ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ ಗೀತೆ

Date:

  • ಪ್ರೇಮದ ಕಡಲಲ್ಲಿ “ದೂರ ತೀರ ಯಾನ” : ಕಿವಿ ತಂಪಾಗಿಸ್ತಿದೆ ಶೀರ್ಷಿಕೆ ಗೀತೆ
  • ಮನ್ಸೋರೆ ನಿರ್ದೇಶಿಸಿರುವ “ದೂರ ತೀರ ಯಾನ” ಚಿತ್ರ ಇದೇ ಜುಲೈ 11 ರಂದು ರಾಜ್ಯದಾದ್ಯಂತ ತೆರೆಗಪ್ಪಳಿಸಲಿದೆ.
  • ಈ ಸಿನಿಮಾದ ಹಾಡುಗಳೆಲ್ಲಾ ಸಂಪೂರ್ಣ ಕನ್ನಡದಲ್ಲಿದ್ದು ಎಲ್ಲಿಯೂ ಇಂಗ್ಲಿಷ್ ಪದವನ್ನು ಬಳಸಿಲ್ಲ.

ಕನ್ನಡ ಚಿತ್ರರಂಗಕ್ಕೆ ಹರಿವು, ನಾತಿಚರಾಮಿ, ACT 1978 ಮತ್ತು 19.20.21 ಗಳಂತಹ ವಿಭಿನ್ನ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ಮನ್ಸೋರೆ, Mansore ಈಗ “ದೂರ ತೀರ ಯಾನ” ಹೊರಟಿದ್ದಾರೆ. ಹೌದು ಮನ್ಸೋರೆ ನಿರ್ದೇಶಿಸಿರುವ “ದೂರ ತೀರ ಯಾನ” Doora Theera Yana ಚಿತ್ರ ಇದೇ ಜುಲೈ 11 ರಂದು ರಾಜ್ಯದಾದ್ಯಂತ ತೆರೆಗಪ್ಪಳಿಸಲಿದೆ.

ಕಿವಿಯನ್ನು ತಂಪುಗೊಳಿಸುವಂತಿದೆ ಹಾಡು

ಚಿತ್ರದ ಶೀರ್ಷಿಕೆ ಗೀತೆಯನ್ನು ಇತ್ತೀಚೆಗಷ್ಟೇ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಪ್ರೇಕ್ಷಕರ ಕಿವಿಯನ್ನು ತಂಪುಗೊಳಿಸುವಂತಿದೆ ಈ ಹಾಡು. ಹಾಡನ್ನು ಕಿರಣ್ ಕಾವೇರಪ್ಪ, ಬರೆದಿದ್ದಾರೆ. ಬಕ್ಕೇಶ್ ರೋನಡ ಮತ್ತು ಕಾರ್ತಿಕ್ ಸಂಗೀತ ಸಂಯೋಜಿಸಿದ ಮತ್ತು ಬಕ್ಕೇಶ್ ಮತ್ತು ಇಶಾ ಸುಚಿ ಹಾಡಿರುವ ಈ ಹಾಡು ಚಿತ್ರದ ಕುರಿತು ಕುತೂಹಲ ಹುಟ್ಟಿಸಿದೆ. ಇನ್ನೊಂದು ವಿಶೇಷವೆಂದರೆ ಈ ಸಿನಿಮಾದ ಹಾಡುಗಳೆಲ್ಲಾ ಸಂಪೂರ್ಣ ಕನ್ನಡದಲ್ಲಿದ್ದು ಎಲ್ಲಿಯೂ ಇಂಗ್ಲಿಷ್ ಪದವನ್ನು ಬಳಸಿಲ್ಲ. ಉಳಿದ ಹಾಡುಗಳನ್ನು ಕವಿರಾಜ್, ಜಯಂತ ಕಾಯ್ಕಿಣಿ, ಪ್ರಮೋದ್ ಮರವಂತೆ ಅವರು ಬರೆದಿದ್ದಾರೆ.

ಪಯಣ ಹೊರಟಿರುವ ಯುವ ಪ್ರೇಮಿಗಳ ಕಥೆ

ಡಿ ಕ್ರಿಯೇಷನ್ಸ್ D Creations ಬ್ಯಾನರ್ ಅಡಿಯಲ್ಲಿ ದೇವರಾಜ್ ಆರ್ Devaraj R ಅವರು ನಿರ್ಮಿಸಿರುವ ಈ ಚಿತ್ರದಲ್ಲಿ, ನಾಯಕನಾಗಿ ವಿಜಯ್ ಕೃಷ್ಣ Vijay Krishna ಮತ್ತು ನಾಯಕಿಯಾಗಿ ಪ್ರಿಯಾಂಕಾ ಕುಮಾರ್ Priyanka Kumar ನಟಿಸಿದ್ದಾರೆ. ಸಿನಿಮಾಗೆ ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ, ಚೇತನಾ ತೀರ್ಥಹಳ್ಳಿ ಸಂಭಾಷಣೆಯಿದೆ. ನಾಗೇಂದ್ರ ಕೆ ಉಜ್ಜನಿ ಅವರ ಸಂಕಲನವಿದೆ. ಬೆಂಗಳೂರಿನಿಂದ ಗೋವಾಗೆ ಪ್ರಯಾಣಿಸುವ ಇಬ್ಬರು ಯುವ ಪ್ರೇಮಿಗಳ ಕಥೆಯನ್ನು ಚಿತ್ರ ಸ್ವಾರಸ್ಯಪೂರ್ಣವಾಗಿ ಹೇಳುತ್ತದಂತೆ. ಈ ಯಾನವೇ ಒಂದು ಸೊಗಸಾದ ಕತೆಯಾಗಿ ಬದುಕಿಗೆ ಅರ್ಥವಾಗಿ ಪ್ರೇಕ್ಷಕರೆದುರು ಮೂಡಿಬರಲಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ...

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...