- ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾದ ಟ್ರೇಲರ್ ನಾಳೆ ರಿಲೀಸ್!
- ಡಿಸೆಂಬರ್ 25 ರಂದು ಸಿನಿಮಾ ತೆರೆಗೆ ..
ನಟ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಡಿಸೆಂಬರ್ 25ರಂದು ಕ್ರಿಸ್ಮಸ್ ಗಿಫ್ಟ್ ಆಗಿ ಮ್ಯಾಕ್ಸ್ ಸಿನಿಮಾ Max Movie ಬಿಡುಗಡೆ ಆಗಲಿದೆ. ಎರಡೂವರೆ ವರ್ಷಗಳ ಬಳಿಕ ನಟ ಸುದೀಪ್ ತೆರೆ ಮೇಲೆ ಅಬ್ಬರಿಸಲು ಬರ್ತಿದ್ದು, ಕಿಚ್ಚನ ಆರ್ಭಟ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಒಂದು ರಾತ್ರಿಯಲ್ಲಿ ನಡೆಯೋ ರೋಚಕ ಕಥೆಯೇ ಮ್ಯಾಕ್ಸ್ ಸಿನಿಮಾ ಆಗಿದೆ. ಮ್ಯಾಕ್ಸ್ ಸಿನಿಮಾ ಡಿಸೆಂಬರ್ 25ಕ್ಕೆ ಅದ್ಧೂರಿಯಾಗಿ ತೆರೆಗೆ ಬರಲಿದೆ.

ಟ್ರೇಲರ್ ಗಾಗಿ ಕಾಯ್ತಿದ್ದ ಫ್ಯಾನ್ಸ್ಗೆ ಕಿಚ್ಚ ಗುಡ್ ನ್ಯೂಸ್;
ಮ್ಯಾಕ್ಸ್ ಸಿನಿಮಾ ರಿಲೀಸ್ ಡೇಟ್ ಹತ್ತಿರ ಬರ್ತಿದ್ದಂತೆ ನಟ ಸುದೀಪ್ ಅಬ್ಬರದ ಪ್ರಚಾರ ಮಾಡಿದ್ದಾರೆ. ಇದರ ನಡುವೆ ಮ್ಯಾಕ್ಸ್ ಸಿನಿಮಾ ಟ್ರೇಲರ್ ಗಾಗಿ ಕಾಯ್ತಿದ್ದ ಫ್ಯಾನ್ಸ್ಗೆ ಕಿಚ್ಚ ಗುಡ್ ನ್ಯೂಸ್ ನೀಡಿದ್ದಾರೆ. ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ಡೇಟ್ ರಿಲೀಸ್ ಮಾಡಿದ್ದು, ‘ಮ್ಯಾಕ್ಸ್’ ಸಿನಿಮಾದ ಟ್ರೇಲರ್ ಡಿಸೆಂಬರ್ 22ರಂದು ಬೆಳಿಗ್ಗೆ 11:08 ಕ್ಕೆ ಬಿಡುಗಡೆ ಆಗಲಿದೆ. ಮ್ಯಾಕ್ಸ್ ಟ್ರೇಲರ್ ಹೇಗಿರಬಹುದು, ಯಾವೆಲ್ಲ ವಿಚಾರ ಟ್ರೇಲರ್ನಲ್ಲಿ ಬಹಿರಂಗವಾಗಬಹುದು ಎಂದು ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.