ನಟ, ನಿರ್ದೇಶಕ ವಿಶ್ವಪ್ರಕಾಶ ಮಲಗೊಂಡಗೆ “ಬೆಸ್ಟ್ ಆಕ್ಟರ್” ಅವಾರ್ಡ್

Date:

  • ನಟ, ನಿರ್ದೇಶಕ ವಿಶ್ವಪ್ರಕಾಶ ಮಲಗೊಂಡಗೆ “ಬೆಸ್ಟ್ ಆಕ್ಟರ್” ಅವಾರ್ಡ್
  • “ತುಷಾರ್” ಸಿನೆಮಾದ ನಟ, ನಿರ್ದೇಶಕ ವಿಶ್ವಪ್ರಕಾಶ್ ಮಲಗೊಂಡಗೆ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ
  • 150 ಕ್ಕೂ ಹೆಚ್ಚು ಚಿತ್ರಗಳು ಭಾಗವಹಿಸಿದ್ದ ಉತ್ಸವದಲ್ಲಿ ತುಷಾರ್ ಚಿತ್ರಕ್ಕೆ ಪ್ರಶಸ್ತಿ

ಡಿ.15 ರಂದು ಬೆಂಗಳೂರಿನ ವೈಟ್ ಫೀಲ್ಡ್ ನ ಎಸ್ಸಾಟೋ ರಿಕ್ರಿಯೇಷನ್ ಹಬ್ ನಲ್ಲಿ ನವ ಕರ್ನಾಟಕ ಚಲನಚಿತ್ರೋತ್ಸವ ಅಕಾಡೆಮಿ ಹಾಗೂ ಯುನಿವರ್ಸಲ್ ಫೀಲಂ ಕೌನ್ಸಿಲ್ ಆಯೋಜಿಸಿದ್ದ ನಾಲ್ಕನೆಯ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2024 ದಲ್ಲಿ ವಿಜಯಪುರದ Vijayapura ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ Vishwaprakash T Malagonda ಅವರಿಗೆ “ಬೆಸ್ಟ್ ಆಕ್ಟರ್” ಅವಾರ್ಡ್ ನೀಡಲಾಯಿತು.

ಸುಮಾರು 150 ಕ್ಕೂ ಅಧಿಕ ಚಿತ್ರಗಳು ಪಾಲ್ಗೊಂಡಿದ್ದ ಈ ಸ್ಪರ್ಧೆಗೆ ವಿಶ್ವಪ್ರಕಾಶ್ ನಟಿಸಿ, ನಿರ್ದೇಶಿಸಿದ್ದ “ತುಷಾರ್” Tushar Movie ಚಿತ್ರವೂ ಭಾಗವಹಿಸಿತ್ತು.

ಹಿರಿಯ ಕಲಾವಿದರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮ

ನಿರ್ದೇಶಕ ಎಂ ಎ ಮುಮ್ಮಿಗಟ್ಟಿ, ಹಿರಿಯ ಕಲಾವಿದ ಸುಂದರ ರಾಜ್, ಆಂಧ್ರಪ್ರದೇಶ ಫೀಲಂ ಚೆಂಬರ್ ಅಧ್ಯಕ್ಷ ಅಂಬಾಟಿ ಮಧು ಮೋಹನ ಕೃಷ್ಣ, ನಿರ್ಮಾಪಕ ಕಲ್ಮೇಶ ಹಾವೇರಿಪೇಟ, ಅವರು ವಿಶ್ವಪ್ರಕಾಶ ಮಲಗೊಂಡ ಅವರಿಗೆ ಅತ್ಯುತ್ತಮ ನಟನೆಂದು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ಕೆಜಿಎಫ್ ಸಿನಿಮಾ ಸಾಹಿತ್ಯ ರಚನೆಕಾರ ಹಾಗೂ ನಿರ್ದೇಶಕ ಕಿನ್ನಾಳ ರಾಜ, ದಿಲೀಪ್ ಕುಮಾರ್, ಜಮ್ಮು ಕಾಶ್ಮಿರ ಜಯೇಶ ಗುಪ್ತಾ, ಪ್ರಭುರಾಮ ರೆಡ್ಡಿ, ಸೂಪರ್ ಸ್ಟಾರ್ ಸಂಪಾದಕ ಅಸ್ಲಾಂ, ಆನಂದ ಗುಪ್ತಾ, ನಿರ್ದೇಶಕ ನಿರ್ಮಾಪಕ ಸುನೀಲ್ ಕುಮಾರ್ ಮುಂತಾದ ಹಿರಿಯ ಕಲಾವಿದರು, ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು, ಉದ್ದಿಮೆದಾರರು ಉಪಸ್ಥಿತರಿದ್ದರು. ವಿಶ್ವನಾಥ ಪಲ್ಲೇದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ...

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...