮಾದೇವ” ಸಿನಿಮಾ ವಿಡಿಯೋ ಸಾಂಗ್ ನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಹಾಡು ನೋಡಿದರೆ ಸಿನಿಮಾ ಕೂಡ ವಿಭಿನ್ನವಾಗಿ ಮೂಡಿಬಂದಿದೆ ಎನ್ನುವ ನಿರೀಕ್ಷೆ ಹುಟ್ಟದೇ ಇರದು. ಟೈಗರ್ ವಿನೋದ್ ಪ್ರಭಾಕರ್ ಕೂಡ ಡಿಫರೆಂಟ್ ಪಾತ್ರವೊಂದಲ್ಲಿ ಕಾಣಿಸಿಕೊಂಡಿದ್ದು ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. ರಾಧಾಕೃಷ್ಣ ಬ್ಯಾನರ್ ನಲ್ಲಿ ಆರ್. ಕೇಶವ ನಿರ್ಮಾಣದಲ್ಲಿ ಜೂ. 6 ರಂದು ತೆರೆ ಕಾಣಲಿರುವ ಈ ಸಿನಿಮಾ ಯಾವ ಪರಿಯಲ್ಲಿ ಸಂಚಲನ ಉಂಟು ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಗೆ ಎಂಟ್ರಿ ಕೊಡುತ್ತಿದೆ ಎರಡು ಬಹುನಿರೀಕ್ಷಿತ ಸಿನಿಮಾಗಳು – Two of the Most Awaited Movies are Finally Entering OTT This Week

• ಮಳೆಗಾಲದಲ್ಲಿ ಮನೆಯಲ್ಲಿಯೇ ಬಿಂದಾಸ್ ಮನರಂಜನೆ• ಒಂದು ಆಕ್ಷನ್ ಇನ್ನೊಂದು ಅಪರೂಪದ...

ಓಟಿಟಿಯಲ್ಲಿ ಸದ್ದು ಮಾಡ್ತಿವೆ ಈ ಸೂಪರ್ ಹಿಟ್ ಚಿತ್ರಗಳು

ಜೂನ್ ಮಳೆಯೊಂದಿಗೆ ಆನಂದಿಸಬಹುದಾದ ಇಂಟರೆಸ್ಟಿಂಗ್ ಸಿನಿಮಾಗಳು ಆಕ್ಷನ್, ಕಾಮಿಡಿ, ಸಖತ್ ಥ್ರಿಲ್ಲರ್ ಮೂವಿಗಳದ್ದೇ...

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್ ರಂಗಭೂಮಿಯಿಂದ ಕಲಾಯಾತ್ರೆ ಆರಂಭಿಸಿ...

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ ಯುವ ಸಂಗೀತ ನಿರ್ದೇಶಕನ...