ಈ ವಾರ ಓಟಿಟಿಗೆ ಎಂಟ್ರಿ ಕೊಡುತ್ತಿದೆ ಎರಡು ಬಹುನಿರೀಕ್ಷಿತ ಸಿನಿಮಾಗಳು – Two of the Most Awaited Movies are Finally Entering OTT This Week

Date:

• ಮಳೆಗಾಲದಲ್ಲಿ ಮನೆಯಲ್ಲಿಯೇ ಬಿಂದಾಸ್ ಮನರಂಜನೆ
• ಒಂದು ಆಕ್ಷನ್ ಇನ್ನೊಂದು ಅಪರೂಪದ ಕಥಾಹಂದರ

ಹೇಳಿ ಕೇಳಿ ಇದು ಮಳೆಗಾಲ, ಈ ಮಳೆಗಾಲದಲ್ಲಿ ಮನೆಯಲ್ಲಿಯೇ ಕುಳಿತು ಓಟಿಟಿಯಲ್ಲಿ ಸವಿಯಬಹುದಾದ ಸಿನಿಮಾಗಳು ರಿಲೀಸ್ ಆಗಿದೆ. ಬನ್ನಿ ಆ ಸಿನಿಮಾಗಳು ಯಾವುದು ನೋಡೋಣ.

‘ಡೆವಿಲ್’ Devil

ದರ್ಶನ್ ಅಭಿನಯದ, ಪ್ರಕಾಶ್ ನಿರ್ಮಿಸಿ, ನಿರ್ದೇಶಿಸಿರುವ ಆಕ್ಷನ್ ಥ್ರಿಲ್ಲರ್ ‘ಡೆವಿಲ್’ ಸಿನಿಮಾ ಜುಲೈ 17ರಿಂದ ಜೀ5ನಲ್ಲಿ zee5 ಸ್ಟ್ರೀಮಿಂಗ್ ಆರಂಭಿಸಿದೆ. ಚಿತ್ರದಲ್ಲಿ ದರ್ಶನ್ Darshan ದ್ವಿಪಾತ್ರದಲ್ಲಿ ಅಭಿನಯಿಸಿದ್ದು, ರಚನಾ ರೈ Rachana Rai ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಕಳೆದ ವರ್ಷ ಡಿಸೆಂಬರ್ 11ರಂದು ಬಿಡುಗಡೆಯಾಗಿದ್ದ ಈ ಸಿನಿಮಾ, ರೇಣುಕಾಸ್ವಾಮಿ ಪ್ರಕರಣದ ಹಿನ್ನೆಲೆಯಲ್ಲಿ ದರ್ಶನ್ ಜೈಲಿನಲ್ಲಿದ್ದ ವೇಳೆ ಅವರ ಅನುಪಸ್ಥಿತಿಯಲ್ಲೇ ತೆರೆ ಕಂಡಿತ್ತು. ಆರಂಭಿಕ ದಿನಗಳಲ್ಲಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದರೂ, ಬಳಿಕ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣಲಿಲ್ಲ. ಇದೀಗ ಬಹಳ ತಡವಾಗಿ ಓಟಿಟಿಗೆ ಬಂದಿದೆ.

‘ಪೆದ್ದಿ’ Peddi

ರಾಮ್ ಚರಣ್ ಅಭಿನಯದ ಬ್ಲಾಕ್ಬಸ್ಟರ್ ಸ್ಪೋರ್ಟ್ಸ್ ಡ್ರಾಮಾ ‘ಪೆದ್ದಿ’ ಕೂಡ ಓಟಿಟಿಗೆ ಕಾಲಿಟ್ಟಿದೆ. ಇದು ತಮಿಳು ಭಾಷೆಯ ಚಿತ್ರ. ಜೂನ್ 4ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಇದೀಗ ನೆಟ್ ಫ್ಲಿಕ್ಸ್ ನಲ್ಲಿ Netflix ಸ್ಟ್ರೀಮಿಂಗ್ ಆಗುತ್ತಿದೆ.

ಬೆಟ್ಟಗುಡ್ಡಗಳ ನಡುವಿನ ಬುಡಕಟ್ಟು ಜನರ ಬದುಕು, ಅವರ ಅಸ್ತಿತ್ವ ಮತ್ತು ಹಕ್ಕುಗಳಿಗಾಗಿ ನಾಯಕ ‘ಪೆದ್ದಿ’ ನಡೆಸುವ ಹೋರಾಟ ಚಿತ್ರದ ಮುಖ್ಯ ಕಥಾಹಂದರವಾಗಿದೆ.
ಚಿತ್ರ ಬಿಡುಗಡೆಯ ವೇಳೆ ನಾಯಕಿ ಪಾತ್ರದ ನಿರೂಪಣೆ ಹಾಗೂ ಕೆಲವು ದೃಶ್ಯಗಳ ಬಗ್ಗೆ ವಿವಾದ ವ್ಯಕ್ತವಾಗಿತ್ತು. ಓಟಿಟಿ ಆವೃತ್ತಿಯಲ್ಲಿ ಆ ದೃಶ್ಯಗಳಲ್ಲಿ ಅಗತ್ಯ ಬದಲಾವಣೆಗಳನ್ನು ಚಿತ್ರತಂಡ ಮಾಡಿದೆ ಎನ್ನಲಾಗಿದೆ. ‘ಪೆದ್ದಿ’ ಕನ್ನಡ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಓಟಿಟಿಯಲ್ಲಿ ಸದ್ದು ಮಾಡ್ತಿವೆ ಈ ಸೂಪರ್ ಹಿಟ್ ಚಿತ್ರಗಳು

ಜೂನ್ ಮಳೆಯೊಂದಿಗೆ ಆನಂದಿಸಬಹುದಾದ ಇಂಟರೆಸ್ಟಿಂಗ್ ಸಿನಿಮಾಗಳು ಆಕ್ಷನ್, ಕಾಮಿಡಿ, ಸಖತ್ ಥ್ರಿಲ್ಲರ್ ಮೂವಿಗಳದ್ದೇ...

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್ ರಂಗಭೂಮಿಯಿಂದ ಕಲಾಯಾತ್ರೆ ಆರಂಭಿಸಿ...

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ ಯುವ ಸಂಗೀತ ನಿರ್ದೇಶಕನ...

ಮಧುರ ಮಧುರವೀ ಹಾಸ್ಯ ಗಾನ- ನಗು ಹುಟ್ಟಿಸುವ ಹಾಡುಗಳ ಲಿಸ್ಟ್ ಇಲ್ಲಿದೆ

ಮಧುರ ಮಧುರವೀ ಹಾಸ್ಯ ಗಾನ- ನಗು ಹುಟ್ಟಿಸುವ ಹಾಡುಗಳ ಲಿಸ್ಟ್ ಇಲ್ಲಿದೆ...