ಸದ್ಯದಲ್ಲೇ ರಿಲೀಸ್ ಆಗಲಿದೆ “ಫುಲ್ ಮೀಲ್ಸ್” ಮೂವೀ ಟ್ರೈಲರ್

Date:

  • ಸದ್ಯದಲ್ಲೇ ರಿಲೀಸ್ ಆಗಲಿದೆ “ಫುಲ್ ಮೀಲ್ಸ್” ಮೂವೀ ಟ್ರೈಲರ್
  • ಸಂಕಷ್ಟಕರ ಗಣಪತಿ, ಫ್ಯಾಮಿಲಿ ಪ್ಯಾಕ್, ಅಬ್ಬಬ್ಬ ಖ್ಯಾತಿಯ ನಟ ಲಿಖಿತ್ ಶೆಟ್ಟಿ ಹೊಸಸಿನಿಮಾ “ಫುಲ್ ಮೀಲ್ಸ್”
  • ಸದ್ಯದಲ್ಲೇ ಹೊರಬರಲಿದೆ ಮೂವೀ ಟ್ರೇಲರ್

ವಿಭಿನ್ನವಾದ ಕತೆಯೊಂದು ಪ್ರೇಕ್ಷಕರೆದುರಿಗೆ ಫುಲ್ ಮೀಲ್ಸ್ Full Meals Movie ಚಿತ್ರದ ಮೂಲಕ ತೆರೆದುಕೊಳ್ಳಲಿದ್ದು, ಚಿತ್ರದುರ್ಗದ ಎನ್. ವಿನಾಯಕ Chitradurga N Vinayaka ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ನಾಯಕ ನಟನಾಗಿ ಅಭಿನಯಿಸಿರುವ ಲಿಖಿತ್ ಶೆಟ್ಟಿ Likith Shetty ಅವರೇ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ತುಣುಕೊಂದು ಬಿಡುಗಡೆಯಾಗಿದ್ದು, ಸದ್ಯದಲ್ಲೇ ಟ್ರೈಲರ್ ಹೊರಬರುವ ಕುರಿತು ಮಾಹಿತಿ ನೀಡಿದೆ ಚಿತ್ರತಂಡ.

ತ್ರಿಕೋನ ಪ್ರೇಮಕಥೆಯ ಸಿನಿಮಾ

ವೆಡ್ಡಿಂಗ್ ಫೋಟೋಗ್ರಾಫರ್ ಆಗಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ನಾಯಕ ಲಿಖಿತ್ ಶೆಟ್ಟಿ. ತೇಜಸ್ವಿನಿ ಶರ್ಮ Thejaswani Sharma ಮತ್ತು ಖುಷಿ ರವಿ Kushi Ravi ಇಬ್ಬರು ನಾಯಕ ನಟಿಯರಾಗಿದ್ದು ಇದೊಂದು ತ್ರಿಕೋನ ಪ್ರೇಮಕತೆಯಾಗಿರಲಿದೆ.

ಸಿನಿಮಾಗೆ ಇದೆ ಇವರೆಲ್ಲರ ಕೈಚಳಕ

ಹರೀಶ್ ಗೌಡ ಅವರ ಸಂಭಾಷಣೆ, ಗುರುಕಿರಣ್ ಸಂಗೀತ, ಮನೋಹರ ಜೋಷಿ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ. ಉಳಿದಂತೆ ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ. ರಂಗಾಯಣ ರಘು, ರಾಜೇಶ್ ನಟರಂಗ, ವಿಜಯ್ ಚಂಡೂರ್ ಸೇರಿದಂತೆ ಹಲವು ದಿಗ್ಗಜರ ಬಳಗವೇ ತಾರಾಗಣದಲ್ಲಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಗೆ ಎಂಟ್ರಿ ಕೊಡುತ್ತಿದೆ ಎರಡು ಬಹುನಿರೀಕ್ಷಿತ ಸಿನಿಮಾಗಳು – Two of the Most Awaited Movies are Finally Entering OTT This Week

• ಮಳೆಗಾಲದಲ್ಲಿ ಮನೆಯಲ್ಲಿಯೇ ಬಿಂದಾಸ್ ಮನರಂಜನೆ• ಒಂದು ಆಕ್ಷನ್ ಇನ್ನೊಂದು ಅಪರೂಪದ...

ಓಟಿಟಿಯಲ್ಲಿ ಸದ್ದು ಮಾಡ್ತಿವೆ ಈ ಸೂಪರ್ ಹಿಟ್ ಚಿತ್ರಗಳು

ಜೂನ್ ಮಳೆಯೊಂದಿಗೆ ಆನಂದಿಸಬಹುದಾದ ಇಂಟರೆಸ್ಟಿಂಗ್ ಸಿನಿಮಾಗಳು ಆಕ್ಷನ್, ಕಾಮಿಡಿ, ಸಖತ್ ಥ್ರಿಲ್ಲರ್ ಮೂವಿಗಳದ್ದೇ...

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್

ಅಭಿನಯದ ಮೂಲಕ ಅಮರ ನಟ, ನಿರ್ಮಾಪಕ ದಿಲೀಪ್ ರಾಜ್ ರಂಗಭೂಮಿಯಿಂದ ಕಲಾಯಾತ್ರೆ ಆರಂಭಿಸಿ...

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ

ಸಿನಿಮಾ ಸಂಗೀತ ನಿರ್ದೇಶನಕ್ಕೆ ಹೊಸ “ಪ್ರಣವ” ರಾಗ ಯುವ ಸಂಗೀತ ನಿರ್ದೇಶಕನ...