- INCA ರಾಷ್ಟ್ರೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ: ಕನ್ನಡದಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡ ಕಾಂತಾರ ಚಾಪ್ಟರ್ -1
- ಹನ್ನೆರಡು ಭಾಷೆಗಳು ಮತ್ತು ಹನ್ನೆರಡು ಚಲನಚಿತ್ರೋದ್ಯಮಗಳನ್ನು ಪ್ರತಿನಿಧಿಸುವ ಸಮಗ್ರ ವೇದಿಕೆ INCA
- ಭಾರತೀಯ ಚಲನಚಿತ್ರೋದ್ಯಮದ ಅನುಭವಿ ಸದಸ್ಯರನ್ನು ಒಳಗೊಂಡಿದೆ ತೀರ್ಪುಗಾರರ ಸಮಿತಿ
ಭಾರತೀಯ ರಾಷ್ಟ್ರೀಯ ಚಲನಚಿತ್ರ ಅಕಾಡೆಮಿಯು INCA Awards–2026ರ ಮೊದಲ ಅವಾರ್ಡ್‌ಗಳ ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಶಸ್ತಿಗಳು 12 ಭಾಷೆಗಳು ಹಾಗೂ 12 ಚಲನಚಿತ್ರ ಕ್ಷೇತ್ರಗಳನ್ನು ಒಳಗೊಂಡಿದ್ದು, ಒಟ್ಟು 25 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ.
ಕನ್ನಡ ವಿಭಾಗದಲ್ಲಿ ಎಲ್ಲಾ ಪ್ರಮುಖ ಪ್ರಶಸ್ತಿಗಳನ್ನು ರಿಷಬ್ ಶೆಟ್ಟಿ Rishabh Shetty ಅವರ ಕಾಂತಾರ – ಎ ಲೆಜೆಂಡ್ – ಚಾಪ್ಟರ್ 1 Kanthara Chapter 1 ಚಿತ್ರ ಪಡೆದುಕೊಂಡಿದೆ. ಉತ್ತಮ ಕನ್ನಡ ಚಿತ್ರವಾಗಿ ಹೊಂಬಾಳೆ ಫಿಲಂಸ್‌ನ Hombale Films ಈ ಸಿನಿಮಾವನ್ನು ಆಯ್ಕೆ ಮಾಡಲಾಗಿದೆ. ಇದೇ ಚಿತ್ರದ ಮೂಲಕ ರಿಷಬ್ ಶೆಟ್ಟಿ ಉತ್ತಮ ನಟ ಪ್ರಶಸ್ತಿಯನ್ನು ಗಳಿಸಿದ್ದಾರೆ. ಚಿತ್ರದ ನಾಯಕಿ ರುಕ್ಮಿಣಿ ವಸಂತ್ Rukmini Vasanth ಅವರಿಗೆ ಉತ್ತಮ ನಟಿ ಪ್ರಶಸ್ತಿ ಲಭಿಸಿದೆ. ಜೊತೆಗೆ, ಉತ್ತಮ ನಿರ್ದೇಶಕರಾಗಿ ರಿಷಬ್ ಶೆಟ್ಟಿಯವರೇ ಗೌರವಿಸಲ್ಪಟ್ಟಿದ್ದಾರೆ.
INCA ಪ್ರಶಸ್ತಿ ಪ್ರದಾನ ಸಮಾರಂಭವು ಏಪ್ರಿಲ್ 16ರಂದು ಮುಂಬೈನಲ್ಲಿ ನಡೆಯಲಿದೆ. ದೇಶಾದ್ಯಂತದ ಪ್ರಮುಖ ನಿರ್ದೇಶಕರು, ನಟರು, ತಂತ್ರಜ್ಞರು ಮತ್ತು ನಿರ್ಮಾಪಕರು ಭಾಗವಹಿಸುವ ಈ ಸಮಾರಂಭವು ಭಾರತೀಯ ಚಲನಚಿತ್ರೋದ್ಯಮಕ್ಕೆ ಒಂದು ಪ್ರಮುಖ ಕಾರ್ಯಕ್ರಮವಾಗಲಿದೆ.


